ಕಾನೂನು ಬಾಹಿರ ಚಟುವಟಿಕೆ ಮಾಡುವ ಸಂಘಟನೆ ವಿರುದ್ದ ಕಠಿಣ ಕ್ರಮಕ್ಕೆ ಬೆಂಬಲ: ಹೆಚ್​ಡಿಕೆ

author img

By

Published : Sep 29, 2022, 6:52 PM IST

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಸರ್ವ ಜನಾಂಗದ ಶಾಂತಿಗೋಸ್ಕರ ಕಠಿಣ ಕ್ರಮಕೈಗೊಳ್ಳಲು ಸಹಮತವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಕೋಲಾರ : ದೇಶದಲ್ಲಿ ಅಶಾಂತಿಯುಂಟು ಮಾಡುವ ಹಾಗೂ ಕಾನೂನು ಬಾಹಿರ ಚಟುವಟಿಕೆ ಮಾಡುವ ಯಾವುದೇ ಸಂಘಟನೆಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಲು ನನ್ನ ಮತ್ತು ನಮ್ಮ‌ಪಕ್ಷದ ಬೆಂಬಲ ಇದೆ ಎಂದು ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇಂದು ಕೋಲಾರಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಗಳು ನಿರ್ಧಾರಗಳನ್ನ ತೆಗೆದುಕೊಳ್ಳುವ ಮೊದಲು ಸಂಘಟನೆಗಳು ಮಾಡುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ರಾಜ್ಯದ ಜನತೆ ಮುಂದಿಟ್ಟು, ಸರ್ವಜನಾಂಗದ ಶಾಂತಿಗೋಸ್ಕರ ಕಠಿಣ ಕ್ರಮಕೈಗೊಳ್ಳಲು ಸಹಮತವಿದೆ ಎಂದರು. ಅಲ್ಲದೇ, ಸಂಘಟನೆ ಬ್ಯಾನ್ ಮಾಡಿದ ತಕ್ಷಣ ಶಾಂತಿ ನೆಲೆಸುತ್ತದೆ ಎಂದು ನಾನು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ ಎಂದರು.

ಇನ್ನು 800 ವರ್ಷಗಳ ಕಾಲ‌ ದೇಶ‌‌ವನ್ನ ಆಳಿದ ಮೊಘಲರ ಕೈನಲ್ಲಿಯೇ, ಹಿಂದೂ ರಾಷ್ಟ್ರವನ್ನ ಇಸ್ಲಾಂ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಯಾವುದೋ ಒಂದು ಸಂಘಟನೆ ಹಿಂದೂ ರಾಷ್ಟ್ರ ಮಾಡುವುದಾ? ಎಂದರು. ಇನ್ನು ಬಲಾಢ್ಯ ಹಿಂದೂ ರಾಷ್ಟ್ರವನ್ನ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದ ಅವರು, ಏನೋ ಒಂದು ಕಾರಣಗಳನ್ನ ಕೊಟ್ಟು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಬಾರದು. ಹೀಗಾಗಿ, ಇರುವ ವಾಸ್ತವಾಂಶಗಳನ್ನ ಜನರ ಮುಂದೆ ಇಟ್ಟು ಎಲ್ಲ ಸಮುದಾಯಗಳ ವಿಶ್ವಾಸವನ್ನ ಮೂಡಿಸುವುದು ಸರ್ಕಾರದ ಕರ್ತವ್ಯ ಎಂದರು.

ಹಣ ಯಾರಿಗೆ ಹೋಗಿದೆ ತನಿಖೆ ಮಾಡಿ: ಇನ್ನು ಪಿಎಫ್​ಐ ಅಕೌಂಟ್​ಗಳ ಜಪ್ತಿ ಕುರಿತು ಮಾತನಾಡಿದ ಅವರು, ಪಿಎಫ್​ಐ ಅಕೌಂಟ್​ಗಳ ಕುರಿತು ಮಾತನಾಡುವ ಸರ್ಕಾರ, ಬಿಜೆಪಿ ನಾಯಕರುಗಳ ಅಕೌಂಟ್ ಗೆ ಬಂದಿರುವ ದುಡ್ಡಿನ ಕುರಿತು ಯಾಕೆ ಮಾತನಾಡುತ್ತಿಲ್ಲ. ಇದೇ ಹಣವನ್ನೇ ಬಿಜೆಪಿ ನಾಯಕರು ಖರ್ಚು ಮಾಡುತ್ತಿದ್ದಾರೆ ಎಂದರು. ಅದಕ್ಕೆ ಪೂರಕವಾಗಿ ಪಿಎಂಎಸ್ ಅವ್ಯವಹಾರದಲ್ಲಿ ನಡೆದಿರುವ ಹಣ ಯಾರಿಗೆ ಹೋಗಿದೆ ತನಿಖೆ ಮಾಡಿ ಎಂದು ಹೇಳಿದರು.

ಜನತೆಗೆ ಅವಶ್ಯಕತೆ ಇಲ್ಲ: ಪೇ ಸಿಎಂ ಕುರಿತಾದ ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರುಗಳ ಚಟುವಟಿಕೆಗಳು ನಮ್ಮ ನಾಡಿನ ಜನತೆಗೆ ಅವಶ್ಯಕತೆ ಇಲ್ಲ. ಇಲ್ಲಿ ಬೇಕಿರುವುದು ರೈತರಿಗೆ ಸಲ್ಲಬೇಕಿರುವ ಪರಿಹಾರ ಕುರಿತು ಎಂದು ಕೋಲಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ರು‌.

ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೇಸಿಎಂ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರುಗಳ ನಡುವೆ ಕೌಂಟರ್ ಗಳು ನಡೆಯುತ್ತಿವೆ. ಅದನ್ನ ಕಟ್ಟಿಕೊಂಡು ನಮಗೇನು ಆಗಬೇಕು. ರೈತರಿಗೆ ಪರಿಹಾರ ಒದಗಿಸುವುದರ ಕುರಿತು ನೋಡಬೇಕಾಗಿದೆ. ಇನ್ನು ಕಾಂಗ್ರೆಸ್​ ಜೋಡೊ ಯಾತ್ರೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷ ಯಾವುದೋ ಒಂದು ವಿಷಯವನ್ನ‌ ಇಟ್ಟುಕೊಂಡು ಹೊರಟಿದ್ದಾರೆ. ಆದರೆ, ಅದ್ಯಾವುದು ಉಪಯೋಗಕ್ಕೆ ಬರುವುದಿಲ್ಲ ಎಂದು ಹೇಳಿದ್ರು‌.

ರಾಜಕೀಯ ವಿಶ್ಲೇಷಕನೂ ಅಲ್ಲ: ಇನ್ನು ಸಂಘಟನಾ ದೃಷ್ಟಿಯಿಂದ ಅವರ ಪಕ್ಷ ರಾಷ್ಟ್ರೀಯ ಪಕ್ಷ ಅದಕ್ಕಾಗಿ ಮಾಡುತ್ತಿದ್ದಾರೆ. ಇನ್ನು ಜೋಡೋ ಯಾತ್ರೆಯಿಂದ ಪರಿಣಾಮ ಬೀರುತ್ತದೆ ಇಲ್ಲವೋ ಎಂದು ಹೇಳುವುದಕ್ಕೆ ನಾನು ಜ್ಯೋತಿಷ್ಯಗಾರನಲ್ಲ, ರಾಜಕೀಯ ವಿಶ್ಲೇಷಕನೂ ಅಲ್ಲ ಎಂದು ಹೇಳಿದ್ರು. ಅಲ್ಲದೆ ಭಾರತ ಏನೂ ಒಡೆದು ಹೋಗಿದ್ಯ ಎಂದು ಪ್ರಶ್ನಿಸಿದ ಅವರು, ಭಾರತ ಏನಾದರೂ ಛಿದ್ರವಾಗಿದ್ದರೆ ನಾವು ಸಹ ಕೈ ಜೋಡಿಸೋಣ. ಹೆಸರಿಟ್ಟ ತಕ್ಷಣ ಒಗ್ಗೂಡುತ್ತದೆಯೇ ಎಂದರು. ಇದು ಭಾರತ ಜೋಡೊ ಅಲ್ಲ ಕಾಂಗ್ರೆಸ್​ ಜೋಡೊ ಅಷ್ಟೇ. ಅವರ ಪಕ್ಷದಲ್ಲಿ ಒಡೆದೋಗಿರುವುದನ್ನ ಸರಿ ಮಾಡಲು ಭಾರತ ಜೊಡೊ ಹೆಸರನ್ನ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

ಓದಿ: ಸಿದ್ದರಾಮಯ್ಯ ಪಿಎಫ್​ಐ ಬ್ಯಾನ್ ವಿರೋಧಿಸಿದರೆ ಜನರೇ ಒದೆಯುತ್ತಾರೆ: ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.