ಕೋಲಾರದಲ್ಲಿ ಧಾರಾಕಾರ ಮಳೆಗೆ ಬೆಳೆ ನೀರುಪಾಲು; ಅನ್ನದಾತ ಕಂಗಾಲು

author img

By

Published : Aug 26, 2021, 9:44 AM IST

Crop land flooded after heavy rain at Kolar area

ಕೋಲಾರದ ಕೆಲವು ತಾಲೂಕುಗಳಲ್ಲಿ ಮಳೆಯಾರ್ಭಟ ಜೋರಾಗಿದೆ. ವರ್ಷಧಾರೆ ರೈತರಿಗೆ ಸಮಸ್ಯೆ ತಂದೊಡ್ಡಿದೆ.

ಕೋಲಾರ: ಜಿಲ್ಲೆಯ ಹಲವೆಡೆ ಸುರಿದಿರುವ ಮಳೆಯಿಂದಾಗಿ ರೈತರು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಜಲಾವೃತಗೊಂಡಿವೆ. ಮಳೆನೀರು ಬೆಳೆಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಮುಳುಗಡೆಯಾಗಿದೆ.

ತಾಲೂಕಿನ ನರಸಾಪುರ ಹಾಗೂ ವೇಮಗಲ್ ಸುತ್ತಮುತ್ತ ಮಧ್ಯರಾತ್ರಿ ಭಾರಿ ಮಳೆಯಾಗಿದ್ದು ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರಾಜಕಾಲುವೆ ಹಾಗೂ ಹಳ್ಳಕೊಳ್ಳದ ನೀರು ನೇರವಾಗಿ ರೈತರ ತೋಟಗಳಿಗೆ ನುಗ್ಗಿದ್ದು, ಬೆಳೆ ನಷ್ಟವಾಗಿದೆ.

ಧಾರಾಕಾರ ಮಳೆಗೆ ಬೆಳೆ ನಷ್ಟ

ಮಳೆ ನೀರಿನೊಂದಿಗೆ ಕೆ.ಸಿ ವ್ಯಾಲಿ ನೀರೂ ಸೇರಿದ್ದು ನರಸಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಭತ್ತ, ರಾಗಿ, ಟೊಮ್ಯಾಟೋ ಬೆಳೆಗಳು ನೀರಿನಲ್ಲಿ ಮುಳುಗಿದೆ. ಬೆಳೆ ಕಳೆದುಕೊಂಡ ರೈತರು ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಮೊಬೈಲ್​ಗಾಗಿ ಕೂಲಿ ಕೆಲಸ ಮಾಡಿದ ಬಾಲಕ: ವಿದ್ಯೆಗಾಗಿ ಭೂಮಿ ನಂಬಿದ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.