ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ.. ಉಸಿರುಗಟ್ಟಿ ಏಳು ಜಾನುವಾರು ಸಾವು?

author img

By

Published : Sep 28, 2021, 10:34 AM IST

ಗೋವುಗಳ ರಕ್ಷಣೆ

ಎರಡು ಲಾರಿಗಳಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಕ್ಕೂ ಹೆಚ್ಚು ಜಾನುವಾರುಗಳನ್ನು ವೇಮಗಲ್ ಠಾಣಾ ಪೊಲೀಸರು ರಕ್ಷಿಸಿದ್ದಾರೆ.

ಕೋಲಾರ: ಗೋವುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಗೋವುಗಳ ರಕ್ಷಣೆ

ತಾಲೂಕಿನ ಚಾಕರಸನಹಳ್ಳಿ ಗ್ರಾಮದಲ್ಲಿ ಈ ಘಟ‌ನೆ ಜರುಗಿದ್ದು, ಎರಡು ಲಾರಿಗಳಲ್ಲಿರುವ ಗೋವುಗಳನ್ನ ವೇಮಗಲ್ ಪೊಲೀಸರು ರಕ್ಷಿಸಿದ್ದಾರೆ. ಕಳೆದ ರಾತ್ರಿ ಚಾಕಾರಸನಹಳ್ಳಿ ಮಾರ್ಗವಾಗಿ ಎರಡು ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ, ಅನುಮಾನಗೊಂಡ ಗ್ರಾಮಸ್ಥರು ಲಾರಿಗಳನ್ನ ಪರಿಶೀಲಿಸಿದಾಗ ಗೋವುಗಳು ಇರುವುದು ಕಂಡು ಬಂದಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳಿದ್ದ ಹಿನ್ನೆಲೆ, ಉಸಿರುಗಟ್ಟಿ ಏಳು ಹಸುಗಳು ಮೃತಪಟ್ಟಿವೆ ಎನ್ನಲಾಗಿದೆ.

ಇದನ್ನೂ ಓದಿ: ಮಂಗಳೂರು: ನೈತಿಕ ಪೊಲೀಸ್ ಗಿರಿ ಆರೋಪ.. ವೈರಲ್ ವಿಡಿಯೋ ಆಧರಿಸಿ ಐವರ ಬಂಧನ

ಅಲ್ಲದೆ ಆರೋಪಿಗಳು, C.G.08, U.8324 ಹಾಗೂ EG.05, AB.1645 ನಂಬರಿನ ಎರಡು ಲಾರಿಗಳಲ್ಲಿ ಗೋವುಗಳನ್ನ ತುಂಬಿಕೊಂಡು ಹೋಗುತ್ತಿದ್ದರು. ಗ್ರಾಮಸ್ಥರ ಸಹಾಯದಿಂದ ವೇಮಗಲ್ ಪೊಲೀಸರು ಎರಡು ಲಾರಿಗಳನ್ನ ವಶಕ್ಕೆ ಪಡೆದು ಗೋವುಗಳನ್ನ ರಕ್ಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.