ದೇಶ ವಿಭಜಿಸುವ ಶಕ್ತಿಗಳಿಗೆ ರಾಹುಲ್ ಗಾಂಧಿ ಪ್ರೋತ್ಸಾಹ: ಸಂಸದ ತೇಜಸ್ವಿ ಸೂರ್ಯ

author img

By

Published : Oct 2, 2022, 1:59 PM IST

Updated : Oct 2, 2022, 2:51 PM IST

BJP MP Tejaswi Surya

ಕಾಂಗ್ರೆಸ್​ ಭಾರತ್ ಜೋಡೊ ಯಾತ್ರೆ ಕುರಿತು ಸಂಸದ ತೇಜಸ್ವಿ ಸೂರ್ಯ ನಾಯಕ ರಾಹುಲ್ ಗಾಂಧಿ ಕುರಿತು ಗಂಭೀರ ಆರೋಪ ಮಾಡಿದ್ದಾರೆ.

ಕೋಲಾರ: ದೇಶ ವಿಭಜನೆ ಮಾಡೋ ಶಕ್ತಿಗಳಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಕಾಂಗ್ರೆಸ್​ ಭಾರತ್ ಜೋಡೊ ಯಾತ್ರೆ ಕುರಿತು ಮಾತನಾಡಿದ ಅವರು, ಜೋಡೊ ಯಾತ್ರೆ ಮಾಡುವುದಕ್ಕೂ ಮುಂಚೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರನ್ನು ಜೋಡೊ ಮಾಡಲಿ, ರಾಜಸ್ಥಾನದಲ್ಲಿ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಅವರನ್ನು ಜೋಡಿ ಮಾಡಲಿ. ಪಕ್ಷದಲ್ಲಿಯೇ ಹುಳುಕು ಇಟ್ಟುಕೊಂಡು, ದೇಶವನ್ನು ಒಂದು ಮಾಡುತ್ತೀನಿ ಎಂದು ಹೊರಟಿರುವುದು ದೇಶದ ಜನರ ಮುಂದೆ ನಗೆಪಾಟಲಿಗೀಡಾಗಿದ್ದೀರಿ ಎಂದು ಕುಹಕವಾಡಿದರು.

ಸಂಸದ ತೇಜಸ್ವಿ ಸೂರ್ಯ

ಖರ್ಗೆಗೆ ಬಲವಂತದ ಪಟ್ಟ ಇನ್ನು, ಮೂರು ವರ್ಷದಿಂದ ಎಐಸಿಸಿ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲು ಆಗಲಿಲ್ಲ, ರಾಜಸ್ಥಾನದ ಮುಖ್ಯಮಂತ್ರಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ರೆ, ರಾಜಸ್ಥಾನ ಕೈತಪ್ಪಿ ಹೋಗುತ್ತೆ ಎಂಬ ಭಯ ಕಾಂಗ್ರೆಸ್​ ಹೈಕಮಾಂಡ್ಗೆ ಇದೆ. ಖರ್ಗೆ ಅವರನ್ನು ಬಲವಂತವಾಗಿ ಅಧ್ಯಕ್ಷರಾಗಿ ಮಾಡಲು ಪ್ರಯತ್ನಿಸುತ್ತಿರುವಿರಿ. ಹೀಗೆ ಮೂರು ವರ್ಷಗಳಿಂದ ಅಧ್ಯಕ್ಷರನ್ನೇ ನೇಮಕ ಮಾಡಿಕೊಳ್ಳಲು ನಿಮ್ಮಿಂದ ಆಗಲಿಲ್ಲ ಅಂದರೆ ಇನ್ನು ದೇಶವನ್ನ ಹೇಗೆ ನಡೆಸುತ್ತೀರಿ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರು.

ಇದನ್ನೂ ಓದಿ: ಭಾರತ್ ಜೋಡೋ ಬಗ್ಗೆ ಕಾಂಗ್ರೆಸ್ ಪಶ್ಚಾತ್ತಾಪ ಪಡೆಬೇಕಿತ್ತು: ಸಚಿವ ಸುನಿಲ್ ಕುಮಾರ್

ಈ ಜೋಡೊ ಯಾತ್ರೆಯನ್ನ ನಿಲ್ಲಿಸಿ ದೇಶದ ಜನತೆಗೆ ಉಪಯೋಗ ಆಗುವಂತಹ ಚಟಿವಟಿಕೆಗಳನ್ನು ಮಾಡಿ ಎಂದು ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ ಸಂಸದ ತೇಜಸ್ವಿ ಸೂರ್ಯ ಹೇಳಿದರು.​

Last Updated :Oct 2, 2022, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.