ಕುಮಾರಸ್ವಾಮಿ ಟ್ವೀಟ್​ಗೆ ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ

author img

By

Published : Oct 2, 2022, 3:51 PM IST

Minister Ashwattha Narayan

ರಾಜಕೀಯದಲ್ಲಿ ಚುನಾವಣೆನೇ‌ ಬೇರೆ ಅಭಿವೃದ್ಧಿಯೇ ಬೇರೆ ಎನ್ನುವುದನ್ನು ಹೆಚ್​ಡಿಕೆ ತಿಳಿದುಕೊಳ್ಳಬೇಕು. ಅವರೂ ಈ ಹಿಂದೆ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿಯಾಗಿ ನಾನು ಯಾರನ್ನೂ ತಡೆದಿಲ್ಲ ಎಂದು ಸಚಿವ ಅಶ್ವತ್ಥನಾರಾಯಣ್​ ಹೇಳಿದ್ದಾರೆ.

ಕೋಲಾರ: ರಾಮನಗರಕ್ಕೆ ನಿಜವಾದ ರೂಪುರೇಷೆಗಳನ್ನು ಕೊಟ್ಟಿರುವುದು ಬಿಜೆಪಿ ಸರ್ಕಾರ. ಗದಗ ಬಿಟ್ಟರೆ ಮನೆ ಮನೆಗೂ ನೀರು ಕೊಟ್ಟಿರುವ ಎರಡನೇ ಜಿಲ್ಲೆ ರಾಮನಗರ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರ ಟ್ವೀಟ್​ಗೆ ಕೋಲಾರದಲ್ಲಿ ಸಚಿವ ಅಶ್ವತ್ಥನಾರಾಯಣ್​ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೇಷ್ಮೆ, ಅಂತಾರಾಷ್ಟ್ರೀಯ ಮಾರುಕಟ್ಟೆ, ಫುಡ್ ಯೂನಿಟ್, ರಾಜೀವ್ ಗಾಂಧಿ‌ ವಿವಿ ಇದೆಲ್ಲವನ್ನು ರಾಮನಗರದಲ್ಲಿ ಮಾಡುತ್ತಿದ್ದೇವೆ. ಇದನ್ನು ಅವರ್ಯಾರೂ ಮಾಡಿಲ್ಲ, ರಾಜಕೀಯದಲ್ಲಿ ಚುನಾವಣೆನೇ‌ ಬೇರೆ, ಅಭಿವೃದ್ಧಿಯೇ ಬೇರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.

ಮನೆ ಮನೆಗೂ ರಾಮನಗರದಲ್ಲಿ ಕಾವೇರಿ ನೀರು ತಲುಪಿಸುವಂತಹ ಕಾರ್ಯಕ್ರಮ ಮಾಡಿದ್ದೆ. ಈ ಕಾರ್ಯಕ್ರಮವನ್ನು ಈ ಮುಂಚೆಯೂ ಆಯೋಜಿಸಲಾಗಿತ್ತು. ಆದರೆ ಅವರ ಆಕ್ಷೇಪಣೆ ಕಾರಣದಿಂದ ಎರಡನೇ ಬಾರಿಗೆ ಆಯೋಜಿಸಲಾಗಿತ್ತು. ಈ ವೇಳೆ ಕುಮಾರಸ್ವಾಮಿ ಅವರೇ ಪತ್ರ‌ ಬರೆದು ಕಾರ್ಯಕ್ರಮಕ್ಕೆ ಬರಲು ಸಾದ್ಯವಿಲ್ಲ, ಪ್ರವಾಸದಲ್ಲಿ ಇದ್ದೇನೆ ಎಂದು ತಿಳಿಸಿದ್ದರು ಎಂದು ಹೇಳಿದರು.

ಸಚಿವ ಅಶ್ವತ್ಥನಾರಾಯಣ್​ ವಾಗ್ದಾಳಿ

ಜಿಲ್ಲಾ ಉಸ್ತುವಾರಿಯಾಗಿ ನಾನು ಯಾರನ್ನೂ ತಡೆದಿಲ್ಲ. ಈ ಹಿಂದೆ ರಾಮನಗರದಲ್ಲಿ ಅವರೂ ಕೂಡ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಹೆಚ್ ಡಿ ಕೆ ಮತ್ತು ಅವರ ಪತ್ನಿ, ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡಿದ್ದಾರೆ. ಮಾಗಡಿಯಲ್ಲಿ ಮಂಜು‌ ಮಾಡಿಕೊಂಡಿದ್ದಾರೆ. ನಾವೇನಾದರೂ ತಡೆದಿದ್ದೀವಾ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಅಧ್ಯಕ್ಷರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಎಷ್ಟು ಗೌರವ, ಮಾನ್ಯತೆ, ಸ್ವಾತಂತ್ರ್ಯ ಕೊಟ್ಟಿದ್ದೇವೆ, ಜೊತೆಗೆ ಎಷ್ಟು ಸಹಿಸಿಕೊಂಡಿದ್ದೇವೆ. ಎಷ್ಟು ಸಹಕಾರ ಕೊಟ್ಟಿದ್ದೇವೆ ಎಂದು ಗುಡುಗಿದರು. ನಿನ್ನೆ ರಾಮನಗರದಲ್ಲಿ ನಡೆದ ಕಾರ್ಯಕ್ರಮವನ್ನು ತಡೆಯುವುದು ಹೆಚ್ ಡಿ ಕುಮಾರಸ್ವಾಮಿಯವರ ಉದ್ದೇಶ ಆಗಿತ್ತು. ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಾಕೆ ತಡೆಯಬೇಕು ಎಂದು ಪ್ರಶ್ನಿಸಿದರು. ಮಲ್ಲೇಶ್ವರಂ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಎರಡನೇ ಅತೀ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದೇನೆ. ಅಲ್ಲಿ ಕೆಲಸ‌ ಮಾಡುವ ಮೂಲಕ ಅಭಿಮಾನದಿಂದ, ವಿಶ್ವಾಸದಿಂದ ಗೆಲುವು ಗಳಿಸಿದ್ದೇನೆ ಎಂದು ಕುಮಾರಸ್ವಾಮಿ ಅವರ ಟ್ವೀಟ್​ಗೆ ವಾಗ್ದಾಳಿ ನಡೆಸಿದರು.

ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್​ ನಾಟಕ: ವಿನಾಶಕಾಲದಲ್ಲಿರುವ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ನಾಟಕ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ, ದೇಶ ಒಡೆಯುವ ಕೆಲಸ ಹಾಗೂ ಭಯೋತ್ಪಾದನೆಗೆ ಉತ್ತೇಜನ ನೀಡುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಚಿವ ಅಶ್ವತ್ಥನಾರಾಯಣ್​ ವಾಗ್ದಾಳಿ ನಡೆಸಿದರು.

ಅಧಿಕಾರ ಉಳಿಸಿಕೊಳ್ಳಲು ಸಮಸ್ಯೆಗಳನ್ನು ಹುಟ್ಟುಹಾಕಿದ ಏಕೈಕ ಪಕ್ಷ ಅದು ಕಾಂಗ್ರೆಸ್​. ಕಾಶ್ಮೀರ, ಪಂಜಾಬ್,‌ ಅಸ್ಸೋಂ ಸೇರಿದಂತೆ ಎಲ್ಲಿಯೂ ಸ್ಪಷ್ಟತೆ ಎನ್ನುವುದು ಇಲ್ಲ, ಎಲ್ಲಾ ಕಡೆ ಸಮಸ್ಯೆಗಳನ್ನು ಹುಟ್ಟುಹಾಕಿರುವವರು ಕಾಂಗ್ರೆಸ್​ನವರು. ಅಲ್ಲದೆ ಚೀನಾ ಜೊತೆ ಯುದ್ಧ ಆದಾಗ ಭಾರತದ ಗಡಿಭಾಗ ಬಿಟ್ಟುಕೊಟ್ಟವರು ಕಾಂಗ್ರೆಸಿಗರು. ಪಾಕಿಸ್ತಾದಲ್ಲಿ ಯುದ್ಧ ಗೆದ್ದರೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಏಕೆ ಪಡೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ವ್ಯತ್ಯಾಸ ತಂದು ಸಮಾಜ ಒಡೆಯುವಂತಹ ಕೆಲಸ ಮಾಡುವುದರೊಂದಿಗೆ ದೇಶ ವಿರೋಧಿ ಚಟುವಟಿಕೆ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಪರ್ಸೆಂಟೇಜ್​​ ಪಿತಾಮಹ ಕಾಂಗ್ರೆಸ್ ಪಕ್ಷ: ಸಚಿವ ಭೈರತಿ ಬಸವರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.