ಕೊಡಗಿನಲ್ಲಿ ಮುಂದುವರಿದ ವ್ಯಾಘ್ರನ ಅಟ್ಟಹಾಸ: ಮತ್ತೊಂದು ಹಸು ಬಲಿ

author img

By

Published : Mar 16, 2021, 9:15 AM IST

Tiger Attacks on Cow at Kodagu

ಇಂದು ಮುಂಜಾನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಹಸುವೊಂದನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ.

ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ ನಿರಂತರವಾಗಿ ಮುಂದುವರಿದಿದ್ದು, ಇಂದು ಮುಂಜಾನೆ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಹಸುವೊಂದನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ.

ಮೋಹನ್ ದಾಸ್ ಮೊಣ್ಣಪ್ಪ ಎಂಬುವವರಿಗೆ ಸೇರಿದ ಹಸುವನ್ನು ಹುಲಿ ಕೊಂದಿದೆ. ಈ ನರಭಕ್ಷಕ ವ್ಯಾಘ್ರ ಕಳೆದ ಒಂದು ತಿಂಗಳಲ್ಲಿ 10 ಹಸು ಮತ್ತು ಮೂರು ಜನರನ್ನು ಬಲಿ ಪಡೆದಿದ್ದು, ಹುಲಿ ದಾಳಿಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಓದಿ: ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ, ಕುಟುಂಬಸ್ಥರಿಗೆ ಆಕಸ್ಮಿಕ ಮರಣ ಎಂದು ನಂಬಿಸಿದ್ದ ಮಹಿಳೆ ಅರೆಸ್ಟ್​

ಇನ್ನು, ಪೊನ್ನಂಪೇಟೆ ಭಾಗದಲ್ಲಿ ಹುಲಿ ಸೆರೆಗಾಗಿ 150ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ 5 ಸಾಕಾನೆಗಳಿಂದ ಶೋಧ ಕಾರ್ಯ ನಡೆಸುತ್ತಿದ್ದು, ರಾತ್ರಿ ವೇಳೆ ಗಸ್ತು ಪ್ರಾರಂಭಿಸಿದ್ದಾರೆ. ಜೊತೆಗೆ ನೂತನವಾಗಿ 3 ಶಾರ್ಪ್ ಸೂಟರ್​ಗಳನ್ನು ನಿಯೋಜನೆ ಕೂಡಾ ಮಾಡಲಾಗಿದೆ. ಆದರೂ ನರಭಕ್ಷಕ ಹುಲಿ ಬೋನಿಗೆ ಬೀಳುತ್ತಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.