ಕೊಡಗು: ಪುಪ್ಪಗಿರಿ ಬೆಟ್ಟಗಳ ಸಾಲಿನಲ್ಲಿ ಮೈ ನವಿರೇಳಿಸುವ ಜೀಪ್ ರ್ಯಾಲಿ
Published: Sep 27, 2022, 9:29 PM


ಕೊಡಗು: ಪುಪ್ಪಗಿರಿ ಬೆಟ್ಟಗಳ ಸಾಲಿನಲ್ಲಿ ಮೈ ನವಿರೇಳಿಸುವ ಜೀಪ್ ರ್ಯಾಲಿ
Published: Sep 27, 2022, 9:29 PM

ಮನಮೋಹಕ ಪುಷ್ಪಗಿರಿ ಬೆಟ್ಟಗಳ ಸಾಲಿನಲ್ಲಿ ಮೋಡಕವಿದ ವಾತವರಣ ನಡುವೆ ತುಂತುರು ಮಳೆಯಲ್ಲಿ ಜೀಪ್ಗಳು ಘರ್ಜಿಸಿದವು. ಕೊಡಗಿನಲ್ಲಿ ಡರ್ಟಿ ರೋಡ್ ರ್ಯಾಲಿಯಲ್ಲಿ ಜೀಪುಗಳು ಶಬ್ದಮಾಡಿಕೊಂಡು ಹೋಗುವ ದೃಶ್ಯಕ್ಕೆ ಅಭಿಮಾನಿಗಳು ಮನಸೋತರು.
ಕೊಡಗು : ಸೋಮವಾರಪೇಟೆ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟ ಗುಡ್ಡಗಳ ಸಾಲಿನಲ್ಲಿ ಮೈ ನವಿರೇಳಿಸುವ ಜೀಪ್ ರ್ಯಾಲಿ ನಡೆಯಿತು. ಜೀಪ್ ರೆಸ್ ಆಡ್ವೇಚರಸ್ ರ್ಯಾಲಿಯನ್ನು ಟೀಮ್ 12 ಆಫ್ ರೈಡರ್ಸ್ ಮತ್ತು ವೈಟ್ ಲೋಟಸ್ ಎಂಟರೊ ಟ್ರೈನಿರ್ ಸಂಸ್ಥೆ ಆಯೋಜನೆ ಮಾಡಿತ್ತು. 8 ಕಿಮೀ ದೂರ ಕಡಿದಾದ ರಸ್ತೆಯಲ್ಲಿ ಬೆಟ್ಟ ಗುಡ್ಡಗಳ ನಡುವೆ ಕಲರ್ ಕಲರ್ ಜೀಪ್ಗಳ ರ್ಯಾಲಿ ನೋಡುಗರಿಗೆ ಖುಷಿ ನೀಡಿತ್ತು.
ಮನಮೋಹಕ ಪುಷ್ಪಗಿರಿ ಬೆಟ್ಟಗಳ ಸಾಲಿನಲ್ಲಿ ಮೋಡಕವಿದ ವಾತವರಣ ನಡುವೆ ತುಂತುರು ಮಳೆಯಲ್ಲಿ, ಕಾಡಿನ ನಡುವೆ ನಡೆಯೋ ಎದೆನಡುಗಿಸೋ ಜೀಪ್ ರೇಸ್ ಆಡ್ವೇಂಚರಸ್ ಗೇಮ್ ಇಷ್ಟಪಡೋರಿಗೆ ಸಖತ್ ಖುಷಿನೀಡುತ್ತೆ. ಕಿವಿಗೆ ಜೂಯ್ ಎನ್ನುವ ಶಬ್ದ, ಅಲ್ಲಲ್ಲಿ ವೇಗವಾಗಿ ನೆಲಕ್ಕೆ ಕೂರುವ ಜೀಪ್ಗಳು ಇದೆಲ್ಲವನ್ನೂ ನೋಡಿ ಅಭಿಮಾನಿಗಳು ಚಪ್ಪಳೆ ತಟ್ಟಿ ಪ್ರೋತ್ಸಾಹ ನೀಡುತ್ತಾರೆ.
ಕೇರಳ, ತಮೀಳುನಾಡು, ಪಾಂಡಿಚೇರಿ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಇತರ ಭಾಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನರ್ತನ್ 'ತುಂಬಾ ಕಠಿಣವಾದ ರೋಡ್ ಮಾಡಿದ್ದಾರೆ. ರೈಡಿಂಗ್ ತುಂಬಾ ಥ್ರಿಲ್ಲಿಂಗ್ ಇತ್ತು. ಇಷ್ಟು ಟಫ್ ರೋಡ್ ತುಂಬಾ ಕಡಿಮೆ ಕಡೆ ಸಿಗುತ್ತದೆ. ಇಲ್ಲಿ ಭಾಗವಹಿಸಿ ತುಂಬಾ ಖುಷಿಯಾಯಿತು. ಉತ್ತಮವಾಗಿ ಆಯೋಜಿಸಿದ್ದಾರೆ' ಎಂದರು.
