ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ.. ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

author img

By

Published : Nov 13, 2021, 6:11 PM IST

Kannada rajyotsava celebration

ಮಂಜಿನ ನಗರಿ ಮಡಿಕೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಣೆ ಮಾಡಲಾಯಿತು. ಈ ವೇಳೆ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿ ಕಾರ್ಯಕ್ರಮಗಳು ಗಮನ ಸೆಳೆದವು.

ಕೊಡಗು: ಅವರೆಲ್ಲ ಇಷ್ಟು ದಿನ ವೈಟ್​​ ಆ್ಯಂಡ್​​ ವೈಟ್ ಡ್ರೆಸ್​​ ಹಾಕಿಕೊಂಡು ಕೈಯಲ್ಲಿ ಇಂಜೆಕ್ಷನ್​​​, ಕೊರಳಿಗೆ ಸ್ಟೆಥಸ್ಕೋಪ್ (stethoscope)​​ ಹಾಕಿಕೊಂಡು ಓದಾಯ್ತು, ಲ್ಯಾಬ್ ಆಯ್ತು ಅಂತಾ ಇದ್ದ ವೈದ್ಯಕೀಯ ವಿದ್ಯಾರ್ಥಿಗಳು. ಆದ್ರೆ ಇಂದು ಮಾತ್ರ ಅವರೆಲ್ಲರೂ ಅಪ್ಟಟ ಕನ್ನಡಿಗರಂತೆ ಕನ್ನಡದ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ರು. ಇದರಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಮಡಿಕೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅದ್ಧೂರಿ ಕನ್ನಡ ರಾಜೋತ್ಸವ..

ಮಂಜಿನ ನಗರಿ ಮಡಿಕೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (Madikeri Medical Sciences Institute ) ಇಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ (Kannada rajyotsava) ಆಚರಣೆ ಮಾಡಲಾಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಡಿಕೇರಿಯ ವೈದ್ಯಕೀಯ ವಿದ್ಯಾರ್ಥಿಗಳು 'ಸಮಷ್ಟಿ' ಎಂಬ ವಿಚಾರವನ್ನಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಿದ್ದರು.

ಎಲ್ಲಾ ರಾಜ್ಯದ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಕನ್ನಡದ ಕಂಪನ್ನು ಪಸರಿಸುವ ಉದ್ದೇಶದಿಂದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ಸೇರಿಕೊಂಡು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.

ಕಿತ್ತೂರು ರಾಣಿ ಚೆನ್ನಮ್ಮಳ ಕುರಿತ ನಾಟಕ, ಸುಗ್ಗಿ ಕುಣಿತ, ಕೋಲಾಟ, ಕೊಡವ ಸಂಸ್ಕೃತಿಯ ಅನಾವಾರಣ, ಗೀಗಿಪದ, ಸೇರಿದಂತೆ ಇತರೆ ಕನ್ನಡದ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಖುಷಿಪಟ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.