ಕೊಡಗಿನಲ್ಲಿ ಭಾರಿ ಮಳೆ.. ಪ್ರವಾಹಕ್ಕೆ ನಲುಗಿದ ಜನರಿಂದ ಅನುದಾನ ಬಿಡುಗಡೆಗೆ ಆಗ್ರಹ

author img

By

Published : Aug 7, 2022, 9:54 PM IST

ಕೊಡಗು

ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಜನ ನಲುಗಿ ಹೋಗಿದ್ದಾರೆ. ಆದ್ರೆ ಸರ್ಕಾರ ಮಾತ್ರ ಜಿಲ್ಲೆಗೆ ಯಾವುದೇ ಅನುದಾನ, ಪರಿಹಾರ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ವರುಣನ ರುದ್ರನರ್ತನಕ್ಕೆ ಕೊಡಗು ಜಿಲ್ಲೆಯ ಜನರ ಬದುಕು ಮೂರಾ ಬಟ್ಟೆಯಾಗಿದೆ. ಮನೆಗಳ ಮೇಲೆ, ರಸ್ತೆಗಳ ಮೇಲೆ ಮಣ್ಣು ಕುಸಿಯುತ್ತಿದೆ. ಜಿಲ್ಲೆಯಲ್ಲಿ ಜಲಪ್ರಳಯದ ಹೊಡೆತಕ್ಕೆ ಜನ ಅಕ್ಷರಶಃ ನಲುಗಿದ್ದಾರೆ. ಆದರೆ, ಸರ್ಕಾರ ಮಾತ್ರ ಯಾವುದೇ ಅನುದಾನ ಕೊಡದೆ ಜಿಲ್ಲೆಗೆ ಮಲತಾಯಿ ದೋರಣೆ ತೋರಿದೆ ಎನ್ನಲಾಗ್ತಿದ್ದು, ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆ ಕಳೆದ ನಾಲ್ಕು ವರ್ಷಗಳಿಂದ ಜಲಪ್ರಳಯದ ಹೊಡೆತಕ್ಕೆ ನಲುಗಿಹೋಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಜಲಕಂಟಕ ಶುರುವಾಗುತ್ತೆ. ಆದ್ರೆ ಸರ್ಕಾರ ಮಾತ್ರ ಜಿಲ್ಲೆಗೆ ಯಾವುದೇ ಅನುದಾನ, ಪರಿಹಾರ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಶನಿವಾರವಷ್ಟೇ ಸರ್ಕಾರ ಮಳೆಯಿಂದ ಹಾನಿಗೀಡಾದ ಜಿಲ್ಲೆಗಳಿಗೆ 200 ಕೋಟಿ ಹಣ ಬಿಡುಗಡೆ ಮಾಡಿದೆ.

ಪ್ರವಾಹ ಪರಿಹಾರಕ್ಕೆ ರಾಜ್ಯಸರ್ಕಾರದಿಂದ ಪರಿಹಾರ ಹಣ
ಪ್ರವಾಹ ಪರಿಹಾರಕ್ಕೆ ರಾಜ್ಯಸರ್ಕಾರದಿಂದ ಪರಿಹಾರ ಹಣ

ಸರ್ಕಾರಕ್ಕೆ ಹಿಡಿ ಶಾಪ: ಆದ್ರೆ, ಕಾವೇರಿ ಉಗಮಸ್ಥಾನ ಕೊಡಗು ಮಳೆಗೆ ಹೆಚ್ಚು ಹಾನಿಯಾಗುತ್ತೆ, ನಷ್ಟವಾಗುತ್ತೆ. ಬೆಟ್ಟಗುಡ್ಡಗಳು ಕುಸಿಯುತ್ತವೆ, ಮನೆಗಳು, ಕಾಫಿತೋಟಗಳು ರಸ್ತೆಗಳು ತಡೆಗೋಡೆಗಳು ಜಲಪ್ರಳಯಕ್ಕೆ ತುತ್ತಾಗಿ ಜನರು ಬೀದಿಪಾಲಾಗಿ ನಿರಾಶ್ರಿತರ ಕೇಂದ್ರದಲ್ಲಿ ವಾಸಮಾಡುತ್ತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲೂ ಜಿಲ್ಲೆಗೆ ಒಂದು ರೂಪಾಯಿ ಪರಿಹಾರ ನೀಡದಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರದ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

2018 ರಲ್ಲಿ ಜಲಪ್ರಳಯವಾದಗ ಜಿಲ್ಲೆಗೆ ಸಾಕಷ್ಟು ನಷ್ಟ ಉಂಟಾಗಿ ಮನೆಗಳನ್ನು ಕಳೆದುಕೊಂಡು ಬೀದಿಪಾಲಾದ ಜನರಿಗೆ ಅಂದಿನ ಜೆಡಿಎಸ್​ ಸರ್ಕಾರ ಪರಿಹಾರ ನೀಡಿ ಬೇರೆ ಮನೆಗೆ ಹೋಗೋದಕ್ಕೆ ಬಾಡಿಗೆ ನೀಡಿ 800ಕ್ಕೂ ಅಧಿಕ ಮನೆಗಳನ್ನು ಕಟ್ಟಿಸಿಕೊಟ್ಟಿತ್ತು. ಆದ್ರೆ 2022 ರಲ್ಲೂ ಮಳೆಯಿಂದ ಸಾಕಷ್ಟು ನಷ್ಟವಾಗುತ್ತಿದೆ. ಆದ್ರೆ ಈಗಿನ ಬಿಜೆಪಿ ಸರ್ಕಾರ ಮಾತ್ರ ಕೊಡಗನ್ನು ಕಡೆಗಣಿಸಿದೆ. ಇಬ್ಬರು ಶಾಸಕರು ಮತ್ತು ಸಂಸದರು ಬಿಜೆಪಿಯವರೇ ಆಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಮಳೆಯಿಂದ ನಲುಗುತ್ತಿರುವ ಜಿಲ್ಲೆಗೆ ಪರಿಹಾರ ನೀಡುತ್ತಿಲ್ಲ. ಇದು ಜಿಲ್ಲೆಯ ಜನರ ದುರಂತವಾಗಿದೆ ಎನ್ನುತ್ತಾರೆ ಸ್ಥಳೀಯರು.

ಜಿಲ್ಲೆಗೆ ಹಣ ಬಿಡುಗಡೆಯಾಗದಿರುವುದಕ್ಕೆ ಜಿಲ್ಲಾಧಿಕಾರಿಗಳು ಹೇಳೋದೆ ಒಂದು. ಜಿಲ್ಲಾ ಖಜಾನೆಯಲ್ಲಿ 35 ಕೋಟಿ ಹಣ ಇದೆ. ಹಣ ಇಲ್ಲದ ಜಿಲ್ಲೆಗೆ ಮಾತ್ರ ಹಣ ನೀಡಿದ್ದಾರೆ. ಅದಕ್ಕೆ ಕೊಟ್ಟಿಲ್ಲ ಅಂತ ಹೇಳುತ್ತಾರೆ. ಆದ್ರೆ ಹಣ ಇದ್ರೆ ಅದು ಕಳೆದ ನಾಲ್ಕು ವರ್ಷಗಳಿಂದ ಆದ ಜಲಪ್ರಳಯದ ಕಾಮಗಾರಿಗೆ ಬಳಸಬಹುದು. ಈ ವರ್ಷವೂ ಕೂಡ ಸಾಕಷ್ಟು ನಷ್ಟವಾಗಿದೆ.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ: ಜನರ, ರೈತರ ಸಮಸ್ಯೆಗಳು ಸಾಕಷ್ಟಿವೆ. ಕಾಮಗಾರಿಗಳು ಪೂರ್ಣವಾಗಿಲ್ಲ. ಎಷ್ಟೋ ಜನರಿಗೆ ಮನೆಗಳು ಇಲ್ಲ. ಕೆಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಇಂತಹ ಕೆಲಸಗಳಿಗೆ ಹಣ ಉಪಯೋಗಿಸಬಹುದಿತ್ತು. ಯಾಕೆ ಹಣ ಇಟ್ಟುಕೊಂಡು ಸಮಸ್ಯೆಗಳನ್ನು ಪೂರ್ಣಗೊಳಿಸಿಲ್ಲ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ: ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ : ಡಿ ಕೆ ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.