ಮೈಸೂರು ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿದೆ ಗಜಪಡೆ: ದುಬಾರೆಯಲ್ಲಿ ವಿಶೇಷ ಆರೈಕೆ

author img

By

Published : Aug 27, 2021, 2:20 PM IST

elephants-preparing-for-dussehra-in-dubare

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಮೀಪಿಸುತ್ತಿದೆ. ಈ ಮಹೋತ್ಸವದ ಕೇಂದ್ರ ಬಿಂದುವಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ತಯಾರಿಯಾಗುತ್ತಿವೆ.

ಕೊಡಗು: ಪ್ರತೀ ವರ್ಷದಂತೆ ಈ ಬಾರಿಯೂ ದಸರಾ ಮಹೋತ್ಸವಕ್ಕೆ ಆನೆಗಳು ಸಜ್ಜಾಗುತ್ತಿವೆ. ದುಬಾರೆಯ ಸಾಕಾನೆ ಶಿಬಿರದಲ್ಲಿ ಈಗಾಗಲೇ ಆನೆಗಳನ್ನು ಅಧಿಕಾರಿಗಳು ಗುರುತು ಮಾಡಿದ್ದು, ಇವುಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗುತ್ತಿದೆ.

ಭತ್ತ, ಬೆಲ್ಲ, ಹುಲ್ಲು, ಕಬ್ಬು, ಮುದ್ದೆ, ಕೊಡುವುದರ ಜೊತೆಗೆ ಆನೆಗಳಿಗೆ ಎಣ್ಣೆ ಸ್ನಾನ ಕೂಡಾ ಮಾಡಿಸಲಾಗುತ್ತಿದೆ. ಆನೆಗಳಿಗೆ ನೀರಿನಲ್ಲಿ ಸ್ನಾನ ಮಾಡಿಸುವಾಗ ಪ್ರವಾಸಿಗರೂ ಅವುಗಳ ಮುಂದೆ ಫೋಟೋಗಳನ್ನು ಕ್ಲಿಕ್ಕಿಸಿ, ಖುಷಿಪಡುತ್ತಿದ್ದಾರೆ.

ದುಬಾರೆಯಲ್ಲಿ ಆನೆಗಳಿಗೆ ವಿಶೇಷ ಆರೈಕೆ

ಸರ್ಕಾರದ ಆದೇಶ ಬಂದ ನಂತರ ಅವುಗಳನ್ನು ಮೈಸೂರಿಗೆ ಕಳುಹಿಸಲಾಗುತ್ತದೆ. ಮಾವುತರು ಮತ್ತು ಕಾವಾಡಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದರಿಂದಾಗಿ ಕೊರೊನಾ ಆತಂಕವಿಲ್ಲ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಕಳೆದ ಎರಡು ವರ್ಷಗಳಿಂದ ಕೊರೊನಾ ಅಟ್ಟಹಾಸದಿಂದಾಗಿ ವಿಜೃಂಭಣೆಯ ದಸರಾ ಸಾಧ್ಯವಾಗಿರಲಿಲ್ಲ. ಈ ಬಾರಿಯೂ ಕೊರೊನಾ ಇರುವ ಕಾರಣದಿಂದ ಸರಳ ದಸರಾ ನಡೆಸುವ ಸಾಧ್ಯತೆಯಿದ್ದು, ಸರ್ಕಾರ ನಿರ್ಧಾರವೇನು? ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಪೊಲೀಸ್ ಅಕಾಡೆಮಿಯಲ್ಲಿ ಗನ್‌ ಹಿಡಿದು ಶೂಟ್‌ ಟ್ರಯಲ್‌ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.