ಕಾಂಗ್ರೆಸ್ 17 ಶಾಸಕರನ್ನು ಕಳೆದುಕೊಳ್ಳಲು ಜೆಡಿಎಸ್ ಜೊತೆಗಿನ ಮೈತ್ರಿಯೇ ಕಾರಣ: ಯತೀಂದ್ರ

author img

By

Published : Oct 13, 2021, 4:32 AM IST

Updated : Oct 13, 2021, 5:38 AM IST

congress-lost-17-mlas-because-of-jds-yateendra-siddaramaiah

ಪ್ರತಿಭಟನಾ ಧರಣಿಗೆ ಸಿದ್ಧರಾಮಯ್ಯ, ಡಿಕೆಶಿ ಭಾಗವಹಿಸದ ವಿಚಾರದಲ್ಲಿ ಗೊಂದಲವೇನಿಲ್ಲ. ಇದರಲ್ಲಿ ಯಾವುದೇ ಮುನಿಸಿಲ್ಲ, ಅವರವರ ಕೆಲಸದ ಒತ್ತಡದಲ್ಲಿದ್ದರು. ಹೀಗಾಗಿ ಇಬ್ಬರೂ ಭಾಗವಹಿಸಲಾಗಿಲ್ಲ, ಆದರೆ ಇದನ್ನೇ ಬಣ ರಾಜಕೀಯ ಅಂತ ಬಿಂಬಿಸುವುದು ಬೇಡ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಕೊಡಗು: ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಮೊದಲಿನಿಂದಲೂ ನಿರಾಧಾರ ಆರೋಪ ಮಾಡುತ್ತ ಬಂದಿದ್ದಾರೆ, ಅವರ ಯಾವ ಆರೋಪಕ್ಕೂ ಹುರುಳಿಲ್ಲ. ಕಾಂಗ್ರೆಸ್ 17 ಶಾಸಕರನ್ನು ಕಳೆದುಕೊಳ್ಳಲು ಜೆಡಿಎಸ್ ಜೊತೆಗಿನ ಮೈತ್ರಿಯೇ ಕಾರಣ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಡಿಕೇರಿಯ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ನಾವು ಶಾಸಕರನ್ನು ಕಳೆದುಕೊಂಡೆವು. ಮೈತ್ರಿ ಆಗದಿದ್ದರೆ ಶಾಸಕರು ನಮ್ಮ ಜೊತೆ ಇರುತ್ತಿದ್ದರು. ನಾವು 80 ಸ್ಥಾನ ಗಳಿಸಿದ್ದರೂ ಅವರಿಗೆ ಸಿಎಂ ಸ್ಥಾನ ಕೊಟ್ಟಿದ್ದೆವು. ಆದರೆ ಕುಮಾರಸ್ವಾಮಿಯವರು ನಮ್ಮ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ, ಆಡಳಿತ ವ್ಯವಸ್ಥೆ ಮತ್ತು ಜಿಲ್ಲೆಗಳಿಗೆ ಅನುದಾನ ಕೊಡದೆ ಹಸ್ತಕ್ಷೇಪ ಮಾಡಿದರು ಎಂದು ಆರೋಪಿಸಿದ್ದಾರೆ.

ಅದೇನು ಸಿಎಂ ಸ್ಥಾನವೇ?

ಸಿಎಂ ಆಗಿದ್ದಾಗ ಕುಮಾರಸ್ವಾಮಿ ತಮಗೆ ಸರಿಯಾಗಿ ಸಿಗುತ್ತಿರಲಿಲ್ಲ, ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೂ ಸ್ಪಂದನೆ ನೀಡುತ್ತಿರಲಿಲ್ಲ ಎಂದ ಅವರು, ವಿರೋಧ ಪಕ್ಷದ ಸ್ಥಾನ ತಗೊಂಡು ಸಿದ್ದರಾಮಯ್ಯನವರಿಗೆ ಏನ್​ ಆಗಬೇಕು? ಅದೇನು ಸಿಎಂ ಸ್ಥಾನವೇ? ಹೆಚ್​ಡಿಕೆೆಯವರದ್ದು ನಗೆಪಾಟಲಿನ ಆರೋಪವಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ 17 ಶಾಸಕರನ್ನು ಕಳೆದುಕೊಳ್ಳಲು ಜೆಡಿಎಸ್ ಜೊತೆಗಿನ ಮೈತ್ರಿಯೇ ಕಾರಣ: ಯತೀಂದ್ರ

ಅಲ್ಲದೆ ಮುಂಬರುವ ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಪ್ರಬಲ ಎದುರಾಳಿಯಾಗಿದೆ. ಅವರಿಗೆ ಬಿಜೆಪಿ ಬಗ್ಗೆ ಒಲವಿದೆ, ಹೀಗಾಗಿ ಕಾಂಗ್ರೆಸ್ ಬಗ್ಗೆ ಬಾಯಿಗೆ ಬಂದ ಆರೋಪ ಮಾಡುತ್ತಿದ್ದಾರೆ. ಅಭ್ಯರ್ಥಿ ನಿಲ್ಲಿಸುವುದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯನ್ನೂ ಪಡೆಯಬೇಕಿಲ್ಲ. ಬೇರೆ ಪಕ್ಷದ ಜೊತೆಗಿನ ಅವರ ಒಳ ಒಪ್ಪಂದವನ್ನ ಜನರಿಗೆ ತಿಳಿಸುವುದಕ್ಕೂ ನಾವು ಕೂಡ ಯಾರ ಅಪ್ಪಣೆ ಪಡೆಯುವ ಅಗತ್ಯವಿಲ್ಲ. ನಮಗನ್ನಿಸಿದ್ದನ್ನು ನಾವು ಹೇಳಿಯೇ ಹೇಳುತ್ತೇವೆ ಎಂದರು.

ನಮ್ಮಲ್ಲಿ ಯಾವುದೇ ಮುನಿಸಿಲ್ಲ:

ಪ್ರತಿಭಟನಾ ಧರಣಿಗೆ ಸಿದ್ಧರಾಮಯ್ಯ, ಡಿಕೆಶಿ ಭಾಗವಹಿಸದ ವಿಚಾರದಲ್ಲಿ ಗೊಂದಲ, ಯಾವುದೇ ಮುನಿಸಿಲ್ಲ, ಅವರವರ ಕೆಲಸದ ಒತ್ತಡದಲ್ಲಿದ್ದರು. ಹೀಗಾಗಿ ಇಬ್ಬರೂ ಭಾಗವಹಿಸಲಾಗಿಲ್ಲ, ಆದರೆ ಇದನ್ನೇ ಬಣ ರಾಜಕೀಯ ಅಂತ ಬಿಂಬಿಸುವುದು ಬೇಡ. ಕಾಂಗ್ರೆಸ್​​ನವರು ನಾವೆಲ್ಲ ಒಗ್ಗಟ್ಟಾಗಿದ್ದು ಕೆಲಸ ಮಾಡುತ್ತೇವೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್​ನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ಹೇಳಿದರು.

ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಕಾಂಗ್ರೆಸ್ ಸೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ. ಜನತಾ ಪರಿವಾರ ಇರುವಾಗಿನಿಂದಲೂ ಜಿಟಿಡಿ ಮತ್ತು ನಮ್ಮ ತಂದೆ ಒಟ್ಟಿಗೆ ಇದ್ದರು. ಈಗಲೂ ಅವರಿಬ್ಬರೂ ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರಿದ್ದಾರೆ. ಈ ಕುರಿತು ಪಕ್ಷದ ನಾಯಕರು ನಿರ್ಧರಿಸಲಿದ್ದು, ನಾವೆಲ್ಲರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದರು.

ಇದನ್ನೂ ಓದಿ: ಕಲಬುರಗಿ ಭೂಕಂಪನದ ಬಗ್ಗೆ ವರದಿ ನೀಡಲು ಸಿಎಂ ಸೂಚನೆ

Last Updated :Oct 13, 2021, 5:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.