ಕೊಡಗಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಬೈಕ್ ಮತ್ತು ಕಾರ್ ರ‍್ಯಾಲಿ

author img

By

Published : Oct 3, 2022, 6:45 PM IST

ಬೈಕ್ ರ್ಯಾಲಿ

ಕೊಡಗಿನ ಮೈದಾನದಲ್ಲಿ ರಾಕೆಟ್​ಗಳು ಹರಿದಾಡಿದ ರೀತಿಯಲ್ಲಿ ಸದ್ದು ಮಾಡುತ್ತ ಧೂಳ್ ಎಬ್ಬಿಸುತ್ತ ಶರವೇಗದಲ್ಲಿ ಬೈಕ್ ಗಳನ್ನು ಓಡಿಸಲಾಯಿತು. ಸ್ಪರ್ಧಿಗಳು ಜೀವವನ್ನು ಲೆಕ್ಕಿಸದೆ ಶರವೇಗದಲ್ಲಿ ಗುರಿಯತ್ತ ಸಾಗೋ ದೃಶ್ಯ ರೋಮಾಂಚನಕಾರಿಯಾಗಿತ್ತು.

ಕೊಡಗು: ಜಿಲ್ಲೆಯ ಗೋಣಿಕೊಪ್ಪ ದಸರಾ ಪ್ರಯುಕ್ತ ದಸರಾ ಸಮಿತಿ ವತಿಯಿಂದ ಬೈಕ್ ರ‍್ಯಾಲಿ ನಡೆಸಲಾಯಿತು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಬೈಕ್ ಮತ್ತು ಕಾರ್ ರ‍್ಯಾಲಿ ನಡೆದಿದ್ದು, ನೋಡುಗರನ್ನು ಹೆಚ್ಚು ಆಕರ್ಷಿಸಿತು. ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ
ನೂರಾರು ಸ್ಪರ್ಧಿಗಳು ಉತ್ಸಾಹದಿಂದ ತಮ್ಮ ಬೈಕ್ ಗಳನ್ನು ಕ್ರೀಡಾಂಗಣದಲ್ಲಿ ಇಳಿಸಿದ್ರು.

ಕೊಡಗಿನಲ್ಲಿ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಮೈದಾನದಲ್ಲಿ ರಾಕೆಟ್​ಗಳು ಹರಿದಾಡಿದ ರೀತಿಯಲ್ಲಿ ಸದ್ದು ಮಾಡುತ್ತ ಧೂಳ್ ಎಬ್ಬಿಸುತ್ತ ಶರವೇಗದಲ್ಲಿ ಬೈಕ್​​ಗಳನ್ನು ಓಡಿಸಲಾಯಿತು. ಸ್ಪರ್ಧಿಗಳು ಜೀವವನ್ನು ಲೆಕ್ಕಿಸದೇ ಶರವೇಗದಲ್ಲಿ ಗುರಿಯತ್ತ ಸಾಗೋ ದೃಶ್ಯ ರೋಮಾಂಚನಕಾರಿಯಾಗಿತ್ತು. ಒಬ್ಬರ ಬೆನ್ನಿಗೆ ಒಬ್ಬರು ವೇಗವಾಗಿ ಸಾಗುತ್ತಿದ್ದರೆ, ಯಾರು ಗೆಲ್ತಾರಪ್ಪಾ? ಎಂದು ವೀಕ್ಷಕರು ಕಾತರದಿಂದ ಎದುರು ನೋಡುತ್ತಿದ್ದರು.

ರೋಚಕ ಬೈಕ್ ಸ್ಫರ್ಧೆ: ದಸರಾ ಮಹೋತ್ಸವದ ನಿಮಿತ್ತ ನಡೆದ ಬೈಕ್ ರ‍್ಯಾಲಿಯಲ್ಲಿ ರಾಜ್ಯದ ವಿವಿದೆಡೆಗಳಿಂದ ಬಂದಿದ್ದ 60ಕ್ಕೂ ಹೆಚ್ಚು ರಾಲಿಪಟುಗಳು ಗೆಲುವಿಗಾಗಿ ನಡೆಸಿದ ಕಸರತ್ತು ನಿಜಕ್ಕೂ ಎದೆ ಝಲ್ಲೆನಿಸುವಂತಿತ್ತು. ರಾಲಿಗಾಗಿ ಸಿದ್ದಗೊಂಡಿದ್ದ ಟ್ರ್ಯಾಕ್ ನಲ್ಲಿ ಏಕ ಕಾಲದಲ್ಲಿ 12ರಿಂದ 15 ಸ್ಪರ್ಧಿಗಳ ನಡುವೆ ನಡೆದ ಸ್ಪರ್ಧೆ ರೋಚಕವಾಗಿತ್ತು.

ಯುವ ರ‍್ಯಾಲಿ ಪಟುಗಳಿಗೆ ಪ್ರೋತ್ಸಾಹ ನೀಡಲೆಂದು ಎಲ್ಲಾ ಸುರಕ್ಷಾ ಕ್ರಮಗಳೊಂದಿಗೆ ರಾಲಿ ಆಯೋಜನೆ ಮಾಡಲಾಗಿತ್ತು.‌ ಮೈದಾನದಲ್ಲಿ ಬೈಕ್ ರೇಸ್​ಗೆ ಪ್ರಾರಂಭದ ವಿಶಲ್ ಹೊಡೆಯುತ್ತಿದ್ದಂತೆ ನಾಮುಂದೆ ತಾಮುಂದೆ ಎಂಬಂತೆ ಶರವೇಗದಲ್ಲಿ ನುಗ್ಗೋ ಸ್ಪರ್ದಿಗಳು, ಬಾಗುತ್ತಾ ಬಳುಕುತ್ತಾ, ಮೈದಾನದಲ್ಲಿ ಧೂಳೆಬ್ಬಿಸುತ್ತಾ ಗುರಿಯತ್ತ ಸಾಗುತ್ತಾರೆ.

ಒಂದರೆಕ್ಷಣ ತಡಮಾಡಿದರೂ ಮತ್ತೊಬ್ಬ ಮುಂದೆ ಹೋಗಿ ಬಿಡ್ತಾರೆ. ಒಂಚೂರು ಎಡವಟ್ಟು ಮಾಡಿಕೊಂಡ್ರು ಉರುಳಿಸಿ ಬೀಳುವ ಸಾದ್ಯತೆ ಹೆಚ್ಚು. ಹೀಗಿರುವಾಗ ಅತ್ಯಂತ ಚಾಣಾಕ್ಷತೆಯಿಂದ ಲಯಬದ್ದವಾಗಿ ಬ್ಯಾಲೆನ್ಸ್ ಮಾಡುತ್ತಾ ಅಷ್ಟೇ ವೇಗವಾಗಿ ಗುರಿಯತ್ತ ಮುನ್ನುಗ್ಗಿ ಟಾರ್ಗೆಟ್ ರೀಚ್ ಆದ್ರೆ ಸ್ಪರ್ಧಿಗೆ ಗೆದ್ದ ಸಂಭ್ರಮ.

ನಾಲ್ಕು ರೌಂಡ್ ಬೈಕ್ ಚಾಲನೆ: ಒಟ್ಟು 900 ಮೀಟರ್ ದೂರದ ಟ್ರ್ಯಾಕ್​ನಲ್ಲಿ ಪ್ರತಿ ಸ್ಪರ್ದೆಯಲ್ಲಿ ನಾಲ್ಕು ರೌಂಡ್ ಬೈಕ್ ಚಾಲನೆ ಮಾಡಬೇಕು. ಬಿಗಿನಿಂಗ್ ಕ್ಲಾಸ್, ಕೂರ್ಗ್ ಓಪನ್ ಕ್ಲಾಸ್, ಕೂರ್ಗ್ ನೋವೀಸ್ ಕ್ಲಾಸ್, 2ಸ್ಟ್ರೋಕ್ ಕೂರ್ಗ್ ಓಪನ್ ಕ್ಲಾಸ್, 4ಸ್ಟ್ರೋಕ್ ಓಪನ್ ಕ್ಲಾಸ್, ಇಂಡಿಯನ್ ಎಕ್ಸಪರ್ಟ್ ಕ್ಲಾಸ್, ಇಂಡಿಯನ್ ಓಪನ್ , ಗೇರ್ಲೆಸ್ ಕ್ಲಾಸ್ ಹೀಗೆ 12 ವಿಭಾಗಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಒಂದಕ್ಕಿಂತ ಒಂದು ಈವೆಂಟ್ ರೋಚಕತೆಯಿಂದ ಕೂಡಿದ್ದವು.

ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತಾ ರೋಚಕತೆ, ಕಾತರತೆಯಿಂದ ಕೂಡಿದ್ದ ರ‍್ಯಾಲಿಯಲ್ಲಿ ಸ್ಪರ್ದಿಗಳು ಗೆಲುವಿಗಾಗಿ ಕಸರತ್ತು ನಡೆಸಿದರು. ಎದುರಾಳಿಯನ್ನು ಹಿಂದಿಕ್ಕಿ ತಾನೇ ಎಲ್ಲರಿಗಿಂತ ಮುಂದೆ ಸಾಗಿ ಗೆಲುವಿನ ದಡ ಸೇರೋದು ಅಷ್ಟು ಸುಲಭದ ಮಾತಲ್ಲ. ಎಲ್ಲಾ ಸವಾಲನ್ನೂ ಎದುರಿಸಿ ಎಲ್ಲರನ್ನೂ ಮೀರಿಸಿ ಗುರಿಮುಟ್ಟುವ ಸರ್ದಾರ ಗೆದ್ದು ಬೀಗುತ್ತಾನೆ ಪ್ರಶಸ್ತಿಯನ್ನ ಮುಡಿಗೇರಿಸಿಕೊಳ್ಳುತ್ತಾನೆ.

ಸೂಕ್ತ ಭದ್ರತೆ ಮುಖ್ಯ: ಒಟ್ಟು ಎರಡು ದಿನಗಳ ಈ ರೋಮಾಂಚನಕಾರಿ ರ‍್ಯಾಲಿಯಲ್ಲಿ ಮೊದಲದಿನ ಬೈಕ್ ರ‍್ಯಾಲಿ ರೇಸ್ ಪ್ರಿಯರನ್ನ ರಂಜಿಸಿದರೆ, ಎರಡನೇ ದಿನ ಕಾರ್ ರೇಸ್ ಕೂಡ ಗಮನಸೆಳೆಯುತ್ತೆ. ರ‍್ಯಾಲಿಗಳು ಎಂದರೆ ನೋಡಲು ಎಷ್ಟು ರೋಚಕತೆಯಿಂದ ಕೂಡಿರುತ್ತೋ ಅಷ್ಟೇ ಅಪಾಯವನ್ನೂ ತನ್ನೊಳಗೆ ಇಟ್ಟುಕೊಂಡಿರುತ್ತೆ.

ಸೂಕ್ತ ಭದ್ರತೆ ಕೈಗೊಂಡ ಸವಾರ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯ. ಹೀಗೆ ಎಲ್ಲ ತಯಾರಿ ಮಾಡಿಕೊಂಡು ಟ್ರ್ಯಾಕ್​ಗೆ ಇಳಿಯುವ ಸ್ಪರ್ಧಿಗಳು ಮಿಂಚಿನ ವೇಗದಲ್ಲಿ ಮೈದಾನದಲ್ಲಿ ಡ್ರೈವ್ ಮಾಡಿ ಎಲ್ಲರ ಗಮನಸೆಳೆದರೆ ಬೇಸಿಗೆಯಲ್ಲಿ ನಡೆಯೋ ಅಪರೂಪದ ಆಟನೋಡಿ ಪ್ರೇಕ್ಷಕರೂ ಸಖತ್ ಎಂಜಾಯ್ ಮಾಡಿದ್ರು.

ಓದಿ: ಆಯುಧ ಪೂಜೆ ಎಫೆಕ್ಟ್ - ಬೂದುಗುಂಬಳಕಾಯಿ ದರ ಗಗನಕ್ಕೆ; ಹೂವಿನ ದರದಲ್ಲೂ ಭಾರಿ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.