ಕಲಬುರಗಿ: ಮೀನು ಹಿಡಿಯಲು ಹೋಗಿ ತಂದೆ-ಮಗ ನೀರುಪಾಲು
Published: Aug 2, 2022, 9:59 PM


ಕಲಬುರಗಿ: ಮೀನು ಹಿಡಿಯಲು ಹೋಗಿ ತಂದೆ-ಮಗ ನೀರುಪಾಲು
Published: Aug 2, 2022, 9:59 PM
ಮೀನು ಹಿಡಿಯುತ್ತಾ ಆಯತಪ್ಪಿ ಮಗ ನೀರಿನಲ್ಲಿ ಮುಳುಗಿದ್ದು, ನಂತರ ತಂದೆಯೂ ಜಲಾಶಯದ ಆಳದಲ್ಲಿ ಸಿಲುಕಿ ಮೇಲೆ ಬರಲಾಗದೇ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿ: ಮೀನು ಹಿಡಿಯಲು ಹೋಗಿ ತಂದೆ ಮಗ ಸಾವಿಗೀಡಾಗಿದ್ದಾರೆ. ಈ ಘಟನೆ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದಲ್ಲಿ ನಡೆಯಿತು. ತಂದೆ ರಾಜಪ್ಪ ತಿಮ್ಮಯ್ಯ ಮತ್ತು ಮಗ ಮಹೇಶ್ ಮೃತರು. ಕಳೆದ 15 ದಿನಗಳಿಂದ ಚಿಂಚೋಳಿ ಸೇರಿದಂತೆ ಚಂದ್ರಪಳ್ಳಿ ಜಲಾಶಯ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿದ್ದು, ಜಲಾಶಯ ಉಕ್ಕಿ ಹರಿಯುತ್ತಿದೆ. ಹೀಗಿದ್ದರೂ ತಂದೆ ಮಗ ಮೀನು ಹಿಡಿಯಲು ಜಲಾಶಯಕ್ಕೆ ತೆರಳಿದ್ದರು.
ಮೀನು ಹಿಡಿಯುತ್ತಾ ಆಯತಪ್ಪಿ ಮಗ ನೀರಿನಲ್ಲಿ ಮುಳುಗಿದ್ದು, ನಂತರ ತಂದೆಯೂ ಜಲಾಶಯದ ಆಳದಲ್ಲಿ ಸಿಲುಕಿ ಮೇಲೆ ಬರಲಾಗದೇ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಚಂದ್ರಂಪಳ್ಳಿ ಗ್ರಾಮದವರಾಗಿದ್ದು, ಮೃತದೇಹಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಆರಂಭಿಸಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಶಿಕ್ಷಕ ಸಾವು
