ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲೇ ಹಳ್ಳಿ ಸ್ಥಿತಿ ದುರ್ಘಮ.. ದಶಕದಿಂದಲೂ ಮೂಲ ಸೌಕರ್ಯ ಗಗನಕುಸುಮ

author img

By

Published : Sep 17, 2021, 9:19 AM IST

village-of-cm-bommai-constituency-moans-from-lack-of-infrastructure

ಸಿಎಂ ಪ್ರತಿನಿಧಿಸುವ ಕ್ಷೇತ್ರದ ಹಳ್ಳಿಯೊಂದು ಈಗಲೂ ಮೂಲ ಸೌಕರ್ಯದಿಂದ ವಂಚಿತವಾಗಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಶಿಗ್ಗಾವಿಯ ಹಳ್ಳಿಯಲ್ಲಿ ರಸ್ತೆಯೇ ಇಲ್ಲದೇ ಗ್ರಾಮಸ್ಥರು ಇಂದಿಗೂ ಪರದಾಡುತ್ತಿದ್ದಾರೆ.

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಜಿಲ್ಲೆಯ ಈ ಹಳ್ಳಿ ಇಂದಿಗೂ ಮೂಲಸೌಕರ್ಯದಿಂದ ವಂಚಿತವಾಗಿದೆ. ಸರಿಯಾದ ರಸ್ತೆ ಸೌಕರ್ಯ ಇಲ್ಲದೇ ಗ್ರಾಮಸ್ಥರು ಪಡಬಾರದ ಕಷ್ಟ ಪಡುತ್ತಿದ್ದಾರೆ. ದಶಕಗಳ ಹಿಂದೆ ಮಹಾರಾಷ್ಟ್ರದಿಂದ ಬಂದು ಶಿಗ್ಗಾವಿ ತಾಲೂಕಿನ ಗೌಳೇರದಡ್ಡಿಯಲ್ಲಿ ನೆಲೆಸಿರುವ 19 ಕುಟುಂಬಗಳಿಗೆ ಸರ್ಕಾರದ ಸೌಲಭ್ಯ ದೂರದ ಮಾತಾಗಿದೆ.

ದಶಕದಿಂದಲೂ ಈ ಹಳ್ಳಿಗೆ ಮೂಲಸೌಕರ್ಯ ಗಗನಕುಸುಮ

ಸುಮಾರು 40 ಮತದಾರರಿರುವ ಈ ಗ್ರಾಮಕ್ಕೆ ಪಡಿತರ ವಿತರಣೆಯಾಗುವುದು ಬಿಟ್ಟರೆ ಸರ್ಕಾರದ ಬೇರೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಶಿಗ್ಗಾವಿಯ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಮೂಲ ಸೌಲಭ್ಯಗಳು ಗಗನಕುಸುಮವಾಗಿವೆ. ಅಲ್ಲದೇ ಕಾಡಂಚಿನಲ್ಲಿರುವ ಗ್ರಾಮ ಆಗಿರುವುದರಿಂದ ನಿರಂತರ ಕರಡಿ ದಾಳಿ ನಡೆಯುತ್ತಲೇ ಇರಲಿದೆ ಎಂಬುದು ಸ್ಥಳೀಯರ ಅಳಲಾಗಿದೆ.

ಸರಿಯಾದ ರಸ್ತೆ ಇಲ್ಲದ ಕಾರಣ ಮತ್ತು ಕಾಡುದಾರಿಯಲ್ಲಿ ಕರಡಿ ಭಯದ ಜೊತೆ ಜೀವ ಕೈಯಲ್ಲಿ ಹಿಡಿದು ಶಾಲೆಗೆ, ಪಟ್ಟಣಕ್ಕೆ ನಡೆದು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಚುನಾವಣೆ ವೇಳೆ ಮಾತ್ರ ಗ್ರಾಮಕ್ಕೆ ಆಗಮಿಸುವ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಂಕಷ್ಟದಿಂದ ಪಾರು ಮಾಡಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.

ಇದನ್ನೂ ಓದಿ: ರಸ್ತೆ ದುರವಸ್ಥೆ: ನಿತ್ಯ ನರಕಯಾತನೆ ಅನುಭವಿಸುತ್ತಿರುವ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.