ಅಪಘಾತದಲ್ಲಿ ಕೋಮಾ ಸೇರಿದ ಮಗಳು: ಅಂಗಾಂಗ ದಾನ ಮಾಡಿದ ತಾಯಿ

author img

By

Published : Sep 16, 2021, 7:31 AM IST

Updated : Sep 16, 2021, 12:08 PM IST

mother donated daughter organs who reached coma

ಅಪಘಾತದಲ್ಲಿ ತೀವ್ರ ಗಾಯಗೊಂಡು ಕೋಮಾ ಸೇರಿದ್ದ ಮಗಳ ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ ಆಕೆಯ ತಾಯಿ ಮಗಳ ಸಾವಿನ ನೋವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.

ಹಾವೇರಿ:ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿದ್ದ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಕವನಾ ಹಿರೇಮಠ (20) ಅವರ ತಾಯಿ ಮಗಳ ಅಂಗಾಂಗ ದಾನ ಮಾಡಿ ಮಗಳ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.

ಕೋಮಾ ಸೇರಿದ ಯುವತಿಯ ಅಂಗಾಂಗ ದಾನ

ಸೆಪ್ಟೆಂಬರ್ 9 ರಂದು ಕವನಾ ಹಿರೇಮಠ ಶಿಕಾರಿಪುರದ ಗಾರ್ಮೆಂಟ್ಸ್​​ನಿಂದ ಹಳ್ಳೂರಿಗೆ ಬರುತ್ತಿದ್ದ ವೇಳೆ ಶಿಕಾರಿಪುರದ ಹೊನ್ನಾಳಿ ಸಂಪರ್ಕಿಸುವ ರಸ್ತೆಯ ಸೊರಟೂರು ಗ್ರಾಮದಲ್ಲಿ ಕವನಾ ಪಯಣಿಸುತ್ತಿದ್ದ ವಾಹನ ಮತ್ತು ಚಕ್ಕಡಿ ನಡುವೆ ಅಪಘಾತವಾಗಿತ್ತು.

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕವನಾಳನ್ನ ಮೆಗ್ಗಾನ್​ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ಮಂಗಳೂರಿನ ವೆನ್​ಲಾಕ್​ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಲಿಲ್ಲ, ಕವನಾ ಕೋಮಾಕ್ಕೆ ಜಾರಿದ್ದಳು.

ಮಗಳು ಬದುಕಿದರೂ ಜೀವಂತ ಶವವಾಗಿರುತ್ತಾಳೆ ಹೀಗಾಗುವುದು ಬೇಡ ಎಂದು ಕುಟುಂಬದವರೊಂದಿಗೆ ಚರ್ಚಿಸಿ ಆಕೆಯ ತಾಯಿ ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧಿರಿಸಿದ್ದಾರೆ. ಕವನಾಳ ತಾಯಿ ವಸಂತಮ್ಮ ಹಿರೇಮಠರ ಈ ನಿರ್ಧಾರಕ್ಕೆ ಸಂಬಂಧಿಕರು ಗ್ರಾಮಸ್ಥರು ವೈದ್ಯರು ಸಹಮತ ವ್ಯಕ್ತಪಡಿಸಿದರು. ಕವನಾಳ ದೇಹದಿಂದ ಚರ್ಮ, ಹೃದಯ, ಕಿಡ್ನಿ, ಕಣ್ಣು, ಲಿವರ್‌ ಈ ಅಂಗಾಂಗಳನ್ನ ಅವಶ್ಯಕತೆ ಇರುವ ರೋಗಿಗಳಿಗೆ ಝೀರೋ ಟ್ರಾಫಿಕ್‌ನಲ್ಲಿ ಕಳುಹಿಸಿಕೊಡಲಾಯಿತು. ನಂತರ ಕವನಾಳ ಶವಸಂಸ್ಕಾರವನ್ನು ಹಳ್ಳೂರಿನಲ್ಲಿ ನೆರವೇರಿಸಲಾಯಿತು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಟಿಟಿ ಚಾಲಕನ ವೇಗಕ್ಕೆ ಬೈಕ್ ಸವಾರ ಬಲಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Last Updated :Sep 16, 2021, 12:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.