ಗುಡಿಸಲಿಗೆ ತಗುಲಿದ ಬೆಂಕಿ, ವ್ಯಕ್ತಿ-ಕುರಿ ಸಜೀವ ದಹನ.. ಹಾನಗಲ್​ನಲ್ಲಿ ಹೊತ್ತಿ ಉರಿದ ಕಾಡು

author img

By

Published : Mar 4, 2023, 11:54 AM IST

Man died in fire incident at Haveri  forest on fire in Hanagal  ಗುಡಿಸಲಿಗೆ ತಗುಲಿದ ಬೆಂಕಿ  ವ್ಯಕ್ತಿ ಕುರಿ ಸಜೀವ ದಹನ  ಹಾನಗಲ್​ನಲ್ಲಿ ಹೊತ್ತಿ ಉರಿದ ಕಾಡು  ಹಾವೇರಿ ಜಿಲ್ಲೆಯಲ್ಲಿ ದುರಂತ  ಆಕಸ್ಮಿಕವಾಗಿ ಗುಡಿಸಲಿಗೆ ತಗುಲಿದ ಬೆಂಕಿ  ಚಪ್ಪರದ ಗುಡಿಸಲಿಗೆ ಆಕಸ್ಮಿಕ ಬೆಂಕಿ  ಹೊತ್ತಿ ಉರಿದ ಅರಣ್ಯ  ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ದುರಂತ

ಹಾವೇರಿ ಜಿಲ್ಲೆಯಲ್ಲಿ ದುರಂತ ಘಟನೆ.. ಆಕಸ್ಮಿಕವಾಗಿ ಗುಡಿಸಲಿಗೆ ತಗುಲಿದ ಬೆಂಕಿ.. ಮಲಗಿದ್ದಲ್ಲೇ ವ್ಯಕ್ತಿ ಸಜೀವ ದಹನ..

ಹಾವೇರಿ: ಚಪ್ಪರದ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಗುಡಿಸಲಿನಲ್ಲಿ ಮಲಗಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬ್ಯಾಡಗಿ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು 60 ವರ್ಷದ ಸಣ್ಣತಿಮ್ಮಪ್ಪ ಜಾಡರ್ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ವೇಳೆ ಘಟನೆ ನಡೆದಿದ್ದು, ಮುಂಜಾನೆ ಬೆಳಕಿಗೆ ಬಂದಿದೆ.

ಪ್ರತಿನಿತ್ಯ ಊಟ ಮಾಡಿದ ಬಳಿಕ ಕುರಿ ಕಟ್ಟುವ ಚಪ್ಪರದ ಮನೆಯಲ್ಲಿ ಒಂಟಿಯಾಗಿ ಸಣ್ಣ ತಿಮ್ಮಪ್ಪ ಅವರು ಮಲಗುತ್ತಿದ್ದರು. ಅದರಂತೆ ನಿನ್ನೆ ರಾತ್ರಿ ಸಹ ಸಣ್ಣ ತಿಮ್ಮಪ್ಪ ಅವರು ಊಟ ಮಾಡಿ ಕುರಿ ಕಟ್ಟುವ ಗುಡಿಸಲಿನಲ್ಲಿ ಮಲಗಿದ್ದರು. ರಾತ್ರಿ ವೇಳೆ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದಿದ್ದರಿಂದ ಹೊತ್ತಿ ಉರಿದಿದೆ.

ಬೆಂಕಿ ಬಿದ್ದ ಕ್ಷಣ ಸಣ್ಣ ತಿಮ್ಮಪ್ಪ ಗುಡಿಸಲಿನಲ್ಲೇ ಸಿಲುಕಿಕೊಂಡಿದ್ದು, ಹೊರ ಬಾರದೇ ಸಜೀವ ದಹನವಾಗಿದ್ದಾರೆ. ಇವರ ಜೊತೆ ಕುರಿಯೊಂದು ಸಹ ಸುಟ್ಟು ಕರಕಲವಾಗಿದೆ. ಬೆಳಗ್ಗೆ ಈ ಸುದ್ದಿ ಬೆಳಕಿಗೆ ಬಂದಿದೆ. ಬೆಂಕಿಯಲ್ಲಿ ಸುಟ್ಟು ಹೋಗಿರುವ ದೇಹ ಕಂಡು ಗ್ರಾಮಸ್ಥರು ಭಯಭೀತರಾದರು. ಬಳಿಕ ಈ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

ಹೊತ್ತಿ ಉರಿದ ಅರಣ್ಯ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ 15 ಕ್ಕೂ ಅಧಿಕ ಎಕರೆ ವಿಸ್ತಿರ್ಣದ ಅರಣ್ಯ ಹೊತ್ತಿ ಉರಿದ ಘಟನೆ ಹಾನಗಲ್ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಇರುವ ಅರಣ್ಯಕ್ಕೆ ಬೆಂಕಿ ಹತ್ತಿದ್ದು ಅಕೇಶಿಯಾ, ತೇಗ, ಬೀಟೆ ಸೇರಿದಂತೆ ವಿವಿಧ ಜಾತಿಯ ಮರಗಳು ಸುಟ್ಟು ಕರಕಲಾಗಿವೆ.

ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ಬೆಂಕಿ ಜ್ವಾಲೆ ಮುಗಿಲೆತ್ತರಕ್ಕೆ ಚಾಚಿದೆ. ಅರಣ್ಯದಲ್ಲಿದ್ದ ಪ್ರಾಣಿ ಪಕ್ಷಿಗಳು ಬೆಂಕಿಯಲ್ಲಿ ದಹನವಾಗಿದ್ದಾವೋ ಅಥವಾ ಸುರಕ್ಷಿತ ಪ್ರದೇಶಕ್ಕೆ ತೆರಳಿವೆಯಾ ಎಂಬುದರ ಬಗ್ಗೆ ತಿಳಿದು ಬರಬೇಕಿದೆ.

ಇನ್ನು, ಕಾಡಿಗೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಅಗ್ನಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಓದಿ: ಇಂಧನ ಡಿಪೋದಲ್ಲಿ ಭಾರೀ ಬೆಂಕಿ.. 16 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ದುರಂತ: ಜಕಾರ್ತಾದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಇಂಧನ ಸಂಗ್ರಹಣಾ ಡಿಪೋದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ, ಈ ಘಟನೆಯಲ್ಲಿ ಹತ್ತಾರು ಜನರು ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ಬೆಂಕಿ ಕಾಣಿಸಿಕೊಂಡ ನಂತರ ಸಮೀಪದ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.