ಎಂಸೀಲ್​ನಲ್ಲಿ ಗಣಪತಿ ಮೂರ್ತಿ ತಯಾರಿಸಿ ಗಮನ ಸೆಳೆದ ಹಾವೇರಿ ಕಲಾವಿದೆ

author img

By

Published : Sep 9, 2021, 3:46 PM IST

Updated : Sep 9, 2021, 5:42 PM IST

haveri

ಒಂದು ಬಾರಿ ಮನೆಯ ನೀರು ಸೋರುವಿಕೆ ತಡೆಗಟ್ಟಲು ಎಂಸೀಲ್ ತರಲಾಗಿತ್ತು. ಈ ಸಂದರ್ಭದಲ್ಲಿ ಉಪಯೋಗಿಸಿ ಬಿಟ್ಟ ಎಂಸೀಲ್‌ನಲ್ಲಿ ಗಣೇಶ ಮೂರ್ತಿ ತಯಾರಿಸಿದ ಜ್ಯೋತಿ ಕಲೆಯನ್ನು ಮುಂದುವರೆಸಿದ್ದಾರೆ.

ಹಾವೇರಿ: ಗಣೇಶ ಮೂರ್ತಿಗಳನ್ನು ಮಣ್ಣಿನಲ್ಲಿ ರಚಿಸುವುದು ಸಾಮಾನ್ಯ. ಆದರೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ವಿಶಿಷ್ಠ ಕಲಾವಿದೆಯೊಬ್ಬರಿದ್ದಾರೆ. ಇವರ ಹೆಸರು ಜ್ಯೋತಿ. ಈ ಕಲಾವಿದೆ ಗಣೇಶ ಮೂರ್ತಿಗಳನ್ನು ಮಣ್ಣಿನಲ್ಲಿ ತಯಾರಿಸುವುದಿಲ್ಲ. ಬದಲಿಗೆ ನೀರು ಸೋರುವಿಕೆ ತಡೆಗಟ್ಟುವ ಎಂಸೀಲ್‌ನಲ್ಲಿ ತಯಾರಿಸುತ್ತಾರೆ.

ಒಂದು ಬಾರಿ ಮನೆಯ ನೀರು ಸೋರುವಿಕೆ ತಡೆಗಟ್ಟಲು ಎಂಸೀಲ್ ತರಲಾಗಿತ್ತು. ಈ ಸಂದರ್ಭದಲ್ಲಿ ಉಪಯೋಗಿಸಿ ಬಿಟ್ಟ ಎಂಸೀಲ್‌ನಲ್ಲಿ ಗಣೇಶ ಮೂರ್ತಿ ತಯಾರಿಸಿದ ಜ್ಯೋತಿ ಕಲೆಯನ್ನು ಮುಂದುವರೆಸಿದ್ದಾರೆ.

ಎಂಸೀಲ್​ನಲ್ಲಿ ಮೂಡಿದ ಗಣಪತಿ

ಸೈಕಲ್ ಏರಿದ ಗಣಪ, ಕುದುರೆಯನ್ನೇರಿದ ಗಣಪ, ಶಂಖ, ಕಪ್ಪೆ ಚಿಪ್ಪು, ನದಿ ತೀರದ ಕಲ್ಲುಗಳ ಮೇಲೆ ಇವರು ಎಂಸೀಲ್ ಬಳಸಿ ಗಣಪನನ್ನು ಚಿತ್ರಿಸಿದ್ದಾರೆ. ಎಂಸೀಲ್‌ನಲ್ಲಿ ಗಣೇಶ ಮೂರ್ತಿ ರಚಿಸಿ ಅದಕ್ಕೆ ತಕ್ಕಂತೆ ಬಣ್ಣ ಬಳೆಯುವ ಮೂಲಕ ಗಣೇಶನ ಮೂರ್ತಿಗಳನ್ನು ಇನ್ನಷ್ಟು ಆಕರ್ಷಣೀಯಗೊಳಿಸಿದ್ದಾರೆ.

ಪ್ರತಿವರ್ಷ ಗಣೇಶನ ಹಬ್ಬದಂದು ಇದೇ ರೀತಿ ಮೂರ್ತಿಗಳನ್ನು ತಯಾರಿಸಿ ಜ್ಯೋತಿ ಚತುರ್ಥಿ ಆಚರಿಸಿಕೊಂಡು ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಇವರ ಗಣೇಶ ಮೂರ್ತಿಗಳ ಸಂಖ್ಯೆಯೂ ಅಧಿಕವಾಗುತ್ತಿವೆ.

Last Updated :Sep 9, 2021, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.