ಹಾವೇರಿಯಲ್ಲಿ ವೈರಲ್​ ಜ್ವರದ ಭೀತಿ: ಜನತೆಗೆ ವೈದ್ಯರ ಸಲಹೆಗಳೇನು?

author img

By

Published : Sep 19, 2021, 8:17 AM IST

haveri

ಜ್ವರ, ನೆಗಡಿ ಮತ್ತು ಕೆಮ್ಮು ಲಕ್ಷಣಗಳನ್ನೊಳಗೊಂಡ ರೋಗಿಗಳು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ನೋಡುತ್ತಿದ್ದೆವು. ಆದರೆ ಪ್ರಸ್ತುತ ವರ್ಷ ಇದು ಮೂರು ಪಟ್ಟು ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಾವೇರಿ: ಜಿಲ್ಲೆಯಾದ್ಯಂತ ವೈರಲ್ ಜ್ವರದ ಭೀತಿ ಆವರಿಸಿದೆ. ಜ್ವರ, ನೆಗಡಿ ಮತ್ತು ಕೆಮ್ಮು ಲಕ್ಷಣಗಳನ್ನೊಳಗೊಂಡ ರೋಗಿಗಳು ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಪ್ರತಿ ವರ್ಷ 50 ರಿಂದ 100ರವರೆಗೆ ಇರುತ್ತಿದ್ದ ರೋಗಿಗಳ ಸಂಖ್ಯೆ ಈ ಬಾರಿ ಮೂರು ಪಟ್ಟು ಅಧಿಕವಾಗಿದೆ.

ಚಿಕ್ಕಮಕ್ಕಳ ವಿಭಾಗದಲ್ಲಿ ಸಹ ಒಳರೋಗಿಗಳ ಮತ್ತು ಹೊರರೋಗಿಗಳ ಸಂಖ್ಯೆ ಅಧಿಕವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ನೋಡುತ್ತಿದ್ದೆವು. ಆದರೆ ಪ್ರಸ್ತುತ ವರ್ಷ ಇದು ಮೂರು ಪಟ್ಟು ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಾವೇರಿಯಲ್ಲಿ ವೈರಲ್​ ಜ್ವರದ ಭೀತಿ

ಜಿಲ್ಲಾಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವಾರ್ಡ್‌ಗಳು ಮಕ್ಕಳಿಂದ ತುಂಬಿವೆ. ಸಾಮಾನ್ಯ ವಾರ್ಡ್​ಗಳು ಸಹ ವೈರಲ್ ಫಿವರ್‌ ರೋಗಿಗಳಿಂದ ತುಂಬಿದೆ. ನೆಗಡಿ, ಕೆಮ್ಮು, ಜ್ವರ ಅಧಿಕವಾಗಿದ್ದ ಮಕ್ಕಳಲ್ಲಿ ನ್ಯೂಮೋನಿಯಾ ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಸ್ವಲ್ಪ ಪ್ರಮಾಣದ ಮಲೇರಿಯಾ ಮತ್ತು ಡೆಂಗ್ಯೂನಂತಹ ಪ್ರಕರಣಗಳು ಸಹ ಜಿಲ್ಲೆಯಲ್ಲಿ ಕಂಡುಬರುತ್ತಿವೆ.

ಜಿಲ್ಲಾಸ್ಪತ್ರೆಯಲ್ಲಿ ಸಾಧ್ಯವಾದಷ್ಟು ಚಿಕಿತ್ಸೆ ನೀಡುತ್ತಿದ್ದೇವೆ. ಹೆಚ್ಚು ಸಂಕಿರ್ಣವಾದ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವೈರಲ್ ಫೀವರ್ ಅಧಿಕವಾಗುತ್ತಿದ್ದು, ಜನಸಾಮಾನ್ಯರು ಹೆಚ್ಚು ಜಾಗರೂಕತೆಯಿಂದ ಇರುವಂತೆ ವೈದ್ಯರು ತಿಳಿಸಿದ್ದಾರೆ. ಮನೆಯಲ್ಲಿ ಹೆಚ್ಚಾಗಿ ಬಿಸಿ ನೀರು ಸೇವಿಸಿ ಮನೆಯ ಸುತ್ತಮುತ್ತಲು ಸ್ವಚ್ಛವಾಗಿಟ್ಟುಕೊಳ್ಳಿ. ಕಾಯಿಲೆ ಕಡಿಮೆ ಪ್ರಮಾಣದಲ್ಲಿದ್ದಾಗ ವೈದ್ಯರ ಸಲಹೆ ಪಡೆಯಿರಿ. ವೈರಲ್ ಫಿವರ್ ಕಾಣಿಸಿಕೊಂಡಾಗ ಓಡಾಡುವುದನ್ನು ಬಿಟ್ಟು ಮನೆಯಲ್ಲೇ ಇರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.