3 ಲಕ್ಷದ ಟೆಂಡರ್‌ಗೆ 15 ಸಾವಿರ ಲಂಚ; ಎಸಿಬಿಗೆ ಸಿಕ್ಕಿಬಿದ್ದ ಹಾವೇರಿ ನಗರಸಭೆ ಪೌರಾಯುಕ್ತ

author img

By

Published : Jul 20, 2022, 7:35 AM IST

Haveri Municipal Commissioner

ಹಾವೇರಿ ನಗರಸಭೆ ಕಚೇರಿಯಲ್ಲಿ ಲಂಚದ ಹಣ ಪಡೆಯುವಾಗ ಪೌರಾಯುಕ್ತ ವಿರೂಪಾಕ್ಷಪ್ಪ ಪೂಜಾರ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ್​ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಹಾವೇರಿ: 15 ಸಾವಿರ ರೂಪಾಯಿ ಲಂಚ ಪಡೆಯುವಾಗ ನಗರಸಭೆಯ ಇಬ್ಬರು ಅಧಿಕಾರಿಗಳು ಎಸಿಬಿ ಬಲೆ ಸೇರಿದ್ದಾರೆ. ಹಾವೇರಿ ನಗರಸಭೆಯ ಪೌರಾಯುಕ್ತ ವಿರೂಪಾಕ್ಷಪ್ಪ ಪೂಜಾರ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ್ ಬಂಧಿತ ಭ್ರಷ್ಟ ಅಧಿಕಾರಿಗಳು.

ಮೂರು ಲಕ್ಷ ರೂಪಾಯಿ ಟೆಂಡರ್ ಹಣ ಮಂಜೂರು ಮಾಡಲು ಆರೋಪಿ ಅಧಿಕಾರಿಗಳು 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ದಾವಣಗೆರೆ ಮೂಲದ ಗುತ್ತಿಗೆದಾರ ಸಿ.ಅಣ್ಣಪ್ಪ ಎಂಬುವರು ಈ ಕುರಿತು ಹಾವೇರಿ ಎಸಿಬಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಸಿಬಿ ಡಿವೈಎಸ್​ಪಿ ಗೋಪಿ ಬಿ.ಆರ್ ಮತ್ತು ಎಸಿಬಿ ಸಿಪಿಐ ಬಸವರಾಜ ಬುದ್ನಿ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದೆ. 15 ಸಾವಿರ ರೂಪಾಯಿ ಜಪ್ತಿ ಮಾಡಿಕೊಳ್ಳಲಾಗಿದೆ.


ಇದನ್ನೂ ಓದಿ: ಮಡಿಕೇರಿ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಎಫ್​ಡಿಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.