ಸೆಪ್ಟೆಂಬರ್​​ 6 ರಿಂದ ಆರರಿಂದ ಎಂಟನೇ ತರಗತಿಗಳು ಆರಂಭ: ಶಿಕ್ಷಣ ಸಚಿವ ನಾಗೇಶ್​

author img

By

Published : Sep 2, 2021, 8:53 PM IST

Minister Nagesh

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಅವರು ಹಾವೇರಿ ನಗರದ ಉರ್ದು ಮಾಧ್ಯಮ ಶಾಲೆಗಳಿಗೆ ಇಂದು ಭೇಟಿ ನೀಡಿದರು.

ಹಾವೇರಿ: ಸೆಪ್ಟೆಂಬರ್​​ 6 ರಿಂದ 6 ,7,8 ನೇ ತರಗತಿಗಳನ್ನು ಆರಂಭಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್​

ನಗರದ ಎರಡನೇ ನಂಬರ್ ಮತ್ತು ಉರ್ದು ಮಾಧ್ಯಮ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಶಾಲಾರಂಭದ ಕುರಿತಂತೆ ಮಾಹಿತಿ ಪಡೆದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸಿ ಸದ್ಯ 9 ರಿಂದ 12ನೇ ತರಗತಿಗಳನ್ನು ಆರಂಭಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 6 ರಿಂದ 8 ನೇ ತರಗತಿ ಆರಂಭಿಸಿ ಒಂದು ವಾರ ಕಾಲ ನೋಡುತ್ತೇವೆ. ಪ್ರಸ್ತುತ ಕೊರೊನಾ ಸ್ಥಿತಿಗತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಒಂದನೇ ತರಗತಿಯಿಂದ ಶಾಲೆ ಆರಂಭಿಸುತ್ತೇವೆ. ಮಕ್ಕಳ ಶಿಕ್ಷಣದ ಜೊತೆಗೆ ನಾವು ಅವರ ಆರೋಗ್ಯಕ್ಕೆ ಸಹ ನೀಡುತ್ತೇವೆ ಎಂದರು.

ನಗರ ಪ್ರದೇಶಗಲ್ಲಿ ಖಾಸಗಿ ಶಾಲಾ ಶುಲ್ಕ ವಸೂಲಾತಿ ಕುರಿತಂತೆ ಆಂಧ್ರಪ್ರದೇಶದಲ್ಲಿ ನೂತನ ನಿಯಮ ಜಾರಿಗೆ ತಂದಿದ್ದಾರೆ. ಅಲ್ಲಿ ಆ ನಿಯಮ ಯಶಸ್ವಿಯಾದರೆ ಸಿಎಂ ಜೊತೆ ಚರ್ಚಿಸಿ ಇಲ್ಲಿಯೂ ಸಹ ಜಾರಿಗೆ ತರುವುದಾಗಿ ತಿಳಿಸಿದರು.

ಶಿಕ್ಷಕರು ಎಷ್ಟು ಸಂಖ್ಯೆಯಲ್ಲಿ ತರಬೇತಿ ಹೊಂದುತ್ತಾರೆ ಎನ್ನುವುದರ ಮೇಲೆ ಸರ್ಕಾರ ಆಂಗ್ಲಮಾಧ್ಯಮ ಶಾಲೆ ಆರಂಭಿಸುವ ಚಿಂತನೆ ನಡೆಸಿದೆ. ವರ್ಷಕ್ಕೆ ಒಂದು ಸಾವಿರ ಶಾಲೆಗಳನ್ನು ಆರಂಭಿಸುವ ಗುರಿ ಇದೆ.

ಎನ್ಇಪಿ ಜಾರಿಗೆಯಾದರೆ ಶಿಕ್ಷಣ ಇಲಾಖೆಯ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜೋಶಿ ಮಗಳ ಮದುವೆಯಲ್ಲಿ ಕೋವಿಡ್​ ನಿಯಮ ಉಲ್ಲಂಘನೆ ಆರೋಪ: ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.