ನಾನು ಯಾರನ್ನೂ ರಕ್ಷಣೆ ಮಾಡಿಲ್ಲ, ನಾನೇ ಸೂಕ್ತ ತನಿಖೆಗೆ ಆಗ್ರಹಿಸಿದ್ದೇನೆ : ಪ್ರಜ್ವಲ್ ರೇವಣ್ಣ

author img

By

Published : Jul 19, 2022, 8:41 PM IST

prajwal-revanna

ಹಾಸನದ ಆನೆ ಕೊಂದು ದಂತ ಮಾರಾಟಕ್ಕೆ ಯತ್ನಿಸಿದವರನ್ನು ನಾನು ರಕ್ಷಣೆ ಮಾಡುತ್ತಿಲ್ಲ. ಮನೇಕಾ ಗಾಂಧಿ ಅವರು ಸೂಕ್ತ ಮಾಹಿತಿ ಇಲ್ಲದೇ ದೂರುತ್ತಿದ್ದಾರೆ. ಅವರಲ್ಲಿ ದಾಖಲೆಗಳಿದ್ದಲ್ಲಿ ಕೊಡಲಿ ಕಾನೂನಿಗೆ ತಲೆಬಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

ಹಾಸನ: ಮಾರ್ಚ್ 19 ರಂದು ಸತ್ತ ಆನೆಯಿಂದ ದಂತ ಕತ್ತರಿಸಿದ್ದ ಆರೋಪಿಗಳು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಪ್ರಕರಣ ಸಂಬಂಧ ಹಾಸನ ಅರಣ್ಯ ಇಲಾಖೆ ಕೂಡಾ ಕೇಸ್ ದಾಖಲಿಸಿ ತನಿಖೆ ಆರಂಭಿಸಿತ್ತು. ಆದರೀಗ ಈ ಆರೋಪಿಗಳ ರಕ್ಷಣೆಗೆ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಮನೇಕಾ ಗಾಂಧಿ ಪ್ರಜ್ವಲ್ ರೇವಣ್ಣ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ದಂತಕ್ಕಾಗಿ ಹಾಸನ ತಾಲೂಕಿನ ವೀರಾಪುರ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ ಸಲಗ ಕೊಂದಿದ್ದ ಆರೋಪಿಗಳಾದ ಚಂದ್ರೆಗೌಡ ಮತ್ತು ಇತರರು ಬಳಿಕ ಅದನ್ನು ಹೂತು ಹಾಕಿದ್ದರು. ಸ್ಥಳೀಯ ವಲಯ ಅರಣ್ಯ ಅಧಿಕಾರಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಮತ್ತು ಕೇಸ್​ನಲ್ಲಿ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್​ಎಫ್​​ಒ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಈ ಕೇಸ್​ನಲ್ಲಿ ಸಿಎಂ ಮಧ್ಯ ಪ್ರವೇಶ ಮಾಡಿ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ನಾನು ಯಾರನ್ನು ರಕ್ಷಣೆ ಮಾಡಿಲ್ಲ, ನಾನೇ ಸೂಕ್ತ ತನಿಖೆ ಮಾಡಿ ಎಂದಿದ್ದೇನೆ

ಸುಖಾಸುಮ್ಮನೆ ಆರೋಪ : ಈ ಬಗ್ಗೆ ಸಂಸಂದ ಪ್ರಜ್ವಲ್ ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿದ್ದು, ನಿನ್ನೆ ರಾತ್ರಿ ನನಗೆ ಒಂದು ಫೋನ್ ಕರೆ ಬಂತು. ಆನೆ ಕೊಂದ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ನಿಂತಿದ್ದಾರೆ ಎಂದು ಮಾಜಿ ಸಚಿವೆ ಮನೇಕಾ ಗಾಂಧಿಯವರು ಆರೋಪಿಸಿದ್ದಾರೆ. ಮನೇಕಾ ಗಾಂಧಿವರಿಗೆ ಈ ಬಗ್ಗೆ ಪೂರ್ಣ ಮಾಹಿತಿಯೇ ಇಲ್ಲ. ನನಗೆ ಈ ಬಗ್ಗೆ ಗೊತ್ತಾಗಿದ್ದೆ ಮೊನ್ನೆ ನಡೆದ ದಿಶಾ ಸಭೆಯಲ್ಲಿ ಎಂದರು.

ನಿಷ್ಪಕ್ಷಪಾತ ತನಿಖೆ ಆಗಲಿ : ಆರೋಪಿಗಳು ಬೇಲ್ ತೆಗೆದುಕೊಂಡು ಬಂದಿದ್ದಾರೆ ಎಂದು ಮನೇಕಾ ಗಾಂಧಿ ಆರೋಪಿಸಿದ್ದಾರೆ. ಬೇಲ್ ಕೊಡುವ ವಿಚಾರ ಕೋಟ್೯ಗೆ ಬಿಟ್ಟಿದ್ದು, ಬೇಲ್ ಪ್ರಜ್ವಲ್ ರೇವಣ್ಣ ಕೊಡ್ತಾನಾ? ಇದು ಸತ್ಯಕ್ಕೆ ದೂರವಾದ ವಿಷಯ. ಆರೋಪ ಮಾಡಬೇಕಾದರೆ ಸೂಕ್ತ ಸಾಕ್ಷಾಧಾರಗಳನ್ನು ಇಟ್ಟುಕೊಂಡು ಆರೋಪ ಮಾಡಬೇಕು ಈ ರೀತಿ ಸುಖಾಸುಮ್ಮನೆ ಆರೋಪಿಸುವುದು ಸರಿಯಲ್ಲ.

ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಮೂಲಕ ಆರು ತಿಂಗಳ ಬಂಧಿಸಬೇಕು ಅಂತ ನಾನೇ ಅರಣ್ಯ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಅದನ್ನು ಬಿಟ್ಟು ನಾನು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸಂಸದ ಪ್ರಜ್ವಲ್​ ರೇವಣ್ಣ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ : ಹಿಂದೂಗಳು ಇರೋ ಕಡೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ, ಖಂಡಿತ ಸೋಲುತ್ತಾರೆ: ಕೆ.ಎಸ್. ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.