ಬೇಲೂರು, ಹಳೆಬೀಡು, ಸೋಮನಾಥಪುರದ ಹೊಯ್ಸಳ ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ
Published: Feb 1, 2022, 4:54 AM


ಬೇಲೂರು, ಹಳೆಬೀಡು, ಸೋಮನಾಥಪುರದ ಹೊಯ್ಸಳ ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ
Published: Feb 1, 2022, 4:54 AM

ಕರ್ನಾಟಕ ಶಿಲ್ಪಕಲೆ ಶ್ರೀಮಂತಿಕೆಯ ಹೊಯ್ಸಳ ದೇವಾಲಯಗಳು ವಿಶ್ವ ಪಾರಂಪರಿಕ ಪಟ್ಟಿಗೆ ಶೀಘ್ರದಲ್ಲೇ ಸೇರುವ ಸಾಧ್ಯತೆ ಇವೆ.
ಬೆಂಗಳೂರು: 2022-23ನೇ ಸಾಲಿನ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಕರ್ನಾಟಕದ ಐತಿಹಾಸಿಕ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳರ ಕಾಲದ ದೇವಾಲಯಗಳನ್ನು ಭಾರತ ನಾಮನಿರ್ದೇಶನ ಮಾಡಿದೆ.
ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ದೇಶದ ಈ ಐತಿಹಾಸಿಕ ದೇವಾಲಯಗಳನ್ನು ಅಂತಿಮಗೊಳಿಸಿ ನಾಮನಿರ್ದೇಶಿಸಲಾಗಿದೆ ಎಂದು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಮಾಹಿತಿ ನೀಡಿದೆ.
ಹೊಯ್ಸಳ ಶಿಲ್ಪಕಲಾ ಶೈಲಿಯ ಈ ದೇವಾಲಯಗಳು 2014ರಿಂದ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿವೆ. ಇವು ನಮ್ಮ ದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಗೆ ಇವು ಸಾಕ್ಷಿಯಾಗಿವೆ.
2022, ಜ.31 ರಂದು ಯುನೆಸ್ಕೋ ಭಾರತದ ಖಾಯಂ ಪ್ರತಿನಿಧಿ ವಿಶಾಲ್ ವಿ ಶರ್ಮಾ ಅವರು ಔಪಚಾರಿಕವಾಗಿ ಯುನೆಸ್ಕೋ ವಿಶ್ವ ಪರಂಪರೆಯ ನಿರ್ದೇಶಕ ಲಾಜ್ ಎಲುಂಡೊಗೆ ಹೊಯ್ಸಳ ಶೈಲಿಯ ದೇವಾಲಯಗಳನ್ನು ಪಾರಂಪರಿಕ ಪಟ್ಟಿಗೆ ಸೇರಿಸುವ ಕುರಿತು ನಾಮನಿರ್ದೇಶನ ಸಲ್ಲಿಸಿದ್ದಾರೆ. ವಿಶ್ವ ಪರಂಪರೆಯ ಕೇಂದ್ರಕ್ಕೆ ದಾಖಲೆ ಸಲ್ಲಿಕೆ ಬಳಿಕ ತಾಂತ್ರಿಕ ಪರಿಶೀಲನೆ ಮಾಡಲಾಗುತ್ತದೆ.
ನಾಮನಿರ್ದೇಶನ ಸಲ್ಲಿಕೆ ಬಳಿಕ ಈ ವರ್ಷದ ಸೆಪ್ಟೆಂಬರ್/ಅಕ್ಟೋಬರ್ನಲ್ಲಿ ಐತಿಹಾಸಿಕ ತಾಣಗಳಿಗೆ ಯುನೆಸ್ಕೋ ತಂಡ ಭೇಟಿ ನೀಡಿ ಮೌಲ್ಯಮಾಪನ ಮಾಡುತ್ತದೆ. ನಂತರ ಮುಂದಿನ ವರ್ಷದ ಜುಲೈ/ಆಗಸ್ಟ್ ಅಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.
ಹೊಯ್ಸಳರ ದೇವಾಲಯಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ ಮಾಡಿರುವುದು ದೇಶಕ್ಕೆ ಅತ್ಯಂತ ಹೆಮ್ಮೆಯ ಮತ್ತು ಸಂತಸದ ಕ್ಷಣವಾಗಿದೆ ಎಂದು ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.
ವಿಶ್ವಪಾರಂಪರಿಕ ಪಟ್ಟಿಗೆ ನಾಮನಿರ್ದೇಶಿಸಲು ಭಾರತಕ್ಕೆ ಹಮ್ಮೆಯಾಗುತ್ತದೆ. ಏಶಿಯನ್ ಕಲೆಯ ಈ ಮಾಸ್ಟರ್ಪೀಸ್ ಶಿಲ್ಪ ಕೆತ್ತನೆಯನ್ನು ಇತಿಹಾಸಕಾರರು ಗುರುತಿಸುತ್ತಾರೆ ಎಂದು ಭಾರತದ ಪ್ರತಿನಿಧಿ ಶರ್ಮಾ ಟ್ವೀಟ್ ಮಾಡಿದ್ದಾರೆ.
