ಬಸವರಾಜ ಬೊಮ್ಮಾಯಿ ಜಾತಿವಾದಿ ಮುಖ್ಯಮಂತ್ರಿ: ಸಿದ್ದರಾಮಯ್ಯ ಗುಡುಗು

author img

By

Published : Aug 20, 2022, 5:23 PM IST

basavaraj-bommai-was-a-casteist-cm-says-ex-cm-siddaramaiah

ರಾಜ್ಯದ ಮುಖ್ಯಮಂತ್ರಿ ಎಂದರೆ ಎಲ್ಲರಿಗೂ ತಂದೆ ಸಮಾನ. ಎಲ್ಲರ ಕಷ್ಟ ಸುಖಗಳಿಗೂ ಜಾತಿ ಭೇದವಿಲ್ಲದೆ ಪರಿಹಾರ ನೀಡಬೇಕು. ಆ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

ಹಾಸನ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್​ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಹೋದ್ರಲ್ಲ, ಅದೇ ರೀತಿ ಮುಸಲ್ಮಾನ್ ಯುವಕರು ಸಾವಿಗೀಡಾದಾಗ ಅವರ ಮನೆಗೂ ಹೋಗಿ ಸಾಂತ್ವನ ಹೇಳಬೇಕಲ್ವಾ?. ಮುಖ್ಯಮಂತ್ರಿ ಆ ಕೆಲಸ ಯಾಕೆ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಗುಡುಗಿದರು.

ಶುಕ್ರವಾರ ರಾತ್ರಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಿಂದುತ್ವವಾದ ಪ್ರತಿಪಾದಿಸುತ್ತಿದ್ದಾರೆ. ಹಿಂದೂಗಳು ಸಾವಿಗೀಡಾದಾಗ ಅವರ ಮನೆಗೆ ತೆರಳಿ, ಮುಸಲ್ಮಾನರ ಮನೆಗೆ ತೆರಳದಿರುವುದು ಎಷ್ಟು ಸರಿ?. ರಾಜ್ಯದ ಮುಖ್ಯಮಂತ್ರಿ ಎಂದರೆ ಎಲ್ಲರಿಗೂ ತಂದೆ ಸಮಾನ. ಎಲ್ಲರ ಕಷ್ಟ ಸುಖಗಳಿಗೂ ಜಾತಿ ಭೇದವಿಲ್ಲದೆ, ಪರಿಹಾರ ನೀಡಬೇಕು. ಆ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಲಿಲ್ಲ ಎಂದು ಹರಿಹಾಯ್ದರು.

ಬಸವರಾಜ ಬೊಮ್ಮಾಯಿ ಜಾತಿವಾದಿ ಮುಖ್ಯಮಂತ್ರಿ: ಸಿದ್ದರಾಮಯ್ಯ ಗುಡುಗು

ಬಿಜೆಪಿಯವರು ಯಾವುದೇ ನೀಚ ಕೆಲಸ ಮಾಡಲು ತಯಾರಾಗಿದ್ದಾರೆ. ಅವರು ನೀಚರು. ನಮ್ಮದು ದಾವಣಗೆರೆ ಸಮಾವೇಶ ಆಯ್ತಲ್ಲಾ. ಆದಾದ ಮೇಲೆ ಆತಂಕಗೊಂಡಿದ್ದಾರೆ. ಅವರಿಗೆ ಸೋಲಿನ ಭಯ ಕಾಡಿದೆ. ಅದಕ್ಕೆ ನಾನು ಹೋದಲೆಲ್ಲ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದಾರೆ. ಇದು ರಾಜ್ಯ ಮಟ್ಟದ ಸರ್ಕಾರಿ ಪ್ರಾಯೋಜಕತ್ವದ ಪ್ರತಿಭಟನೆ ಎಂದು ಸಿದ್ದರಾಮಯ್ಯ ದೂರಿದರು.

ಇದನ್ನೂ ಓದಿ: ಮೊಟ್ಟೆ ಪ್ರಕರಣ: ಬೆಂಗಳೂರಲ್ಲಿ ಮಾಜಿ ಸಿಎಂಗಿಲ್ಲ ಸೂಕ್ತ ಭದ್ರತೆ.. ಬಿಜೆಪಿ ಶಾಸಕರಿಗೆ ಭರ್ಜರಿ ಸುರಕ್ಷತೆ

ಹಿಂದೂ ಮಹಾಸಭಾದ ಸಾವರ್ಕರ್ ಅಂತ ಇದ್ದಾರಲ್ಲ, ಅವರ ಬಗ್ಗೆ ಮಾತಾಡಿದೆ ಅಂತ ಕಪ್ಪು ಬಾವುಟ ತೋರಿಸುತ್ತಿದ್ದಾರೆ. ದೇರ್ ಈಸ್ ನೋ ಇಂಟಲಿಜೆನ್ಸ್, ದೇರ್ ಈಸ್ ನೋ ಗವರ್ನಮೆಂಟ್, ದೇರ್ ಈಸ್ ಗೌರ್ನೆನ್ಸ್ ಅಟ್ ಆಲ್. ಇದನ್ನು ನಾನು ಹೇಳಿಲ್ಲ. ಸಚಿವ ಮಾಧುಸ್ವಾಮಿ ಅವರೇ ಹೇಳಿದ್ದಾರೆ. ನಾವು ಸರ್ಕಾರ ನಡೆಸುತ್ತಿಲ್ಲ, ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ. ಇದರ ಅರ್ಥ ಏನು ಎಂದು ಕಿಡಿಕಾರಿದರು.

ತಿತಿಮತಿಯಲ್ಲಿ 10-15 ಹುಡುಗರು ಸೇರ್ಕೊಂದು ಗೋ ಬ್ಯಾಕ್ ಸಿದ್ದರಾಮಯ್ಯ ಅಂಥ ಘೋಷಣೆ ಕೂಗುತ್ತಿದ್ದರು. ಅದಾದ ಮೇಲೆ ಮಡಿಕೇರಿಯಲ್ಲೂ ಇದ್ದರು. ಪೊಲೀಸರು ರೌಂಡ್ ಅಪ್ ಮಾಡಿ ಕರ್ಕಂಡು ಹೋಗಲು ಆಗ್ತಿರ್ಲಿಲ್ವಾ?. ಆದೇನ್ ದೊಡ್ಡ ಕೆಲಸನಾ?. ಅವರೇ ಬಿಟ್ಟು ಸುಮ್ಮನೆ ನಿಂತಿದ್ದಾರೆ ಎಂದು ಪೊಲೀಸ್ ಇಲಾಖೆ ಮೇಲೂ ಕಿಡಿಕಾರಿದರು. ನಾನು ಆ.26ರಂದು ಕೊಡಗಿಗೆ ಹೋಗಿ ಎಸ್​ಪಿ ವಿರುದ್ಧವಾಗಿ ದೊಡ್ಡ ಪ್ರತಿಭಟನೆ ಮಾಡ್ತಾ ಇದ್ದೀನಿ ಎಂದು ತಿಳಿಸಿದರು.

ಇದೇ ವೇಳೆ ಲಿಂಗಾಯತ ವಿಷಯವಾಗಿ ನಾನು ರಂಭಾಪುರಿ ಶ್ರೀ ಬಳಿ ನೋವು ತೋಡಿಕೊಂಡಿಲ್ಲ. ಪಶ್ಚಾತ್ತಾಪ ಪಟ್ಟಿಲ್ಲ, ಏನಾಯ್ತು ಅಂತ ವಿವರಿಸಿದ್ದೇನೆ ಅಷ್ಟೇ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಯಾವ ಪಶ್ಚಾತ್ತಾಪವೂ ಇಲ್ಲ, ಧರ್ಮ ಒಡೆಯುವ ಉದ್ದೇಶ ಇರಲಿಲ್ಲ ಎಂದು ಶ್ರೀಗೆ ವಿವರಣೆ ಕೊಟ್ಟಿದ್ದೇನಷ್ಟೆ: ಸಿದ್ದರಾಮಯ್ಯ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.