ಶಿರಹಟ್ಟಿಯಲ್ಲಿ 7 ಕುರಿ, ನಾಯಿ ಬಲಿ.. ತೋಳದ ದಾಳಿ ಎಂದ ಅರಣ್ಯ ಇಲಾಖೆ

author img

By

Published : Sep 13, 2022, 10:12 AM IST

sheep killed in Gadag

ಕಪ್ಪತ್ತಗುಡ್ಡದಲ್ಲಿ ಚಿರತೆ ಇರುವುದು ನಿಜ. ಆದ್ರೆ ಅದು ಜನ, ಜಾನುವಾರುಗಳಿಗೆ ಇದುವರೆಗೂ ತೊಂದರೆ ಕೊಟ್ಟಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಳಿ ಚಿರತೆ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅನುಮಾನಕ್ಕೆ ಪುಷ್ಠಿ ನೀಡುವಂತೆ ಸುಮಾರು 7 ಕುರಿ ಮತ್ತು ಒಂದು ನಾಯಿಯನ್ನು ತಿಂದು ಹಾಕಿದೆ ಎಂದು ಕುರಿಗಾಹಿಗಳು ಹೇಳಿದ್ದಾರೆ.

ಜಮೀನಿಗೆ ರಾತ್ರಿ ವೇಳೆ ಜಮೀನಿಗೆ ನುಗ್ಗಿ ಲಕ್ಷ್ಮಣ ಹಾಡ್ಕರ ಎಂಬ ಕುರಿಗಾಹಿಗೆ ಸೇರಿದ 7 ಕುರಿಗಳನ್ನು ಮತ್ತು ಒಂದು ಸಾಕು ನಾಯಿಯನ್ನು ರಾತ್ರಿ ಹೊತ್ತು ತಿಂದು ಹೋಗಿದೆ ಎನ್ನಲಾಗ್ತಿದೆ. ಕಪ್ಪತ್ತಗುಡ್ಡದಲ್ಲಿ ಚಿರತೆ ಇರುವುದು ನಿಜ. ಆದ್ರೆ ಅದು ಜನ, ಜಾನುವಾರುಗಳಿಗೆ ಇದುವರೆಗೂ ತೊಂದರೆ ಕೊಟ್ಟಿಲ್ಲ. ಯಾಕೆಂದರೆ ಕಪ್ಪತ್ತಗುಡ್ಡ ಅರಣ್ಯದಲ್ಲಿ ಸಾಕಷ್ಟು ಸಾದು ಕಾಡು ಪ್ರಾಣಿಗಳು ಇವೆ. ಜಿಂಕೆ, ಕೃಷ್ಣಮೃಗ, ಕಾಡುಹಂದಿ, ಮೊಲಗಳಂತ‌ ಪ್ರಾಣಿಗಳನ್ನೇ ತಿಂದು ಬದುಕುತ್ತಿದೆ.

ಚಿರತೆಯ ಸಂಸ್ಕೃತಿ ಇದಲ್ಲ: ಕೆಲ ದಿನಗಳ ಹಿಂದೆ ಅರಣ್ಯಕ್ಕೆ ಮೇಯಲು ಬಂದಿದ್ದ ಹಸುವೊಂದನ್ನ ಚಿರತೆ ತಿಂದಿತ್ತು. ಆದರೆ ಈ ರೀತಿ ಜಮೀನಿಗೆ ನುಗ್ಗಿ ತಿಂದ ಉದಾಹರಣೆ ಇಲ್ಲ. ಜೊತೆಗೆ ಮಳೆಯಾಗಿದ್ದರಿಂದ ಅದರ ಹೆಜ್ಜೆ ಗುರುತುಗಳು ಸಹ ಮೂಡಿಲ್ಲ. ಹೀಗಾಗಿ ಸ್ಪಷ್ಟವಾಗಿ ಯಾವ ಪ್ರಾಣಿ ಅಂತಾ ಗೊತ್ತಾಗಿಲ್ಲ. ಚಿರತೆ ಒಂದೇ ಪ್ರಾಣಿಯನ್ನ ಬೇಟೆಯಾಡಿ ಕತ್ತುಹಿಡಿದು ಹೊತ್ತೊಯ್ದು ಮರ ಏರಿ ಕೂರುತ್ತದೆ. ಅದು ಪೂರ್ತಿ ಖಾಲಿಯಾಗುವವರೆಗೂ ಬೇರೆ ಪ್ರಾಣಿಯನ್ನು ಬೇಟೆಯಾಡುವುದಿಲ್ಲ. ಹೀಗಾಗಿ ಇಲ್ಲಿ ಚಿರತೆ ಬಂದಿರುವ ಸಾಧ್ಯತೆಯಿಲ್ಲ.

ರಾತ್ರಿಯಾಗಿದ್ದರಿಂದ ಕುರಿಗಾಹಿಗಳು ತೋಳವನ್ನೇ ಚಿರತೆ ಅಂತಾ ತಿಳಿದಿರಬಹುದು. ಏಕೆಂದರೆ ತೋಳವು ಕೈಗೆ ಸಿಕ್ಕಷ್ಟು ಪ್ರಾಣಿಗಳನ್ನು ಅರ್ಧ ತಿಂದು ಹೋಗುತ್ತದೆ. ಕೊಂದ ಪ್ರಾಣಿಗಳನ್ನು ಅಲ್ಲಲ್ಲಿ ಚೆಲ್ಲಾಡಿ ಹೋಗುತ್ತದೆ. ಹೀಗಾಗಿ ಇದು ತೋಳ ಆಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸತ್ತ ಕುರಿಗಳ ಮರಣೋತ್ತರ ಪರೀಕ್ಷೆ ಮಾಡಲಾಗ್ತಿದೆ. ವರದಿ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಶಿರಹಟ್ಟಿ ಆರ್​ಎಫ್​​ಓ ಸುಮಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿರತೆ ಹಾವಳಿ: ಅಂಜನಾದ್ರಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.