ಮಹಿಳೆಗೆ ವಂಚಿಸಿ ಮೊಬೈಲ್ ಎತ್ಕೊಂಡ್ಹೋಗಿದ್ದ.. ಗ್ರಹಚಾರ ನೆಟ್ಟಗಿಲ್ಲದೆ ಸಿಕ್ಕಾಕಿಕೊಂಡು ಯರ್ರಾಬಿರ್ರೀ ಏಟು ತಿಂದ..

author img

By

Published : Sep 5, 2021, 8:27 PM IST

Public beat and hand over mobile theft to police

ಇಂದು ಮಹಿಳೆ ನಗರಕ್ಕೆ ಮೊಬೈಲ್​​ ಕೊಳ್ಳಲು ಬಂದ ವೇಳೆ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಖದೀಮನಿಗೆ ಮಹಿಳೆ ಹಾಗೂ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಗದಗ ಶಹರ ಪೊಲೀಸರ ವಶದಲ್ಲಿದ್ದಾನೆ..

ಗದಗ : ಪೋಷಕರಿಗೆ, ಅಕ್ಕ-ತಂಗಿಗೆ ಕರೆ ಮಾಡುವುದಾಗಿ ಹೇಳಿ ಮೊಬೈಲ್​ ಪಡೆದು ಫೋನ್​ ಸಮೇತ ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಕಲಾಮಂದಿರ ಬಳಿ ನಡೆದಿದೆ.

ಸಾರ್ವಜನಿಕರಿಂದ ಖದೀಮನಿಗೆ ಹಿಗ್ಗಾಮುಗ್ಗಾ ಥಳಿತ

ಯಮನೂರ ಗುಳ್ಳೆದಗುಡ್ಡ ಮೊಬೈಲ್​ ಖದೀಮ. ಕಳೆದೆರಡು ದಿನಗಳ ಹಿಂದೆ ಈತ ನಗರದ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಬಳಿಯ ಹೋಟೆಲ್​​ವೊಂದರ ಬಳಿ ಮಹಿಳೆಯೋರ್ವರಿಂದ ತಾಯಿಗೆ ಕರೆ ಮಾಡುವುದಾಗಿ ಹೇಳಿ ಮೊಬೈಲ್​ ಪಡೆದು ಹಾಗೇ ಮಾತನಾಡುತ್ತ ಫೋನ್​ ಸಮೇತ ಎಸ್ಕೇಪ್​​ ಆಗಿದ್ದ.

ಇಂದು ಮಹಿಳೆ ನಗರಕ್ಕೆ ಮೊಬೈಲ್​​ ಕೊಳ್ಳಲು ಬಂದ ವೇಳೆ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಖದೀಮನಿಗೆ ಮಹಿಳೆ ಹಾಗೂ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಗದಗ ಶಹರ ಪೊಲೀಸರ ವಶದಲ್ಲಿದ್ದಾನೆ.

ಓದಿ: ಈ ವರ್ಷ 5 ಸಾವಿರ ಶಿಕ್ಷಕರ ನೇಮಕಾತಿ: ಶಿಕ್ಷಕರ ದಿನದಂದು ಸಿಎಂ ಸಿಹಿಸುದ್ದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.