ಚಿತ್ರ ಸಾಹಿತ್ಯ ಲೋಕದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಕಿರಣ ಜತ್ತಿ

author img

By

Published : Nov 3, 2022, 2:22 PM IST

kiran jatti

ಕನ್ನಡಕ್ಕೆ ಏನಾದ್ರು ಕೊಡುಗೆ ನೀಡಬೇಕೆಂಬ ಮಹದಾಸೆಯಿಂದ ಹುಬ್ಬಳ್ಳಿಯ ಲಕ್ಷ್ಮೀ ನಗರದ ನಿವಾಸಿ ಕಿರಣ ಜತ್ತಿ ಎಂಬುವರು ಇದುವರೆಗೂ 2,800 ಕ್ಕೂ ಹೆಚ್ಚು ಚಿತ್ರ ಕವನಗಳನ್ನು ಬರೆದು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ.

ಹುಬ್ಬಳ್ಳಿ: ಸಾಹಿತಿಗಳು ತಮಗೆ ತೋಚಿದ್ದನ್ನು, ಕಂಡದ್ದನ್ನು ರಸವತ್ತಾಗಿ ಕವನಗಳ ಮೂಲಕ ಪದಪುಂಜಗಳನ್ನು ಜೋಡಿಸಿ ಓದುಗರ ಕೈಗೆ ನೀಡುತ್ತಾರೆ. ಇದೀಗ ಹುಬ್ಬಳ್ಳಿಯ ಸಾಹಿತಿಯೊಬ್ಬರು ಚಿತ್ರ ಸಾಹಿತ್ಯ ಲೋಕದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.

ಹೌದು, ಹುಬ್ಬಳ್ಳಿಯ ಲಕ್ಷ್ಮೀ ನಗರದ ನಿವಾಸಿ ಕಿರಣ ಜತ್ತಿ ಎಂಬುವರು ಕನ್ನಡಕ್ಕೆ ಏನಾದ್ರು ಕೊಡುಗೆ ನೀಡಬೇಕೆಂಬ ಮಹದಾಸೆಯಿಂದ ಕಳೆದ 15 ವರ್ಷಗಳಿಂದ ಕನ್ನಡ ಚಿತ್ರಾಧಾರಿತ ಕವನಗಳನ್ನು ಬರೆಯುತ್ತಾ ಬಂದಿದ್ದಾರೆ. ಇದುವರೆಗೂ 2,800 ಕ್ಕೂ ಹೆಚ್ಚು ಚಿತ್ರ ಕವನಗಳನ್ನು ಬರೆದು ಕನ್ನಡಾಂಬೆಗೆ ಕೊಡುಗೆ ನೀಡಿದ್ದಾರೆ.

ಚಿತ್ರ ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಣ ಜತ್ತಿ

ಇದನ್ನೂ ಓದಿ: ನನ್ನ‌ ಹೆಸರು ಬಳಸಿಕೊಂಡು ಹಣ ಕೇಳಿದರೆ ಕೊಡಬೇಡಿ: ಚಂದ್ರಶೇಖರ ಕಂಬಾರ

ಬಸವ ಸಂಸ್ಕೃತಿ ಶಾಲೆ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿರುವ ಕಿರಣ, ಬಡತನ, ಸಾಂಸ್ಕೃತಿ, ಸಿರಿತನ, ಬರಡು, ಜನಸಂಖ್ಯೆ, ದೇಶಾಭಿಮಾನ, ಹಿಂಸೆ ಸೇರಿದಂತೆ ಹಲವಾರು ಚಿತ್ರಗಳಿಗೆ ತಕ್ಕಂತೆ ಕೈ ಬರಹದಲ್ಲೇ ಚಿತ್ರಗಳನ್ನು ಆಧರಿಸಿ ಕವನ ಬರೆದಿದ್ದಾರೆ.

ಕನ್ನಡ ಕವನಗಳನ್ನು ರಚನೆ ಮಾಡಿ, ಮುಂಬರುವ ಪೀಳಿಗೆಗೆ ಕನ್ನಡಾಭಿಮಾನ ಮೂಡಿಸುತ್ತಿರುವುದು‌ ಹೆಮ್ಮೆಯ ಸಂಗತಿ. ಹೀಗಾಗಿ, ಕನ್ನಡ ರಾಜ್ಯೋತ್ಸವದಂದು ಕಿರಣ ಜತ್ತಿ ಅವರ ಎಲ್ಲಾ ಚಿತ್ರಕಾವ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಸಾಕಷ್ಟು ಮಂದಿ ಅವರ ಕವನಗಳನ್ನು ಓದುವುದರ ಮೂಲಕ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕೆ ಸಿವನ್, ನಟ ದತ್ತಣ್ಣ‌, ಸಾಹಿತಿ ಕೃಷ್ಣೇಗೌಡ ಸೇರಿ 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.