ವಿಮಾನ ಹಾಗೂ ಸ್ಪೋರ್ಟ್ಸ್ ಕಾರು ತಯಾರಿಸಿದ ಹುಬ್ಬಳ್ಳಿ ವಿದ್ಯಾರ್ಥಿಗಳು

author img

By

Published : Sep 23, 2022, 3:50 PM IST

Updated : Sep 23, 2022, 5:13 PM IST

Hubli students made airplane and sports car

ವಿದ್ಯಾರ್ಥಿಗಳು ತಯಾರಿಸಿರುವ ಕಾರು ಹಾಗೂ ವಿಮಾನವನ್ನು ಗೇಟರ್ ನೋಯ್ಡಾದಲ್ಲಿ ನಡೆದ ಸೀ ಇಂಡಿಯಾ ಕಾಂಪಿಟೇಶನ್​ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ.

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿಮಾನ ಹಾಗೂ ಅತಿ ವೇಗದ ಸ್ಪೋರ್ಟ್ಸ್​ ಕಾರುಗಳನ್ನು ತಯಾರಿಸುವ ಮೂಲಕ ಸೀ ಇಂಡಿಯಾ ರಾಷ್ಟ್ರೀಯ ಮಟ್ಟದ ಕಾಂಪಿಟೇಶನ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡು ಹುಬ್ಬಳ್ಳಿ ಹಿರಿಮೆ ಹೆಚ್ಚಿಸಿದ್ದಾರೆ.

ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಎರಡು ಪ್ರತ್ಯೇಕ ತಂಡಗಳು ಅತಿ ವೇಗದ ಕಾರು ಹಾಗೂ 7.5 ಭಾರವನ್ನು ಹೊತ್ತು ಮೇಲಕ್ಕೆ ಹಾರುವ ಸಾಮರ್ಥ್ಯ ಹೊಂದಿರುವ ವಿಮಾನ ತಯಾರಿಸಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ತಯಾರಿಸಿರುವ ಕಾರು ಹಾಗೂ ವಿಮಾನವನ್ನು ಗೇಟರ್ ನೋಯ್ಡಾದಲ್ಲಿ ನಡೆದ ಸೀ ಇಂಡಿಯಾ ಕಾಂಪಿಟೇಶನ್​ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ.

ವಿಮಾನ ಹಾಗೂ ಸ್ಪೋರ್ಟ್ಸ್ ಕಾರು ತಯಾರಿಸಿದ ಹುಬ್ಬಳ್ಳಿ ವಿದ್ಯಾರ್ಥಿಗಳು

ವಿಮಾನ ತಯಾರಿಸಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ಒಂದು ಲಕ್ಷ ಹಾಗೂ ಕಾರು ತಯಾರಿಸಿ ಪ್ರಥಮ ಸ್ಥಾನ ಗಳಿಸಿರುವ ತಂಡಕ್ಕೆ ಎರಡು ಲಕ್ಷ ಬಹುಮಾನ ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯಿಂದ ಪ್ರಶಂಸೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳು ತಯಾರಿಸಿದ ಕಾರು ಹಾಗೂ ವಿಮಾನವನ್ನು ಬಿವಿಬಿ ಕಾಲೇಜಿನ ಎದುರು ಪ್ರದರ್ಶನಕ್ಕೆ ಇಡಲಾಗಿದೆ. ಇಂತಹದೊಂದು ಪ್ರಾಜೆಕ್ಟ್ ಮಾಡಿ ಪ್ರಶಸ್ತಿ ಗೆದ್ದಿರುವುದು ನಮಗೆಲ್ಲ ಖುಷಿ ತಂದಿದೆ ಎಂದು ತಮ್ಮ ಪ್ರಾಜೆಕ್ಟ್ ಬಗ್ಗೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಅತ್ಯಾಧುನಿಕ ಉಪಕರಣಗಳ ತಯಾರಿಕೆ ಹಾಗೂ ಆವಿಷ್ಕಾರದಲ್ಲಿ ಬಿವಿಬಿ ಕಾಲೇಜಿನ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಇನ್ನು ಮುಂದಿನ‌ ದಿನಗಳಲ್ಲಿ ಇನ್ನಷ್ಡು ಉತ್ತಮ ಅವಿಷ್ಕಾರಗಳನ್ನು ಮಾಡುವ ಮೂಲಕ ವಾಣಿಜ್ಯ ನಗರಿ ಹಾಗೂ ಕಾಲೇಜಿನ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಲಿ ಎಂಬುದು ನಮ್ಮ ಆಶಯವಾಗಿದೆ.

ಇದನ್ನೂ ಓದಿ: ಮೈಸೂರು: ದಿವ್ಯಾಂಗರಿಗಾಗಿ ಬ್ಲೈಂಡ್ ಸ್ಟಿಕ್ ಸಂಶೋಧನೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳು

Last Updated :Sep 23, 2022, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.