ಭಟ್ಕಳದ 9 ವರ್ಷ ಹಿಂದಿನ ಮರ್ಡರ್​ ಕೇಸ್ : ಧಾರವಾಡ ಕೋರ್ಟ್​ನಿಂದ ಮೇಲ್ಮನವಿ ವಜಾ

author img

By

Published : Jun 29, 2021, 4:54 PM IST

kalpana mahale murder case

ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ವಾದಿಸಿದ್ದು, ಈ ಘಟನೆ ಬಗ್ಗೆ ಸವಿಸ್ತಾರವಾಗಿ ಈಟಿವಿ ಭಾರತದೊಂದಿಗೆ ಪ್ರಕರಣದ ವಿಚಾರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಭಟ್ಕಳದ ಕಲ್ಪನಾ ಮಹಾಲೆ ಕೊಲೆ ಪ್ರಕರಣ ಇತ್ಯಾದಿ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದರಾದರೂ, ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿಗಳೆಲ್ಲರೂ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ..

ಭಟ್ಕಳ : ಕಳೆದ 9 ವರ್ಷಗಳ ಹಿಂದೆ ಭಟ್ಕಳದಲ್ಲಿ ನಡೆದ ಕಲ್ಪನಾ ಮಹಾಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ನ್ಯಾಯಾಲಯ/ಧಾರವಾಡ ಹೈಕೋರ್ಟ್​ (ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠ) ವಜಾಗೊಳಿಸಿದೆ.

2012 ನವೆಂಬರ್ ತಿಂಗಳಿನಲ್ಲಿ ಭಟ್ಕಳದ ಕಲ್ಪನಾ ಮಹಾಲೆ ಎಂಬ ಮಹಿಳೆಯನ್ನು ಸಾಗರ-ರೋಡ್ ಕೋಣಾರ ಕ್ರಾಸ್​ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಆಕೆಯ ಆಭರಣಗಳನ್ನು ಅಪಹರಿಸಲಾಗಿತ್ತು. ಕಾರವಾರದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 30 ಜನರ ಸಾಕ್ಷ್ಯಗಳನ್ನು ದಾಖಲಿಸಲಾಗಿತ್ತು. ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗಳಾದ ಮುಂಡಳ್ಳಿಯ ಸದಾಶಿವ ನಾಗಪ್ಪ ನಾಯ್ಕ್ ಹಾಗೂ ನಾಗರಾಜ ಲಚ್ಚಯ್ಯ ನಾಯ್ಕರನ್ನು ದೋಷ ಮುಕ್ತಗೊಳಿಸಿತ್ತು.

ಕುಂದಾಪುರದ ನ್ಯಾಯವಾದಿ ರವಿಕಿರಣ

ಇದನ್ನು ಕರ್ನಾಟಕ ಸರ್ಕಾರವು ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ ಹಾಗೂ ನ್ಯಾಯಮೂರ್ತಿ ಜೆ ಎಂ ಖಾಜಿಯವರನ್ನು ಒಳಗೊಂಡ ನ್ಯಾಯ ಪೀಠವು ಕಾರವಾರ ಸೆಷನ್ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ: Karwar: ಕೃಷಿ ಭೂಮಿಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ ಶಾಸಕಿ ರೂಪಾಲಿ ನಾಯ್ಕ್

ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ವಾದಿಸಿದ್ದು, ಈ ಘಟನೆ ಬಗ್ಗೆ ಸವಿಸ್ತಾರವಾಗಿ ಈಟಿವಿ ಭಾರತದೊಂದಿಗೆ ಪ್ರಕರಣದ ವಿಚಾರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಭಟ್ಕಳದ ಕಲ್ಪನಾ ಮಹಾಲೆ ಕೊಲೆ ಪ್ರಕರಣ ಇತ್ಯಾದಿ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದರಾದರೂ, ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿಗಳೆಲ್ಲರೂ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.