ನವಲಗುಂದ: ಫುಟ್ ಬೋರ್ಡ್​ನಲ್ಲಿ ನೇತಾಡಿಕೊಂಡು ಶಾಲೆಗೆ ತೆರಳುವ ವಿದ್ಯಾರ್ಥಿಗಳು

author img

By

Published : Sep 20, 2021, 10:34 PM IST

ಫುಟ್ ಬೋರ್ಡ್​ನಲ್ಲಿ ನೇತಾಡಿಕೊಂಡು ಶಾಲೆಗೆ ತೆರಳುವ ವಿದ್ಯಾರ್ಥಿಗಳು

ನವಲಗುಂದ ತಾಲೂಕಿನ ಚಿಲಕವಾಡ, ಬೆಳಹಾರ, ನಾಗರಹಳ್ಳಿ, ಬೆನ್ನೂರು, ಶಿಶ್ವಿನಹಳ್ಳಿ ಮಾರ್ಗದಲ್ಲಿ ಬಸ್ ಕೊರತೆಯಿಂದ ಅದೆಷ್ಟೋ ವಿದ್ಯಾರ್ಥಿಗಳು ಶಾಲೆ ತಪ್ಪಿಸಿಕೊಂಡಿದ್ದಾರೆ. ನಿಗದಿತ ಸಮಯಕ್ಕೆ ಬಸ್ ಸಿಗದೇ ಪ್ರಾಣ ಪಣಕ್ಕಿಟ್ಟು ಫುಟ್ ಬೋರ್ಡ್​ನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.

ನವಲಗುಂದ (ಹುಬ್ಬಳ್ಳಿ): ಈಗಾಗಲೇ ಶಾಲಾ–ಕಾಲೇಜುಗಳು ಪ್ರಾರಂಭವಾಗಿವೆ. ಗ್ರಾಮಾಂತರ ಪ್ರದೇಶಗಳಿಂದ ನಗರ, ಪಟ್ಟಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್ ಸಿಗದೇ ಪ್ರಾಣ ಪಣಕ್ಕಿಟ್ಟು ಫುಟ್ ಬೋರ್ಡ್​ನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.

ಫುಟ್ ಬೋರ್ಡ್​ನಲ್ಲಿ ನೇತಾಡಿಕೊಂಡು ಶಾಲೆಗೆ ತೆರಳುವ ವಿದ್ಯಾರ್ಥಿಗಳು

ನವಲಗುಂದ ತಾಲೂಕಿನ ಚಿಲಕವಾಡ, ಬೆಳಹಾರ, ನಾಗರಹಳ್ಳಿ, ಬೆನ್ನೂರು, ಶಿಶ್ವಿನಹಳ್ಳಿ ಮಾರ್ಗದ ಬಸ್ ಸಂಚಾರದಲ್ಲಿ ಕಂಡು ಬಂದ ದೃಶ್ಯಗಳಿವು. ಬೆಳಿಗ್ಗೆ 6:30ಕ್ಕೆ ಮೊದಲ ಬಸ್ ಬಂದ್ರೆ 7:30ಕ್ಕೆ ಎರಡನೇ ಬಸ್ ಬರುತ್ತೆ. ನಂತರ 10 ಗಂಟೆಗೆ ಈ ಮಾರ್ಗದಲ್ಲಿ ಬಸ್ ಸಂಚರಿಸುವುದು. ಇದರಿಂದ ಪ್ರತಿದಿನ ವಿದ್ಯಾರ್ಥಿಗಳು ಬಸ್​ನ ಫುಟ್ ಬೋರ್ಡ್​ನಲ್ಲಿ ನೇತಾಡಿಕೊಂಡು ಹೋಗುತ್ತಿದ್ದು, ಏನಾದರೂ ಅವಘಡ ಸಂಭವಿಸಿದರೆ ಹೇಗಪ್ಪಾ ಅನ್ನೋ ಚಿಂತೆಯಲ್ಲಿ ಪಾಲಕರಿದ್ದಾರೆ.

ಬಸ್ ಕೊರತೆಯಿಂದ ಅದೆಷ್ಟೋ ವಿದ್ಯಾರ್ಥಿಗಳು ಶಾಲೆ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ ಪಟ್ಟಣಕ್ಕೆ ಸಂಚರಿಸುವ ಸಾರ್ವಜನಿಕರು ಸಹ ಬಸ್​ಗಳಿಲ್ಲದೆ ಪರದಾಟ ನಡೆಸುವಂತಾಗಿದೆ. ಕೂಡಲೇ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಬೇಕು ಎಂಬುದು ಈ ಭಾಗದ ಜನರ ಮತ್ತು ವಿದ್ಯಾರ್ಥಿಗಳ ಆಗ್ರಹವಾಗಿದೆ. ಇದಕ್ಕೆ ಕೂಡಲೇ ನವಲಗುಂದ ಡಿಪೋ ವ್ಯವಸ್ಥಾಪಕರು ಇತ್ತ ಗಮನಹರಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.