ಮುಂದಿನ ಸ್ವಯಂಘೋಷಿತ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯಗೆ ಕ್ಷೇತ್ರ ಸಿಗದಂತಾಗಿದೆ: ಯತ್ನಾಳ್ ವ್ಯಂಗ್ಯ

author img

By

Published : Nov 24, 2022, 12:16 PM IST

Updated : Nov 24, 2022, 12:31 PM IST

basangouda patil yatnal

ಮುಂದಿನ ಸ್ವಯಂಘೋಷಿತ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯಗೆ ಒಂದೂ ಕ್ಷೇತ್ರ ಸಿಗದಂತಾಗಿದೆ. ಇದು ಕಾಂಗ್ರೆಸ್‌ನ ಪರಿಸ್ಥಿತಿ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ವ್ಯಂಗ್ಯವಾಡಿದರು.

ಧಾರವಾಡ: ರಾಜ್ಯದಲ್ಲಿ 160 ಸಾಮಾನ್ಯ ಕ್ಷೇತ್ರಗಳಿವೆ. ಆದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಒಂದೂ ಕ್ಷೇತ್ರ ಸಿಗದಂತಾಗಿದೆ. ಅದಕ್ಕಾಗಿ ಅವರು ಕೋಲಾರ, ಚಾಮರಾಜನಗರ, ಚಾಮುಂಡೇಶ್ವರಿ, ಬಿಳಗಿ, ಬಾದಾಮಿ ಅಂತ ಸುತ್ತಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಮುಂದಿನ ಸ್ವಯಂಘೋಷಿತ ಸಿಎಂ ಅಭ್ಯರ್ಥಿಗೇ ಕ್ಷೇತ್ರ ಸಿಗದಂತಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಲೇವಡಿ ಮಾಡಿದರು.

ಜಿಲ್ಲೆಯ ಗರಗ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಮಾವೇಶ ಮಾಡಿದ್ದರು. ಅವರೊಬ್ಬ ಮಾಜಿ ಸಿಎಂ ಆಗಿದ್ದು, ಇದು ಕಾಂಗ್ರೆಸ್‌ನ ಪರಿಸ್ಥಿತಿ ಎಂದು ವ್ಯಂಗ್ಯವಾಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಸವಾಲುಗಳು ಬರುತ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಸವಾಲುಗಳಿಗೂ ಉತ್ತರ ಕೊಡುತ್ತಿದ್ದೇನೆ. ಧಾರವಾಡದಲ್ಲಿಯೂ ಒಬ್ಬ ಹೇಳಿದ್ದ, ಇಂದು ಧಾರವಾಡಕ್ಕೇ ಬಂದಿದ್ದೇನೆ, ಅಗರ್ ತುಮ್ಹಾರೆ ಪಾಸ್ ದಮ್ ಹೈತೋ ಆಯಾರೆ ಚಿ..(ನಿಮ್ಮ ಕಡೆ ಧಮ್​ ಇದ್ರೆ ಬನ್ನಿ ನೋಡ್ಕೊತೇನಿ) ಅಂತಾ ಹೇಳಿ ಹೋಗುವೆ. ಮೊನ್ನೆ ಗೋಕಾಕ್​ದಲ್ಲಿಯೂ ಹಾಗೆ ಮಾಡ್ತೇವೆ, ಹೀಗೆ ಮಾಡ್ತೇವೆ ಅಂದಿದ್ರು. ಇದೇನು ಪಾಕಿಸ್ತಾನ ಅಲ್ಲ, ಹಿಂದೂಸ್ತಾನ. ಧಾರವಾಡದಲ್ಲಿ ಯಾವ ಚೌಕ್ ಹೇಳ್ತಿಯೋ ಅಲ್ಲಿ ಪೆಂಡಾಲ್ ಹಾಕಿ, ಮಾತನಾಡುವೆ ಎಂದು ಬಹಿರಂಗ ಸವಾಲು ಹಾಕಿದರು.

ಇದನ್ನೂ ಓದಿ: ವಿಜಯಪುರ ನಗರ ಕ್ಷೇತ್ರದಲ್ಲಿ ಧೈರ್ಯ ಇದ್ದವರು ನಿಲ್ಲಲಿ : ಯತ್ನಾಳ್​ ಸವಾಲ್​

ಯತ್ನಾಳ್ ಕಾಂಗ್ರೆಸ್ ಬಿ ಟೀಂ ಎನ್ನುವ ಮುರುಗೇಶ್ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿ ಟೀಂ ಅಥವಾ ಎ ಟೀಂ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ನಮ್ಮ ಸಮಾಜಕ್ಕೆ ನ್ಯಾಯ ಕೊಡಬೇಕು ಅಂತ ನಮ್ಮ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಮುರುಗೇಶ್ ನಿರಾಣಿಯವರ ಅಧ್ಯಕ್ಷರು, ಯಾವ ಪಕ್ಷದವರು ಎಂದು ಅವರನ್ನೇ ಕೇಳಿ ಅಂತ ನೇರವಾಗಿ ವಚನಾನಂದ ಶ್ರೀ ಗೆ ಯತ್ನಾಳ್​ ಟಾಂಗ್ ಕೊಟ್ಟರು. ಇದೇ ವೇಳೆ ಸಂಪುಟ ವಿಸ್ತರಣೆಯಾದರೆ ರಮೇಶ್​ ಜಾರಕಿಹೊಳಿ ಸಚಿವರಾಗುತ್ತಾರೆ, ಅವರು ಜೆಡಿಎಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ನಾನೇ ಸ್ಟಾರ್ ಕ್ಯಾಂಪೇನರ್: ಬಸನಗೌಡ ಪಾಟೀಲ್​ ಯತ್ನಾಳ್​

Last Updated :Nov 24, 2022, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.