ಟಿಪ್ಪರ್ ಬೈಕ್ ಮಧ್ಯೆ ಭೀಕರ ಅಪಘಾತ: ಆ್ಯಂಬುಲೆನ್ಸ್ ಬರುವುದು ಲೇಟ್​ ಆಗಿ ಸಾವು

author img

By

Published : Sep 20, 2022, 9:37 PM IST

accident-between-tipper-and-bike-in-hubli

ಅಪಘಾತ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬರದೇ ರಕ್ತದ ಮಡುವಿನಲ್ಲಿ ಒದ್ದಾಡಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ : ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಸಾಗಿಸಲು ಸಕಾಲಕ್ಕೆ ಆ್ಯಂಬುಲೆನ್ಸ್​​ ಸೇವೆ ಸಿಗದೇ ಅಸುನೀಗಿದ ಘಟನೆ ಹುಬ್ಬಳ್ಳಿ - ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲಕ್ಷ್ಮೇಶ್ವರದಿಂದ ಉಸುಕು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಟಿಪ್ಪರ್ ಎದುರಿಗಿದ್ದ ಸಾರಿಗೆ ಬಸ್ ಓವರಟೆಕ್ ಮಾಡುವ ಭರದಲ್ಲಿ ರಸ್ತೆ ಪಕ್ಕ ನಿಂತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ ರಕ್ತದ ಮಡುವಿನಲ್ಲಿದ್ದ. ಈ ವೇಳೆ, ಸಕಾಲಕ್ಕೆ ಆ್ಯಂಬುಲೆನ್ಸ್ ಸೇವೆ ಸಿಗದೆ ಜೀವ ಬಿಟ್ಟರೇ, ತೀವ್ರ ಗಾಯವಾಗಿದ್ದ ಮಗು ಹಾಗೂ ಪತ್ನಿಯನ್ನು ಸ್ಥಳೀಯರೇ ಆ್ಯಂಬುಲೆನ್ಸ್​ ಬಾರದ ಕಾರಣ ಒತ್ತಾಯ ಮಾಡಿ ಪೊಲೀಸ್ 112 ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಆಂಬ್ಯುಲೆನ್ಸ್ ಬರುವುದು ತಡವಾಗಿ ಸಾವು

ಕೊನೆಗೂ ಟಿಪ್ಪರ್ ಲಾರಿ ಕೆಳಗೆ ಸಿಲುಕಿದ ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್​ ಬಾರದೇ ಅಪಘಾತ ಸ್ಥಳದಲ್ಲೇ ಒಂದು ಗಂಟೆಗೂ ಅಧಿಕ ಕಾಲ ನರಳಾಟ ನಡೆಸಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ಗೂಡ್ಸ್ ವಾಹನದ ಮೂಲಕ ಕುಂದಗೋಳ ತಾಲೂಕು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರು.

ಮೃತ ವ್ಯಕ್ತಿ ಮಹಮ್ಮದ ಶಪಿಕ್ ನೂಲ್ವಿ (38) ಹುಬ್ಬಳ್ಳಿ ತಾಲೂಕಿನ ಶರೇವಾಡ ಗ್ರಾಮದವರು ಎಂದು ತಿಳಿದು ಬಂದಿದೆ. ಪತ್ನಿ ಹಾಗೂ ಮಗು ಸಮೇತ ಕುಂದಗೋಳ ತಾಲೂಕು ಆಸ್ಪತ್ರೆಗೆ ಬಂದು ತನ್ನೂರು ಶರೇವಾಡಕ್ಕೆ ಮರಳುವ ವೇಳೆ ರಸ್ತೆ ನಡುವೆ ಪೆಟ್ರೋಲ್ ಖಾಲಿಯಾಗಿ ನಿಂತಿದ್ದ ಬೈಕ್ ಸವಾರ ಓರ್ವನಿಗೆ ಸಹಾಯ ಮಾಡಲು ತೆರಳುವ ವೇಳೆ ಈ ಅಪಘಾತ ನಡೆದಿದೆ.

ಸದ್ಯ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಪತ್ನಿ ರಿಯಾನಭಾನು ಮತ್ತು ಮಗುವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಇನ್ನು ಕುಂದಗೋಳ ತಾಲೂಕು ಆಸ್ಪತ್ರೆ ಬಳಿ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದ್ದು, ಸಮಯಕ್ಕೆ ಬಾರದ ಆ್ಯಂಬುಲೆನ್ಸ್​​ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ಸ್ಥಳಕ್ಕೆ ಕುಂದಗೋಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಓರ್ವನನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಸ್ಕೂಟರ್ ಕಳವಿಗೆ ಬಂದು ಹೆಲ್ಮೆಟ್ ಹೊತ್ತೊಯ್ದರು: ಸಿಸಿಟಿವಿ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.