231 ಎಕರೆ ಗೋಮಾಳ ಕಬಳಿಕೆ ಆರೋಪ: ಕುರಿಗಳೊಂದಿಗೆ ತಾಲೂಕು ಕಚೇರಿಗೆ ರೈತರ ಮುತ್ತಿಗೆ
Updated on: Jun 23, 2022, 4:56 PM IST

231 ಎಕರೆ ಗೋಮಾಳ ಕಬಳಿಕೆ ಆರೋಪ: ಕುರಿಗಳೊಂದಿಗೆ ತಾಲೂಕು ಕಚೇರಿಗೆ ರೈತರ ಮುತ್ತಿಗೆ
Updated on: Jun 23, 2022, 4:56 PM IST
ಗ್ರಾಮದ ಪ್ರಭಾವಿಗಳು ಸುಮಾರು 231 ಎಕರೆ ಗೋಮಾಳ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ರೈತರು ಕುರಿಗಳೊಂದಿಗೆ ಹೊನ್ನಾಳಿಯ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ದಾವಣಗೆರೆ: ನೂರಾರು ಎಕರೆ ಗೋಮಾಳ ಜಮೀನನ್ನು ಪ್ರಭಾವಿಗಳು ಕಬಳಿಸಿರುವುದಾಗಿ ಆರೋಪಿಸಿ, ಗೋಮಾಳ ಜಮೀನು ಉಳಿಸುವ ಸಲುವಾಗಿ ಕುರಿಗಳಸಹಿತ ಅರಬಗಟ್ಟೆ ಗ್ರಾಮದ ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಅರಬಗಟ್ಟೆ ಗ್ರಾಮದ ಸುತ್ತಮುತ್ತಲಿನ ಸರ್ವೇ ನಂಬರ್ 7 ನಲ್ಲಿ ಸುಮಾರು 231 ಎಕರೆ ಭೂಮಿಯನ್ನು ಗ್ರಾಮದ ಪ್ರಭಾವಿಗಳು ಒತ್ತುವರಿ ಮಾಡಿದ್ದು, ತಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ರೈತರು ಆಗ್ರಹಿಸಿದ್ದರು. ಇದರಿಂದ ಯಾವುದೇ ಪ್ರಯೋಜನವಾಗದ ಕಾರಣ ಆಕ್ರೋಶಗೊಂಡು ಇಂದು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಇಲ್ಲದೆ ರೋಗಿಗಳ ಪರದಾಟ
