ಹಣಕಾಸಿನ ಜಗಳ ಮಧ್ಯ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ.. ಮಹಾರಾಷ್ಟ್ರ ಮೂಲದ ಯುವತಿಯರ ವಿರುದ್ಧ ಪ್ರಕರಣ

author img

By

Published : Jan 25, 2023, 9:08 PM IST

ಎಸ್​ಪಿ ಸಿಬಿ ರಿಷ್ಯಂತ್

ದಾವಣಗೆರೆಯ ವಿದ್ಯಾನಗರದ ಕೊನೆ ಬಸ್ ಸ್ಟಾಪ್ ಬಳಿ ಹಣಕಾಸಿನ ವಿಚಾರಕ್ಕೆ ಗಲಾಟೆ- ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ ಮೇಲೆ ಹಲ್ಲೆ- ಯುವತಿಯರ ವಿರುದ್ಧ ಪ್ರಕರಣ

ದಾವಣಗೆರೆ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಯುವತಿಯರು ಹಾಗೂ ಯುವಕರ ನಡುವೆ ನಡೆದ ಜಗಳವನ್ನು ಬಿಡಿಸಲು ಮಧ್ಯೆ ಪ್ರವೇಶಿಸಿದ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ ಮೇಲೆ ಹಾಗೂ ಓರ್ವ ಯುವತಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ಮಂಗಳವಾರ ದಿನ ತಡರಾತ್ರಿ ನಡೆದಿದೆ. ಇನ್ನು ಹಲ್ಲೆ ಮಾಡಿದ ಬೆನ್ನಲ್ಲೇ ಮಹಿಳಾ ಕಾನ್​ಸ್ಟೇಬಲ್​ ಕೈಗೆ ಗಾಯಗಳಾಗಿದ್ದು, ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ದಾವಣಗೆರೆಯ ವಿದ್ಯಾನಗರದ ಕೊನೆ ಬಸ್ ಸ್ಟಾಪ್ ಬಳಿ ಕಳೆದ ದಿನ‌ ತಡರಾತ್ರಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೇಶ್ಯಾವಾಟಿಕೆಗೆ ತಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆ: ಇಬ್ಬರು ಯುವತಿಯರು ಹಾಗೂ ಮಂಜುನಾಥ ಮತ್ತು ಹರ್ಷಾ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಹಾರಾಷ್ಟ್ರ ಮೂಲದ ಯುವತಿಯರನ್ನು ನಗರಕ್ಕೆ ಕರೆಸಿ ವೇಶ್ಯಾವಾಟಿಕೆಗೆ ತಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಕೊಡಮಾಡುವ ವಿಚಾರವಾಗಿ ಈ ಘಟನೆ ನಡೆದಿದೆ ಎಂದು ಎಸ್​ಪಿ ಸಿ ಬಿ ರಿಷ್ಯಂತ ತಿಳಿಸಿದ್ದಾರೆ.

ಇದನ್ನೂ ಓದಿ : ಅಂತಾರಾಷ್ಟ್ರೀಯ ಗೋಲ್ಡ್​ ಸ್ಮಗ್ಲಿಂಗ್​ ದಂಧೆ ಬೆಳಕಿಗೆ : ಕೋಡ್​ ಮೂಲಕ ವಿದೇಶದಿಂದ ಬರುತ್ತಿದ್ದ ಚಿನ್ನ ವಶಕ್ಕೆ

ಘಟನೆಯ ಹಿನ್ನೆಲೆ : ದಾವಣಗೆರೆಯ ಯೋಗೀಶ್, ಕುಮಾರ್ ನಾಯ್ಕ್, ಹೇಮರಾಜ್ ಅವರ ಜೊತೆ ಫೋನ್​ ಸಂಪರ್ಕದಲ್ಲಿದ್ದ ಮಹಾರಾಷ್ಟ್ರ ಮೂಲದ ಯುವತಿಯರು ದಾವಣಗೆರೆಗೆ ಆಗಮಿಸಿದ್ದರು. ಮಂಗಳವಾರ ತಡರಾತ್ರಿ ಗಿರಾಕಿಗಳಾದ ಶಿವಮೊಗ್ಗ ಮೂಲದ ಹರೀಶ್ ಮತ್ತು ಮಂಜುನಾಥ್ ಜೊತೆ ವಿದ್ಯಾನಗರದ ಲಾಸ್ಟ್ ಬಸ್‌ಸ್ಟಾಪ್ ನಲ್ಲಿ ಕಿತ್ತಾಡಿಕೊಂಡಿದ್ದಾರೆ.

ಓರ್ವ ಮಹಿಳಾ ಪೊಲೀಸ್ ಕಾನ್​ಸ್ಟೇಬಲ್​ಗೆ ಗಾಯ: ಈ ವೇಳೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಿದ್ಯಾನಗರ ಪೊಲೀಸರು. ಜಗಳ ಬಿಡಿಸಲು ಮುಂದಾದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಓರ್ವ ಮಹಿಳಾ ಪೊಲೀಸ್ ಕಾನ್​ಸ್ಟೇಬಲ್​ಗೆ ಗಾಯವಾಗಿದ್ದು, ಕುಡಿದ ಮತ್ತಿನಲ್ಲಿದ್ದ ಯುವತಿಯರು ಗಲಾಟೆ ಎಬ್ಬಿಸಿ ರಾದ್ದಾಂತ ಮಾಡಿದ್ದಾರೆ. ಕೊನೆಗೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಅತಿ ವೇಗದಿಂದ ಬಂದ ಟಿಪ್ಪರ್​, ರಸ್ತೆ ಪಕ್ಕದಲ್ಲಿ ಮೇಯುತ್ತಿದ್ದ 30ಕುರಿಗಳು ಸಾವು

ಎಸ್​ಪಿ ಸಿಬಿ‌ ರಿಷ್ಯಂತ್ ಹೇಳಿದ್ದು ಏನು? ವಿದ್ಯಾನಗರ ಠಾಣೆಗೆ ಆಗಮಿಸಿದ ಇಬ್ಬರು ಯುವತಿಯರು ಹುಡುಗರು ತೊಂದರೆ ಕೊಡ್ತಿದ್ದಾರೆಂದು ದೂರು ಕೊಡಲು ಮುಂದಾಗಿದ್ರು. ವಿಚಾರಣೆ ನಡೆಸಿದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ವಿಚಾರಣೆ ನಡೆಸಿದಾಗ ಅವರಿಬ್ಬರೂ ಮುಂಬೈ ಮೂಲದ ಯುವತಿಯರು, ಯೋಗೇಶ್​ ಎಂಬುವವನು ಮುಂಬೈನಿಂದ ಇಬ್ಬರು ಯುವತಿಯರನ್ನು ಕರೆದುಕೊಂಡು ಬಂದಿದ್ದು, ಅವರನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದಾರೆ ಎಂಬುದು ಯುವತಿಯರು ವಿಚಾರಣೆಯಲ್ಲಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ

ಹಲ್ಲೆ ನಡೆಸಿದ ಯುವತಿಯರ ಮೇಲೆ ಪ್ರಕರಣ ದಾಖಲು: ಇದರ ಬೆನ್ನಲ್ಲೇ ಯೋಗೇಶ್, ಕುಮಾರ್ ನಾಯ್ಕ್, ಹೇಮರಾಜ್ ವಿರುದ್ಧ ಹಾಗೂ ಪೊಲೀಸರ ಮೇಲೆ ಹಲ್ಲೆ‌ ಮಾಡಿದ ಯುವತಿಯರ ಮೇಲೆ ಎರಡು ಪ್ರಕರಣ ದಾಖಲಾಗಿದೆ. ಇನ್ನು ಇವೆಂಟ್ ಮ್ಯಾನೇಜ್​ಮೆಂಟ್​ಗೆ ಕರೆಸಲಾಗಿತ್ತು ಎಂದು ಹೇಳಲಾಗುತ್ತಿದ್ದು, ತನಿಖೆ ಬಳಿಕ ಮಾಹಿತಿ ಹೊರಬರಬೇಕಿದೆ ಎಂದು ಎಸ್​ಪಿ ಸಿಬಿ ರಿಷ್ಯಂತ್ ಅವರು ಮಾಹಿತಿ ನೀಡಿದ್ದಾರೆ.

ಓದಿ : ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.