ಫ್ಲೆಕ್ಸ್​​ನಲ್ಲಿ ಗರ್ಭಿಣಿ ಭಾವಚಿತ್ರ ಬಳಕೆ: ಬಜರಂಗದಳದ ಕಾರ್ಯಕರ್ತರಿಂದ ಆಕ್ರೋಶ

author img

By

Published : Sep 28, 2022, 5:55 PM IST

pregnant-woman-photo-used-in-flex

ಸರ್ಕಾರಿ ಕಾರ್ಯಕ್ರಮವೊಂದರ ಫ್ಲೆಕ್ಸ್​ನಲ್ಲಿ ಮಹಿಳೆಯ ಅನುಮತಿಯಿಲ್ಲದೇ ಫೋಟೊ ಬಳಸಿದ ಬಗ್ಗೆ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮದ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕೊಲ್ಯ ಎಂಬಲ್ಲಿ ನಡೆದಿದೆ.

ಉಳ್ಳಾಲ (ದಕ್ಷಿಣಕನ್ನಡ) : ಸರ್ಕಾರಿ ಕಾರ್ಯಕ್ರಮವೊಂದರ ಫ್ಲೆಕ್ಸ್ ನಲ್ಲಿ ಮಹಿಳೆಯ ಅನುಮತಿ ಇಲ್ಲದೇ ಫೋಟೋ ಅಳವಡಿಸಿದ ಬಗ್ಗೆ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಲ್ಲಿನ ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ನಡೆದಿದೆ.

ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಇದರ ವತಿಯಿಂದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ, ಅನ್ನಪ್ರಾಶನ, ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ ಸೀಮಂತ ಕಾರ್ಯಕ್ರಮವನ್ನು‌ ಕೊಲ್ಯ ನಾರಾಯಣಗುರು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಪ್ರಚಾರ ಪ್ರಯುಕ್ತ ಸಭಾಂಗಣದ ಮುಂದೆ ಅಳವಡಿಸಿದ್ದ ಫ್ಲೆಕ್ಸ್ ನಲ್ಲಿ ಹಿಂದೂ‌ ಮಹಿಳೆಯೊಬ್ಬರ ಹಲವು ವರ್ಷಗಳ ಹಿಂದಿನ ಗರ್ಭಿಣಿಯಾಗಿದ್ದ ಭಾವಚಿತ್ರವನ್ನು‌ ಅಳವಡಿಸಲಾಗಿದ್ದು, ಪಕ್ಕದಲ್ಲೇ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರ ಫೋಟೋವನ್ನು ಬಳಸಲಾಗಿತ್ತು.

ಈ ಬಗ್ಗೆ ತಿಳಿದ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ನಾರಾಯಣಗುರು ಸಭಾಂಗಣದೊಳಗೆ ನುಗ್ಗಿ ಆಯೋಜಕರ ನಿರ್ಲಕ್ಷ್ಯತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಾಸಕ ಯುಟಿ ಖಾದರ್​ ವಿರುದ್ಧ ಘೋಷಣೆ ಕೂಗಿದ್ದಾರೆ. ಬಳಿಕ ಆಯೋಜಕರು ಕಾರ್ಯಕರ್ತರ ಮನವೊಲಿಸಿ ಫ್ಲೆಕ್ಸ್ ತೆರವುಗೊಳಿಸಿದರು.

ಇದನ್ನೂ ಓದಿ : ಪಿಎಫ್​ಐ ಬ್ಯಾನ್​ ಸ್ವಾಗತಿಸಿದ ಕಾಂಗ್ರೆಸ್​ ನಾಯಕರು: ಆರ್​ಎಸ್​ಎಸ್ ವಿರುದ್ಧವೂ ಕ್ರಮಕ್ಕೆ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.