ಡೀಲಿಂಗ್​​ ಸಂಭಾಷಣೆ ಡಿಕೆಶಿಯನ್ನು ಮುಗಿಸಲು ಸಿದ್ದರಾಮಯ್ಯ ಮಾಡಿರುವ ತಂತ್ರ: ಕಟೀಲ್​

author img

By

Published : Oct 13, 2021, 4:52 PM IST

Updated : Oct 13, 2021, 5:09 PM IST

nalin-kumar-katil

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ವಿರುದ್ಧ ಸ್ವಪಕ್ಷಿಯರಿಂದಲೇ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಪ್ರತಿಕ್ರಿಯಿಸಿದ್ದು, ಇದು ರಾಜಕೀಯ ಪ್ರೇರಿತ ವಿಷಯವಾಗಿದೆ. ಇಲ್ಲದಿದ್ದಲ್ಲಿ‌ ಈ ರೀತಿಯ ಮಾತುಕತೆಗಳು ಕಾಂಗ್ರೆಸ್ ಕಚೇರಿಯಲ್ಲಿ ಕೇಳಿ ಬರುತ್ತಿರಲಿಲ್ಲ ಎಂದಿದ್ದಾರೆ.

ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಬಗ್ಗೆ ಕಾಂಗ್ರೆಸ್ ನಾಯಕರಿಬ್ಬರು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್​ ಪಕ್ಷದ ಭ್ರಷ್ಟಾಚಾರ ಕರ್ಮಕಾಂಡ ಬಯಲಿಗೆ ಬಂದಿದೆ. ಇವರು ಕಲೆಕ್ಷನ್ ಗಿರಾಕಿಗಳೆಂದು ನಾವು ಹೇಳಿದ್ದಲ್ಲ. ಅವರ ಪಕ್ಷದ ನಾಯಕರೇ ಹೇಳಿದ್ದಾರೆ‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಸಲೀಂ -ಉಗ್ರಪ್ಪ ಸಂಭಾಷಣೆ ಕುರಿತಂತೆ ಕಟೀಲ್ ಪ್ರತಿಕ್ರಿಯೆ ನೀಡಿರುವುದು

ಈ ಕುರಿತು ಮಾತನಾಡಿದ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯಾಧ್ಯಕ್ಷರ ಬಗ್ಗೆ ಕಲೆಕ್ಷನ್ ಗಿರಾಕಿ, ಭ್ರಷ್ಟಾಚಾರ, ಹಫ್ತಾ ವಸೂಲಿ ಎಂಬ ವಿಚಾರ ಹೊರ ಹಾಕಿದ್ದಾರೆ. ಡಿಕೆಶಿಯವರ ಹುಡುಗರಲ್ಲೇ 500 ಕೋಟಿ ರೂ. ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಲಿ, ಸತ್ಯಾಸತ್ಯತೆ ಹೊರ ಬರಲಿ ಎಂದು ಒತ್ತಾಯಿಸಿದರು.

ಇದು ರಾಜಕೀಯ ಪ್ರೇರಿತವಾಗಿದೆ. ಇಲ್ಲದಿದ್ದಲ್ಲಿ‌ ಈ ರೀತಿಯ ಮಾತುಕತೆಗಳು ಕಾಂಗ್ರೆಸ್ ಕಚೇರಿಯಲ್ಲಿ ಕೇಳಿ ಬರುತ್ತಿರಲಿಲ್ಲ. ಇದರ ಹಿಂದೆ ಡಿಕೆಶಿಯನ್ನು ಮುಗಿಸುವ ತಂತ್ರಗಾರಿಕೆ ಇದೆ. ಡಿಕೆಶಿ ಪ್ರಭಾವ ಕುಗ್ಗಿಸಲು ಸಿದ್ದರಾಮಯ್ಯ ಮಾಡಿರುವ ತಂತ್ರಗಾರಿಕೆ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಸಲೀಂ -ಉಗ್ರಪ್ಪ ಸಂಭಾಷಣೆ ಕುರಿತಂತೆ ಕಟೀಲ್ ಪ್ರತಿಕ್ರಿಯೆ ನೀಡಿರುವುದು

ಈ ಹಿಂದೆ ಡಿಕೆಶಿ ಐಟಿ ರೇಡ್ ವೇಳೆ ಅದು ರಾಜಕೀಯ ಪ್ರೇರಿತ ಅಂದಿದ್ದರು. ಆದರೆ, ಇವತ್ತು ಯಾವುದೇ ರಾಜಕೀಯ ಪ್ರೇರಿತ ಇಲ್ಲದೇ ಕಾಂಗ್ರೆಸ್ ಕಚೇರಿಯಲ್ಲೇ ಮಾತನಾಡಿದ್ದಾರೆ. ಸಿದ್ದರಾಮಯ್ಯ, ಉಗ್ರಪ್ಪ ಹಾಗೂ ಸಲೀಂ ಮೂಲಕ ಈ ಹೇಳಿಕೆ ನೀಡಿಸಿದ್ದಾರೆ. ಆದ್ದರಿಂದ ಇದರ ಬಗ್ಗೆ ತನಿಖೆಯಾದಲ್ಲಿ ಆಗ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನು ಬಿಜೆಪಿ ಹೇಳಿದರೆ, ರಾಜಕಾರಣ ಎಂದು ಬಿಂಬಿಸಲಾಗುತ್ತದೆ. ಕಾಂಗ್ರೆಸ್ ನಾಶದ ಅಂಚಿನಲ್ಲಿದೆ. ಮತ್ತೆ ಮೇಲೆ ಏಳೋದೇ ಇಲ್ಲ. ಮುಂದಿನ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣೆ ಕಳೆದುಕೊಳ್ಳೋದಕ್ಕೆ ಇದು ಸಾಕ್ಷಿ. ಕಾಂಗ್ರೆಸ್ ನ ಈ ಹೇಳಿಕೆಗಳು ಬಿಜೆಪಿ ರಾಜಕೀಯ ಪ್ರೇರಿತವಲ್ಲ. ಸಿದ್ದರಾಮಯ್ಯನ ಗುಂಪುಗಾರಿಕೆ ಪ್ರೇರಿತ ಎಂದು ಆರೋಪಿಸಿದರು.

ಸಲೀಂ -ಉಗ್ರಪ್ಪ ಸಂಭಾಷಣೆ ಕುರಿತಂತೆ ಕಟೀಲ್ ಪ್ರತಿಕ್ರಿಯೆ ನೀಡಿರುವುದು

ಜನರು ಇದನ್ನೆಲ್ಲಾ ಗಮನಿಸುತ್ತಿದ್ದು, ಇನ್ನಷ್ಟು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಾರೆ.‌ ಬಿಜೆಪಿ ಇವರ ಒಳಜಗಳದ ಲಾಭ ಯಾವತ್ತೂ ಪಡೆಯೊಲ್ಲ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ಥಾನ ಭದ್ರತೆಗೆ ಯತ್ನಿಸುತ್ತಿದ್ದಾರೆ.‌ ಸಿದ್ದರಾಮಯ್ಯ ಈ ರಾಜ್ಯದ ಹಿಟ್ಲರ್. ಅವರಿದ್ದಾಗ ಸಾಕಷ್ಟು ಹಿಂದೂಗಳ ಹತ್ಯೆಯಾಗಿದೆ. ಸಿದ್ದರಾಮಯ್ಯ ಆರ್​ಎಸ್​ಎಸ್​ಗೆ ಬೈದಾಗ ಯೋಚನೆ ಮಾಡಬೇಕಿತ್ತು. ಸಂಘ ಇಡೀ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುತ್ತಿದೆ. ಇವರ ಕಾಂಗ್ರೆಸ್ ಒಂದೇ ಒಂದು ಸೇವಾಕಾರ್ಯ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ‌ಕೋಟಿಗಟ್ಟಲೆ ಆಸ್ತಿ ಮಾಡಿದ್ದಾರೆ. ಆದರೆ, ಒಂದು ಕಾಂಗ್ರೆಸ್ ಕಚೇರಿ ಕೂಡ ಮಾಡಿಲ್ಲ. ಇವರ ಒಂದು ತಂತ್ರ ಪ್ರಚಾರದಲ್ಲಿ ಉಳಿಯೋದು ಮತ್ತೊಂದು ಡಿಕೆಶಿಯನ್ನು ಮುಗಿಸೋದು. ಜೆಡಿಎಸ್ ನಲ್ಲಿ ಇದ್ದಾಗಲೂ ದೇವೇಗೌಡರನ್ನು ತುಳಿದರು. ಸೋನಿಯಾ ಗಾಂಧಿ ಬಗ್ಗೆಯೇ ಕೆಟ್ಟ ಶಬ್ದದಲ್ಲಿ ಮಾತನಾಡಿದವರು ಸಿಎಂ ಪದವಿಗಾಗಿ ಮತ್ತೆ ಅದೇ ಸೋನಿಯಾ ಕಾಲಿಗೆ ಬಿದ್ದಿದ್ದಾರೆ ಎಂದು ಕಟೀಲ್​ ವ್ಯಂಗ್ಯವಾಡಿದರು.

ಓದಿ: ಜಿ.ಪರಮೇಶ್ವರರನ್ನ ಯಾವ ಶಕ್ತಿ ಸೋಲಿಸಿತ್ತೋ, ಅದೇ ಶಕ್ತಿಯಿಂದ ಗುಟ್ಟು ರಟ್ಟಾಗಿದೆ : ಸಿ ಟಿ ರವಿ

Last Updated :Oct 13, 2021, 5:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.