ಮಂಗಳೂರು: ಪಿಎಫ್ಐ ಸೇರಿದಂತೆ 12 ಕಚೇರಿಗಳಿಗೆ ಬೀಗಮುದ್ರೆ

author img

By

Published : Sep 29, 2022, 10:03 AM IST

mangaluru police

ಪಿಎಫ್‌ಐ ಮತ್ತು ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಮಂಗಳೂರು ನಗರದ 12 ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.

ಮಂಗಳೂರು: ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ಹಾಗೂ ಅದರ ಅಂಗ ಸಂಸ್ಥೆಗಳನ್ನು ನಿಷೇಧ ಮಾಡಿರುವ ಬೆನ್ನಲ್ಲೇ ಇದೀಗ ಮಂಗಳೂರು ಪೊಲೀಸರು ನಗರದಲ್ಲಿರುವ 12 ಕಚೇರಿಗಳಿಗೆ ಬೀಗಮುದ್ರೆ ಹಾಕಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 10 ಪಿಎಫ್ಐ ಕಚೇರಿಗಳು, 1 ಸಿಎಫ್ಐ ಕಚೇರಿ, 1 ಇನ್ಫಾರ್ಮೇಶನ್ ಆ್ಯಂಡ್ ಎಂಪವರ್​ಮೆಂಟ್ ಕಚೇರಿಗೆ ಬೀಗ ಜಡಿಯಲಾಗಿದೆ. ಪಣಂಬೂರು ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆ, ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು, ಕಾಟಿಪಳ್ಳ -2ನೇ ಬ್ಲಾಕ್, ಬಜ್ಪೆ ಠಾಣಾ ವ್ಯಾಪ್ತಿಯ ಅಡ್ಡೂರು, ಕಿನ್ನಿಪದವು, ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್, ಕೊಣಾಜೆ ಠಾಣಾ ವ್ಯಾಪ್ತಿಯ ಇನೋಳಿ, ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೂರು, ಮಂಗಳೂರು ಸೌತ್ ಠಾಣಾ ವ್ಯಾಪ್ತಿಯ ನೆಲ್ಲಿಕಾಯಿ ರಸ್ತೆ,‌ ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಕುದ್ರೋಳಿ - ಕರ್ಬಲಾ ರಸ್ತೆಯ ಕಚೇರಿಗಳು ಸೇರಿ ಪಿಎಫ್ಐನ ಒಟ್ಟು 10 ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.

ಪಿಎಫ್ಐ ಕಚೇರಿಗಳಿಗೆ ಬೀಗಮುದ್ರೆ ಹಾಕಿದ ಪೊಲೀಸರು

ಇದನ್ನೂ ಓದಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯುಎಪಿಎ ಕಾಯ್ದೆಯಡಿ ಬ್ಯಾನ್​.. ಇಲ್ಲಿದೆ ಸಂಪೂರ್ಣ ವಿವರ

ಅದೇ ರೀತಿ ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಅಝಿಝುದ್ದೀನ್ ರಸ್ತೆಯ ಒಂದು ಸಿಎಫ್ಐ ಕಚೇರಿ ಹಾಗೂ ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಯ ರಾವ್ ಆ್ಯಂಡ್ ರಾವ್ ಸರ್ಕಲ್​ನ ಇನ್ಫಾರ್ಮೇಶನ್ ಆ್ಯಂಡ್ ಎಂಪವರ್​ಮೆಂಟ್ ಕಚೇರಿಗೆ ಪೊಲೀಸರು ಬೀಗ ಹಾಕಿದ್ದಾರೆ.

ಇದನ್ನೂ ಓದಿ: ಕಲಬುರಗಿ, ಯಾದಗಿರಿಯ ಪಿಎಫ್‌ಐ ಮುಖಂಡರಿಗೆ ನ್ಯಾಯಾಂಗ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.