ಮಂಗಳೂರು: ಕಡಿಮೆ ಬಡ್ಡಿ ದರದಲ್ಲಿ ಲೋನ್ ನೀಡುವ ಮೆಸೇಜ್​ ನಂಬಿ 7.24 ಲಕ್ಷ ಕಳೆದುಕೊಂಡ ವ್ಯಕ್ತಿ

author img

By

Published : Sep 23, 2021, 1:47 PM IST

mangaluru-man-lost-7-lakh-while-getting-loan

ಕಡಿಮೆ ಬಡ್ಡಿಯಲ್ಲಿ ಲೋನ್ ಪಡೆಯುವ ಬಗ್ಗೆ ಮೊಬೈಲ್​ಗೆ ಬಂದ ಮೆಸೇಜ್​ ನಂಬಿದ ವ್ಯಕ್ತಿಯೊಬ್ಬರು 7.24 ಲಕ್ಷ ರೂ. ಕಳೆದುಕೊಂಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು: ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಲಾಗುವುದು ಎಂದು ಮೊಬೈಲ್​ಗೆ ಬಂದ ಸಂದೇಶ ನಂಬಿ ಎರಡೆರಡು ಕಡೆಯಿಂದ ಪುತ್ತೂರಿನ ವ್ಯಕ್ತಿಯೊಬ್ಬರು 7.24 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಪುತ್ತೂರಿನ ರಾಮಕುಂಜದ ವ್ಯಕ್ತಿಗೆ ಕ್ಯಾಪಿಟಲ್​ ಇಂಡಿಯಾ ಫೈನಾನ್ಸ್​ ಲಿಮಿಟೆಡ್​​ (Capital India finance Ltd) ನ ಹೆಸರಿನಲ್ಲಿ ಲೋನ್ ಅಪ್ಲೈಗಾಗಿ 2021 ಜನವರಿಯಲ್ಲಿ ಸಂದೇಶ ಬಂದಿದ್ದು, ಅದರಲ್ಲಿ ಸೂಚಿಸಿದಂತೆ ಪೋನ್ ನಂಬರ್​​ಗೆ ಕರೆ ಮಾಡಿದ್ದಾರೆ. ಆಗ ಈ ವ್ಯಕ್ತಿಗೆ ಶೇಕಡಾ 5ರ ಬಡ್ಡಿಯಲ್ಲಿ 5 ಲಕ್ಷ ಸಾಲ ನೀಡುವುದಾಗಿ ತಿಳಿಸಿದ್ದರು.

ಅವರ ಸೂಚನೆಯಂತೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಫೋಟೋ ಕಳುಹಿಸಿದ್ದರು. ಬಳಿಕ ವಿವಿಧ ಮೊಬೈಲ್​ಗಳಿಂದ ಕರೆ ಮಾಡಿ ರಿಜಿಸ್ಟ್ರೇಷನ್, ಜಿಎಸ್​​​ಟಿ ಮತ್ತು ವಿವಿಧ ಶುಲ್ಕ​​ಗಳೆಂದು ಹೇಳಿ ಹಂತ - ಹಂತವಾಗಿ 5,20,727 ರೂ. ವರ್ಗಾಯಿಸಿಕೊಂಡಿದ್ದರು.

ಇದರ ಮಧ್ಯೆ ಬಜಾಜ್​ ಫೈನಾನ್ಸ್​ (BAJAJ FINSERVE) ಹೆಸರಿನಲ್ಲಿ ಲೋನ್ ನೀಡುವ ಸಂದೇಶ ಬಂದಿದೆ.‌ ಅದಕ್ಕೆ ಕರೆ ಮಾಡಿದಾಗ ಶೇಕಡಾ 5ರ ಬಡ್ಡಿಯಲ್ಲಿ 9 ಲಕ್ಷ ರೂ. ಸಾಲ ನೀಡುವುದಾಗಿ ಹೇಳಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಫೋಟೋ ಪಡೆದುಕೊಂಡಿದ್ದಾರೆ. ಬಳಿಕ ರಿಜಿಸ್ಟ್ರೇಷನ್, ಜಿಎಸ್ಟಿ ಮತ್ತು ವಿವಿಧ ಹೇಳಿ ಹಂತ ಹಂತವಾಗಿ 2,03,598 ರೂ. ಹಣ ಟ್ರಾನ್ಸ್​ಫರ್ ಮಾಡಿಸಿದ್ದಾರೆ.

ಹೀಗೆ ಎರಡು ಕಡೆಯಿಂದ ಶೇಕಡಾ 5ರ ಬಡ್ಡಿಯಲ್ಲಿ ಸಾಲ ಪಡೆಯಲು 7,24,325 ರೂ. ಟ್ರಾನ್ಸ್​ಫರ್​ ಮಾಡಿದ್ದಾರೆ. ಇದೀಗ ತಾನು ಮೋಸ ಹೋದ ಬಗ್ಗೆ ಅರಿತುಕೊಂಡ ಈ ವ್ಯಕ್ತಿ ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ನಾನವನಲ್ಲ..ನಾನವನಲ್ಲ ಎಂದಿದ್ದವ ಮಾಡಿದ್ದೇನು ಗೊತ್ತಾ? ಅತ್ಯಾಚಾರ ಆರೋಪಿಯ ಸೆಲ್ಫಿ ಕಹಾನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.