ಮಳಲಿ ಮಸೀದಿ ವಿಚಾರ.. ಅ.17ಕ್ಕೆ ತೀರ್ಪು ಪ್ರಕಟ

author img

By

Published : Sep 27, 2022, 7:35 PM IST

Malali Masjid

2022ರ ಏಪ್ರಿಲ್​ನಲ್ಲಿ ಮಳಲಿ ಮಸೀದಿ ನವೀಕರಣದ ವೇಳೆ ಕಟ್ಟಡ ಕೆಡವಿದ ಸಂದರ್ಭ ಹಿಂದೂ ಶೈಲಿಯ ದೇಗುಲ ಪತ್ತೆಯಾಗಿತ್ತು. ಈ ಬಗ್ಗೆ ವಿಹೆಚ್​ಪಿ ಕೋರ್ಟ್ ಮೆಟ್ಟಿಲೇರಿತ್ತು.

ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯದ ಶೈಲಿ ಪತ್ತೆಯಾದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮಳಲಿ ಮಸೀದಿ v/s ವಿಎಚ್​ಪಿ ವಿಚಾರಣೆ ತೀರ್ಪು ಅಕ್ಟೋಬರ್ 17ಕ್ಕೆ ಪ್ರಕಟವಾಗಲಿದೆ. ಈ ತೀರ್ಪು ಇಂದು ಪ್ರಕಟವಾಗಬೇಕಿತ್ತು. ಆದರೆ, ಆದೇಶ ಮುಂದೂಡಿರುವ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ಅಕ್ಟೋಬರ್ 17ಕ್ಕೆ ತೀರ್ಪು ಕಾಯ್ದಿರಿಸಿದೆ.

2022ರ ಏಪ್ರಿಲ್​ನಲ್ಲಿ ಮಳಲಿ ಮಸೀದಿ ನವೀಕರಣದ ವೇಳೆ ಕಟ್ಟಡ ಕೆಡವಿದ ಸಂದರ್ಭ ಹಿಂದೂ ಶೈಲಿಯ ದೇಗುಲ ಪತ್ತೆಯಾಗಿತ್ತು. ಈ ಬಗ್ಗೆ ವಿಹೆಚ್​ಪಿ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಮಸೀದಿ ಆಡಳಿತ ಮಂಡಳಿ ಈ ಪ್ರಕರಣ ವಕ್ಫ್​ ಕೋರ್ಟ್ ವ್ಯಾಪ್ತಿಗೆ ಬರುವುದೆಂದು ವಾದ ಮಂಡಿಸಿತ್ತು. ಪ್ರಕರಣವನ್ನು ಯಾವ ಕೋರ್ಟ್​ನಲ್ಲಿ ನಡೆಸಬೇಕು ಎಂಬ ಬಗ್ಗೆ ವಿಹೆಚ್​ಪಿ ಮತ್ತು ಮಸೀದಿ ಆಡಳಿತ ಮಂಡಳಿಯ ವಾದ ಆಲಿಸಲಾಗಿತ್ತು.

ಇದನ್ನೂ ಓದಿ: ಮಳಲಿ ಮಸೀದಿಯಲ್ಲಿ ಗುರುಮಠ, ಶಿವ, ದೇವಿ ಸಾನಿಧ್ಯ ಗೋಚರ; ಅಷ್ಟಮಂಗಲ ನಡೆಸಲು ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.