ಪುತ್ತೂರು: ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ, ಮೂವರು ಆಸ್ಪತ್ರೆಗೆ ದಾಖಲು

author img

By

Published : Nov 23, 2021, 9:13 PM IST

Kombettu government college

ವಿದ್ಯಾರ್ಥಿಯ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾ ಆರೋಪಿಸಿದೆ.

ಪುತ್ತೂರು: ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ. ಪರಿಣಾಮ, ಗಲಾಟೆಯಲ್ಲಿ ಗಾಯಗೊಂಡ ಮೂವರು ವಿದ್ಯಾರ್ಥಿಗಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕೊಡಿಪ್ಪಾಡಿ ನಿವಾಸಿ ಆದಿಲ್, ಪ್ರಣಮ್ ಮತ್ತು ಬನ್ನೂರು ಕರ್ಮಲ ನಿವಾಸಿ ಆದಿತ್ಯ ಅವರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಆದಿಲ್, ಪ್ರಣಮ್​ ಪ್ರಥಮ ಪಿಯುಸಿ, ಆದಿತ್ಯ ಅವರು ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.

Aadhil
ಚಿಕಿತ್ಸೆ ಪಡೆಯುತ್ತಿರುವ ಆದಿಲ್

ವಿದ್ಯಾರ್ಥಿಯ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾ ಆರೋಪಿಸಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಕ್ಯಾಂಪಸ್ ಪ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ, 'ತನ್ನ ಕಾಲೇಜಿನ ಹಿಂದೂ ಸಹಪಾಠಿಯೊಂದಿಗೆ ಮಾತನಾಡಿದ ಎನ್ನುವ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯವಾಗಿದೆ. ಪುತ್ತೂರಿನಲ್ಲಿ ನಿರಂತರವಾಗಿ ಕೋಮುಗಲಭೆ ನಡೆಸಲು ಸಂಘಪರಿವಾರ ಪ್ರಯತ್ನಿಸುತ್ತಿದ್ದು, ಪೊಲೀಸ್ ಇಲಾಖೆಯ ಜಾಣ‌ ಮೌನವು ಇದಕ್ಕೆ ಕಾರಣವಾಗಿದೆ' ಎಂದು ಆರೋಪಿಸಿದ್ದಾರೆ.

ಓದಿ: ಸೂಕ್ತ ಕೆಲಸ ಸಿಕ್ಕಿಲ್ಲ ಎಂದು ಕೊಳ್ಳೇಗಾಲದಲ್ಲಿ M. Com ಪದವೀಧರ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.