ಕಂದಾಯ ಕಚೇರಿಗೆ ನುಗ್ಗಿ ದಾಂಧಲೆ, ಲೆಕ್ಕಿಗನ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು

author img

By

Published : Sep 29, 2022, 8:02 AM IST

ಸವಣೂರು ಕಂದಾಯ ಕಚೇರಿಗೆ ನುಗ್ಗಿ ದಾಂಧಲೆ

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸವಣೂರು ಕಂದಾಯ ಕಚೇರಿಗೆ ನುಗ್ಗಿದ ವ್ಯಕ್ತಿಯೊಬ್ಬ ಗ್ರಾಮ ಲೆಕ್ಕಿಗನ ಮೇಲೆ ತಲ್ವಾರ್​ನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಈ ಕುರಿತು ಬೆಳ್ಳಾರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ(ದಕ್ಷಿಣ ಕನ್ನಡ): ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಚೇರಿಗೆ ನುಗ್ಗಿಗ್ರಾಮ ಲೆಕ್ಕಿಗನ ಮೇಲೆ ತಲ್ವಾರ್​ನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ ಘಟನೆ ಕಡಬ ತಾಲೂಕಿನ ಸವಣೂರು ಜಂಕ್ಷನ್​ನಲ್ಲಿ ಬುಧವಾರ ನಡೆದಿದೆ.

ಸವಣೂರು/ಪುಣ್ಷಪ್ಪಾಡಿ ಗ್ರಾಮ ಕರಣಿಕರರಾದ ಬಸವರಾಜ್ ಎಂಬುವರ ಮೇಲೆ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಹಲ್ಲೆ, ಕೊಲೆ ಬೆದರಿಕೆ, ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಹುಡುಗ ಹುಡುಗಿ ಮೇಲೆ ಹಲ್ಲೆ ಆರೋಪ: ಪ್ರಕರಣದ ದಾಖಲು

ಅಷ್ಟೇ ಅಲ್ಲದೆ, ಸವಣೂರು ಗ್ರಾ.ಪಂ ಕಟ್ಟಡದಲ್ಲಿರುವ ಗುಣಪಾಲ ಗೌಡ ಇಡ್ಯಾಡಿಗೆ ಸೇರಿದ ಬೇಕರಿಯನ್ನು ಆರೋಪಿಗಳು ತಲವಾರಿನಿಂದ ಪುಡಿಗೈದಿದ್ದಾನೆ ಎನ್ನಲಾಗ್ತಿದೆ.

ಸ್ಥಳಕ್ಕೆ ಬೆಳ್ಳಾರೆ ಠಾಣೆ ಎಸ್​ಐ ಸುಹಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಸಾದ್, ಭರತ, ಬಾಲಕೃಷ್ಣ, ಪೂವಣಿ ಗೌಡ ಎಂಬುವರ ಮೇಲೆ ಕೇಸ್​ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.