ಮಂಗಳೂರಿನಲ್ಲಿ ಪಿಎಫ್ಐನ 14 ಮುಖಂಡರ ಬಂಧನ

author img

By

Published : Sep 27, 2022, 7:13 PM IST

Updated : Sep 27, 2022, 8:40 PM IST

Etv Bharat7-days-judicial-custody-for-pfi-puttur-district-president-jabir-ariadkar

ಪಿಎಫ್ಐ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸರ ದಾಳಿ. ದಕ್ಷಿಣ ಕನ್ನಡದಲ್ಲಿ 14 ಜನ ಅರೆಸ್ಟ್

ಮಂಗಳೂರು/ಪುತ್ತೂರು: ಇಂದು ಮುಂಜಾನೆಯಿಂದಲೇ ರಾಜ್ಯದ ಹಲವೆಡೆ ಪೊಲೀಸರು ದಾಳಿ ನಡೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 14 ಮಂದಿ ಪಿಎಫ್​ಐ ಮುಖಂಡರನ್ನು ಬಂಧಿಸಲಾಗಿದೆ. ಮಂಗಳೂರು ‌ನಗರ ಪೊಲೀಸ್ ವ್ಯಾಪ್ತಿಯಲ್ಲಿ 10 ಮತ್ತು ದಕ್ಷಿಣ ಕನ್ನಡ ‌ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 4 ಮಂದಿ ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದೆ.

ಮುಹಮ್ಮದ್ ನೌಫಲ್ ಹಂಝ, ಮುಜೈರ್ ಕುದ್ರೋಳಿ, ಶರೀಫ್ ಪಾಂಡೇಶ್ವರ, ನವಾಜ್ ಉಳ್ಳಾಲ, ಮುಹಮ್ಮದ್ ಇಕ್ಬಾಲ್ ಉಳಾಯಿಬೆಟ್ಟು, ಇಸ್ಮಾಯಿಲ್ , ನಝೀರ್, ಶಬೀರ್ ಅಹಮದ್, ನೌಶದ್ ಚೊಕ್ಕಬೆಟ್ಟು, ಇಬ್ರಾಹಿಂ ಮೂಡಬಿದಿರೆ, ರಾಜಿಕ್, ಫಿರೋಜ್, ಇಜಾಜ್ ಅಹಮದ್, ಜಾಬೀರ್ ಅರಿಯಡ್ಕ ಬಂಧಿತರು. ಇನ್ನು ಪೊಲೀಸರು ಬಂಧಿಸಬೇಕಿದ್ದ ಓರ್ವ ಮುಖಂಡ‌ನಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಯಲ್ಲಿ ಇರುವುದರಿಂದ ಇಂದು ಬಂಧನವಾಗಿಲ್ಲ. ಆತ ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ಬಂಧಿಸಲಿದ್ದಾರೆ.

ನ್ಯಾಯಾಂಗ ಬಂಧನ: ಪುತ್ತೂರಿನ ಜಾಬೀರ್​​ರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರತಿಬಂಧಕ ಕಾಯ್ದೆಯಡಿ ಗರಿಷ್ಠ ಅವಧಿಯ ಮುಚ್ಚಳಿಕೆಗಾಗಿ ಕಾರ್ಯನಿರ್ವಾಹಕ ನ್ಯಾಯಾಧೀಶರೂ ಆಗಿರುವ ತಹಶೀಲ್ದಾರ್ ಅವರ ಮುಂದೆ ಹಾಜರುಪಡಿಸಿದ್ದರು. ಪುತ್ತೂರು ತಹಶೀಲ್ದಾರ್ ಅವರು ವಿಚಾರಣೆ ನಡೆಸಿ 7ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಪಿಎಫ್​ಐ ಸಂಘಟನೆ ಜೊತೆ ಲಿಂಕ್​ ಹೊಂದಿರುವ ಆರೋಪ: ಇಬ್ಬರ ಬಂಧನ, ಓರ್ವ ವಶಕ್ಕೆ

Last Updated :Sep 27, 2022, 8:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.