ರೈತರಿಗೆ ಪೆಟ್ರೋಲ್, ಡೀಸೆಲ್​​ನಲ್ಲಿ ಸಬ್ಸಿಡಿ.. ಸಿಎಂ ಜತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ: ಬಿ.ಸಿ ಪಾಟೀಲ್

author img

By

Published : Oct 13, 2021, 5:50 PM IST

Minister  BC Patil

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಗ್ಗೆ ಸಲೀಂ ಮತ್ತು ಉಗ್ರಪ್ಪ ಮಾತನಾಡುತ್ತಿದ್ದಾರೆ. ಈಗಲಾದರೂ ಸತ್ಯ ಹೊರ ಬಂದಿದೆ. ಆ ಬಗ್ಗೆ ನಾವು ಟೀಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ದೂರು ನೀಡಿದರೆ ಸರ್ಕಾರ ತನಿಖೆ ನಡೆಸುತ್ತದೆ. ದೂರು ನೀಡದೇ ಏನೂ ಮಾಡಲಾಗುವುದಿಲ್ಲ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದರು.

ಚಿತ್ರದುರ್ಗ: ರೈತರಿಗೆ ಪೆಟ್ರೋಲ್, ಡೀಸೆಲ್​​ನಲ್ಲಿ ಸಬ್ಸಿಡಿ ಕೊಡಬೇಕೆಂದು ಸಿಎಂ ಜತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ರೈತರಿಗೆ ಕನಿಷ್ಠ 1 ಲೀ. ಡೀಸೆಲ್​​ಗೆ 20 ರೂ. ಸಬ್ಸಿಡಿ ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ರೈತರಿಗೆ ಪೆಟ್ರೋಲ್, ಡೀಸೆಲ್​​ನಲ್ಲಿ ಸಬ್ಸಿಡಿ.. ಸಿಎಂ ಜತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ: ಬಿ.ಸಿ ಪಾಟೀಲ್

ಕಾಂಗ್ರೆಸ್​​​​​​ನವರೇ ಸ್ವತಃ ಸತ್ಯ ಒಪ್ಪಿಕೊಂಡಂತಾಗಿದೆ

ಚಿತ್ರದುರ್ಗದ ಮುರುಘಾ ಮಠದಿಂದ ನಡೆಸುವ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ಸ್ವತಃ ಕಾಂಗ್ರೆಸ್ ಪಕ್ಷದವರೇ ಸತ್ಯ ಒಪ್ಪಿಕೊಂಡಂತೆ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಗ್ಗೆ ಸಲೀಂ ಮತ್ತು ಉಗ್ರಪ್ಪ ಮಾತಾಡುತ್ತಿದ್ದಾರೆ. ಈಗಲಾದರೂ ಸತ್ಯ ಹೊರ ಬಂದಿದೆ. ಆ ಬಗ್ಗೆ ನಾವು ಟೀಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ದೂರು ನೀಡಿದರೆ ಸರ್ಕಾರ ತನಿಖೆ ನಡೆಸುತ್ತದೆ. ದೂರು ನೀಡದೇ ಏನು ಮಾಡಲಾಗುವುದಿಲ್ಲ ಎಂದರು.

ನಾವೇ ಗೆಲ್ಲುತ್ತೇವೆ: ಪಾಟೀಲ್​ ವಿಶ್ವಾಸ

ಹಾನಗಲ್ ಮತ್ತು ಸಿಂದಗಿ ಚುನಾವಣೆ ಗೆಲ್ಲುತ್ತೇವೆ. ಇದರಲ್ಲಿ ಎರಡು‌ ಮಾತಿಲ್ಲ. ಇನ್ನು ಯಾರ ಹಂಗಿನಲ್ಲಿಲ್ಲ ಅಂದರೆ ಏನು ಅರ್ಥ?. ಮತದಾರರ ಹಂಗಲ್ಲಿರುತ್ತೇವೆ ಎಂಬುದು ಮರೆಯಬಾರದು ಎಂದು ಮಾಜಿ ಸಿಎಂ ಹೆಚ್​​ಡಿಕೆ ಹೇಳಿಕೆಗೆ ಸಚಿವರು ತಿರುಗೇಟು ನೀಡಿದರು.

ಬಿಜೆಪಿ ಯಾರ ಕೊಲೆ ಮಾಡಿದೆ?. ಸಿದ್ಧರಾಮಯ್ಯ ಮಾಜಿ ಸಿಎಂ ಆದವರು. ಮಾತಿನ ಮೇಲೆ ಹಿಡಿತವಿರಲಿ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಕೊಲೆಗಡುಕರು ಎಂಬುದರ ಅರ್ಥ ಗಂಭೀರ ವಿಚಾರವಾಗುತ್ತದೆ. ಏನೇ ಮಾತಾಡಿದರೂ ಎಚ್ಚರಿಕೆಯಿಂದ ಮಾತಾನಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯ, ದೇಶದ ಬಗ್ಗೆ ಚರ್ಚಿಸಲು ಭೇಟಿ ಆಗಿರಬಹುದು

ಮಾಜಿ ಸಿಎಂ ಬಿಎಸ್​​ವೈ, ಸಿದ್ದರಾಮಯ್ಯ ಅವರು ಇಬ್ಬರು ಸಿಎಂ ಆಗಿದ್ದರು. ಮಾಜಿ ಸಿಎಂಗಳು ರಾಜ್ಯ, ದೇಶದ ಬಗ್ಗೆ ಚರ್ಚಿಸಲು ಸೇರಿರಬಹುದು. ಅದರಲ್ಲಿ ತಪ್ಪೇನಿದೆ. ರಾಜಕಾರಣಿಗಳು ಸೇರಿಕೊಂಡರೆ ಆಪರೇಷನ್ ಅಂತೀರಿ. ಇಲ್ಲಿ ಆಪರೇಷನ್ ಮಾಡುವಂತಹದ್ದು ಏನೂ ಇಲ್ಲ ಎಂದರು.

ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ, ಸಹಜವಾಗಿದೆ. ಇದರಲ್ಲಿ ಯಾರ ಕೈವಾಡವೂ ಇಲ್ಲ. ಇನ್ನು ಬೆಂಗಳೂರು ಉಸ್ತುವಾರಿ ಸಮಸ್ಯೆಯನ್ನು ಸಿಎಂ ಬೊಮ್ಮಾಯಿ ಬಗೆಹರಿಸುತ್ತಾರೆ ಎಂದು ಸಚಿವ ಬಿ.ಸಿ ಪಾಟೀಲ್ ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ಸಿದ್ಧಾಂತಗಳೊಂದಿಗೆ ರಾಜಿಯಾಗಲ್ಲ, ಸಿದ್ದರಾಮಯ್ಯರನ್ನು ಭೇಟಿ ಮಾಡಿಲ್ಲ: ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.