ಶರಣ ಸಂಸ್ಕೃತಿ ಉತ್ಸವ 2021: ಲೋಗೋ ಮತ್ತು ಆಹ್ವಾನ ಪತ್ರಿಕೆ ಬಿಡುಗಡೆ

author img

By

Published : Oct 3, 2021, 5:11 PM IST

ಶರಣ ಸಂಸ್ಕೃತಿ ಉತ್ಸವ 2021

ಅಕ್ಟೋಬರ್ 8ರಂದು ಬೈಕ್ ರ‍್ಯಾಲಿ, ರಾಜ್ಯಮಟ್ಟದ ಜನಪದ ಕಲೆಗಳ ಸ್ಪರ್ಧೆ, ಚಲನಚಿತ್ರೋತ್ಸವ ಉದ್ಘಾಟನೆ, ರಾಷ್ಟ್ರಮಟ್ಟದ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿ, ರಾಷ್ಟ್ರಮಟ್ಟದ ಆಹಾರಮೇಳ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಮತ್ತು ಯೂತ್‍ಫೆಸ್ಟಿವಲ್ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ..

ಚಿತ್ರದುರ್ಗ : ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಇದೇ ತಿಂಗಳು 8 ರಿಂದ 18ರವರೆಗೆ ನಡೆಯಲಿರುವ ಡಾ. ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ತೃತೀಯ ದಶಮಾನೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವ 2021ರ ಲೋಗೋ ಮತ್ತು ಆಹ್ವಾನ ಪತ್ರಿಕೆಯನ್ನ ಡಾ. ಶಿವಮೂರ್ತಿ ಮುರುಘಾ ಶರಣರು ಬಿಡುಗಡೆಗೊಳಿಸಿದರು.

ಶರಣ ಸಂಸ್ಕೃತಿ ಉತ್ಸವ 2021
  • ಅಕ್ಟೋಬರ್ 8 ರಂದು ಬೈಕ್ ರ‍್ಯಾಲಿ, ರಾಜ್ಯಮಟ್ಟದ ಜನಪದ ಕಲೆಗಳ ಸ್ಪರ್ಧೆ, ಚಲನಚಿತ್ರೋತ್ಸವ ಉದ್ಘಾಟನೆ, ರಾಷ್ಟ್ರಮಟ್ಟದ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಹೊನಲು- ಬೆಳಕಿನ ವಾಲಿಬಾಲ್ ಪಂದ್ಯಾವಳಿ, ರಾಷ್ಟ್ರಮಟ್ಟದ ಆಹಾರಮೇಳ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಮತ್ತು ಯೂತ್‍ಫೆಸ್ಟಿವಲ್ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ.
  • ಅಕ್ಟೋಬರ್​​ 9ರಂದು ರಾಜ್ಯಮಟ್ಟದ ಕೋಲಾಟ ಸ್ಪರ್ಧೆ, ವಾಲಿಬಾಲ್ ಪಂದ್ಯಾವಳಿ ಜರುಗಲಿವೆ.
  • ಅಕ್ಟೋಬರ್ 10ರಂದು ದಕ್ಷಿಣ ರಾಜ್ಯಗಳ ಮೌಂಟೆನ್ ಬೈಕ್‍ರ್ಯಾಲಿ, ರಾಜ್ಯಮಟ್ಟದ ಭಜನಾ ಸ್ಪರ್ಧೆ, ವಾಲಿಬಾಲ್ ಪಂದ್ಯಾವಳಿ ಜರುಗಲಿವೆ.
  • ಅಕ್ಟೋಬರ್ 11ರಂದು ಚಿತ್ರದುರ್ಗ ಸ್ಥಳೀಯ ಮಹಿಳೆಯರ ಕ್ರೀಡಾಕೂಟ, ವಾಲಿಬಾಲ್ ಪಂದ್ಯಾವಳಿ ಜರುಗಲಿವೆ.
  • ಅಕ್ಟೋಬರ್ 12ರಂದು ರಾಜ್ಯಮಟ್ಟದ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ, ಸ್ವಾತಂತ್ರ್ಯ ಅಮೃತ ಮಹೋತ್ಸವ, ಬಸವಕೇಂದ್ರ ಪದಾಧಿಕಾರಿಗಳ ಸಮಾವೇಶ, ಕ್ರೀಡಾಕೂಟ ಮತ್ತು ಆಹಾರ ಮೇಳ ಸಮಾರೋಪ ಸಮಾರಂಭಗಳು ನಡೆಯಲಿವೆ.
  • ಅಕ್ಟೋಬರ್ 13ರಂದು ಸಾಲುಮರದ ತಿಮ್ಮಕ್ಕ ಬಸವತತ್ವ ಧ್ವಜಾರೋಹಣ ನೆರವೇರಿಸುವರು. ಸಹಜ ಶಿವಯೋಗ, ಕೃಷಿಮೇಳ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಮುರುಘಾಶ್ರೀ ಹಾಗೂ ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ ಪ್ರದಾನ ಜರುಗಲಿವೆ.
  • ಅಕ್ಟೋಬರ್ 14ರಂದು ಮಹಿಳಾಗೋಷ್ಠಿ, ಸಿಪಿಆರ್ ತರಬೇತಿ ಆರೋಗ್ಯಮೇಳ ಸಮಾರೋಪ, ಯುವಮೇಳ ನಡೆಯಲಿದೆ.
  • ಅಕ್ಟೋಬರ್ 15ರಂದು ಸಹಜ ಶಿವಯೋಗ, ಶರಣ ಸಂಸ್ಕತಿ ಉತ್ಸವ ಹಾಗೂ ಜಾನಪದ ಕಲಾಮೇಳ, ಮಕ್ಕಳ ಮೇಳ, ಸಹಜ ಶಿವಯೋಗ, ಜಯದೇವ ಜಂಗೀಕುಸ್ತಿ, ಶರಣ ದಂಪತಿಗೆ ಗೌರವಾರ್ಪಣೆ, ವಿಚಾರಗೋಷ್ಠಿ ಏರ್ಪಡಿಸಲಾಗಿದೆ.
  • ಅಕ್ಟೋಬರ್ 19ರಂದು ಮಧ್ಯಾಹ್ನ 3 ಗಂಟೆಗೆ ಉಳವಿಯ ಶಾಖಾ ಶ್ರೀ ಮುರುಘಾಮಠದಲ್ಲಿ ಮಠಾಧೀಶರ ಚಿಂತನ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಮುರುಘಶ್ರೀಗಳು ತಿಳಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.