ಚಿತ್ರದುರ್ಗ: ಶಕ್ತಿ ದೇವತೆಗಳ ಸಮಾಗಮ..

author img

By

Published : Oct 1, 2021, 4:02 PM IST

navadurga-pooja

ಎಲ್ಲಾ ಶಕ್ತಿ ದೇವತೆಗಳನ್ನು ಪುಷ್ಪಗಳಿಂದ ವೈಭವಯುತವಾಗಿ ಅಲಂಕಾರ ಮಾಡಲಾಗಿತ್ತು. ಒಂಬತ್ತು ದೇವತೆಗಳನ್ನು ದುರ್ಗದ ಸಿಹಿನೀರು ಹೊಂಡದಲ್ಲಿ ಗಂಗಾ ಪೂಜಾ ಮಾಡಿ ನಗರದ ಬಿಡಿ ರಸ್ತೆ, ಸಂಗೊಳ್ಳಿ ರಾಯಣ ರಸ್ತೆ, ಗಾಂಧಿ ರಸ್ತೆ, ಎಸ್​ಬಿಐ ವೃತ್ತ, ಮದಕರಿನಾಯಕ ವೃತ್ತ ಮೂಲಕ ಹಿಂದೂ ಮಹಾಗಣಪತಿ ವೇದಿಕೆವರೆಗೂ ಮೆರವಣಿಗೆ ಮಾಡಲಾಯಿತು..

ಚಿತ್ರದುರ್ಗ : ಕೋಟೆನಾಡಿನಲ್ಲಿ ನವ ದುರ್ಗೆಯರ ಮೆರವಣಿಗೆ ಇಂದು ಅತ್ಯಂತ ಸಂಭ್ರಮದಿಂದ ಸಾಗಿತು. ಹೀಗಾಗಿ, ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಾಳೆ ನಡೆಯಲಿದೆ.

ನಗರದಲ್ಲಿ ನಡೆದ ಗಣ ಹೋಮ ಹಾಗೂ ದುರ್ಗಾ ಹೋಮದಲ್ಲಿ ಇದೇ ಪ್ರಥಮ ಬಾರಿಗೆ ಚಿತ್ರದುರ್ಗದ ಎಲ್ಲಾ ಶಕ್ತಿ ದೇವತೆಗಳು ಸಾಕ್ಷಿಯಾದರು. ನೂರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನೆರವೇರಿತು. ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ನಡೆಯಿತು.

ಉಚ್ಚಂಗಿ ಯಲ್ಲಮ್ಮ, ನಗರದೇವತೆ ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕಾಳಿಕಾಮಠೇಶ್ವರಿ, ನಲೆನಾಡು ಚೌಡೇಶ್ವರಿ, ಬಡ್ಡಾಂಬಿಕೆ, ಬನಶಂಕರಮ್ಮ, ದುರ್ಗಾದೇವಿ ಸೇರಿ ಒಂಬತ್ತು ದೇವತೆಗಳು ಪಾಲ್ಗೊಂಡಿದ್ದವು.

ಎಲ್ಲಾ ಶಕ್ತಿ ದೇವತೆಗಳನ್ನು ಪುಷ್ಪಗಳಿಂದ ವೈಭವಯುತವಾಗಿ ಅಲಂಕಾರ ಮಾಡಲಾಗಿತ್ತು. ಒಂಬತ್ತು ದೇವತೆಗಳನ್ನು ದುರ್ಗದ ಸಿಹಿನೀರು ಹೊಂಡದಲ್ಲಿ ಗಂಗಾ ಪೂಜಾ ಮಾಡಿ ನಗರದ ಬಿಡಿ ರಸ್ತೆ, ಸಂಗೊಳ್ಳಿ ರಾಯಣ ರಸ್ತೆ, ಗಾಂಧಿ ರಸ್ತೆ, ಎಸ್​ಬಿಐ ವೃತ್ತ, ಮದಕರಿನಾಯಕ ವೃತ್ತ ಮೂಲಕ ಹಿಂದೂ ಮಹಾಗಣಪತಿ ವೇದಿಕೆವರೆಗೂ ಮೆರವಣಿಗೆ ಮಾಡಲಾಯಿತು.

ನಂತರ ಒಂದೇ ವೇದಿಕೆಯಲ್ಲಿ ಮಹಾಮಂಗಳಾರತಿ ಕೂಡ ಮಾಡಲಾಯಿತು. ನೂರಾರು ಮಹಿಳೆಯರು, ಮಕ್ಕಳು ಕುಂಭ ಹೊತ್ತು ಸಾಗಿದರು. ದಾರಿಯುದ್ದಕ್ಕೂ ಒಂದರ ಹಿಂದೆ ಒಂದು ದೇವತೆಗಳು ಸಾಗಿದ್ದರಿಂದ ನೋಡುಗರ ಕಣ್ಮನ ಸೆಳೆಯಿತು.

ಓದಿ: ಮೈಸೂರು ದಸರಾ: ಆನೆ ಅಭಿಮನ್ಯುವಿಗೆ ಮರದ ಅಂಬಾರಿ ತಾಲೀಮು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.