ಚಿತ್ರದುರ್ಗ: ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ: ಪುರ ಪ್ರವೇಶಿಸಿದ ಹಿಂದೂ ಮಹಾಗಣಪತಿ

author img

By

Published : Sep 10, 2021, 4:26 PM IST

Updated : Sep 10, 2021, 4:50 PM IST

ಪುರ ಪ್ರವೇಶಿಸಿದ ಹಿಂದೂ ಮಹಾಗಣಪತಿ

ತ್ರಿಶೂಲ ಹಿಡಿದಿರುವ ಗಣೇಶ ಮೂರ್ತಿ ಸುಮಾರು ಎಂಟು ಅಡಿಗೂ ಹೆಚ್ಚು ಎತ್ತರವಿದೆ. ಇಲ್ಲಿ ಸರ್ಕಾರ ನಿಗದಿಪಡಿಸಿರುವ ಮಾನದಂಡ ಉಲ್ಲಂಘನೆಯಾಗಿದೆ ಎನ್ನಲಾಗಿದೆ.

ಚಿತ್ರದುರ್ಗ: ಜಿಲ್ಲೆಯಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ ಸಿಕ್ಕಿದೆ. ನಗರದ ಬಿ.ಡಿ.ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ ಪ್ರತಿಷ್ಠಾಪಿಸುತ್ತಿರುವ ಹಿಂದೂ ಮಹಾಗಣಪತಿ ಪುರ ಪ್ರವೇಶಿಸಿತು.

ಪುರ ಪ್ರವೇಶಿಸಿದ ಹಿಂದೂ ಮಹಾಗಣಪತಿ

ಈ ಸಂದರ್ಭದಲ್ಲಿ ಭಜರಂಗದಳ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಗಣೇಶ ಮೂರ್ತಿಯನ್ನು ಸ್ವಾಗತಿಸಿದರು. ನಗರ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಬಂದ ಮಹಾಗಣಪನಿಗೆ ಬಸವ ಮೂರ್ತಿ, ಮಾದರ ಚೆನ್ನಯ್ಯ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.

ತ್ರಿಶೂಲ ಹಿಡಿದಿರುವ ಗಣೇಶಮೂರ್ತಿ ಸುಮಾರು ಎಂಟು ಅಡಿಗೂ ಹೆಚ್ಚು ಎತ್ತರವಿದ್ದು, ಸರ್ಕಾರ ನಿಗದಿಪಡಿಸಿರುವ ಮಾನದಂಡ ಉಲ್ಲಂಘನೆಯಾಗಿದೆ ಎನ್ನಲಾಗಿದೆ.

ಶಾಸಕ ತಿಪ್ಪಾರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದ್ರಿನಾಥ್ ಸೇರಿದಂತೆ ಅನೇಕ ಸಾರ್ವಜನಿಕರು ಜೊತೆಗೂಡಿ ಗಣೇಶನ ಜಯಘೋಷ ಹಾಕಿ ಉದ್ದೇಶಿತ ಸ್ಥಳಕ್ಕೆ ಗಣಪತಿಯನ್ನು ಕರೆತಂದರು. ವಿಶೇಷ ಪೂಜಾ ಕೈಂಕರ್ಯ, ಪ್ರತಿಷ್ಠಾಪನೆ ಕಾರ್ಯ ವಿಜೃಂಭಣೆಯಿಂದ ಜರುಗಿತು. ಸಂಘ ಪರಿವಾರದವರು ಹೇಳುವ ಪ್ರಕಾರ 21ದಿನ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : ಕೇಸರಿ - ಬಿಳಿ-ಹಸಿರು ಬಣ್ಣದಲ್ಲಿ ಮೂಡಿಬಂದ ಸಾಬಕ್ಕಿ ಗಣೇಶ..

Last Updated :Sep 10, 2021, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.