ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್​ ಮಾಡುತ್ತಿದೆ, ಅದರ ನೈತಿಕ ಅಧಪತನವೇ ಪಕ್ಷದ ಸೋಲಿಗೆ ಕಾರಣ : ಸಿಎಂ

author img

By

Published : Sep 24, 2022, 9:33 PM IST

basavaraj-bommai

ಚಿತ್ರದುರ್ಗದ ಸಿರಿಗೆರೆಯಲ್ಲಿ ನಡೆದ ಲಿಂಗಕೈ ಶಿವಕುಮಾರ ಶಿವಾಚಾರ್ಯ ಶ್ರೀಗಳ 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಾಗವಹಿಸಿದ ಸಿಎಂ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದು, ದೆಹಲಿಗೆ ಹೋದಾಗ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

ಚಿತ್ರದುರ್ಗ : ಪೇ ಸಿಎಂ ವಿಚಾರದಲ್ಲಿ ಕಾಂಗ್ರೆಸ್​ ಡರ್ಟಿ ರಾಜಕಾರಣ ಮಾಡುತ್ತಿದೆ. ಯಾವುದೇ ವಿಚಾರ ಇದ್ದಲ್ಲಿ ನೇರವಾಗಿ ಮಾತನಾಡ ಬೇಕು ಇಲ್ಲಾ ದಾಖಲೆಗಳನ್ನು ಕೊಟ್ಟು ತನಿಖೆ ಮಾಡಿಸಬೇಕು. ಇದು ನೈತಿಕತೆಯ ಅಧಪತನವನ್ನು ಕಾಂಗ್ರೆಸ್​ ತೊರುತ್ತಿದೆ. ಸದನದಲ್ಲೂ ಯಾವುದೇ ಸಂಪೂರ್ಣ ಮಾಹಿತಿ ಇಲ್ಲದೇ, ಜನ ಪರ ಕಾಳಜಿ ಇಲ್ಲದ ರೀತಿ ಕಾಂಗ್ರೆಸ್​ ನಡೆದು ಕೊಂಡಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ದೂರಿದರು.

ಇಲ್ಲಿನ ಸಿರಿಗೆರೆ ಗ್ರಾಮದಲ್ಲಿ ನಡೆದ ಲಿಂಗಕೈ ಶಿವಕುಮಾರ ಶಿವಾಚಾರ್ಯ ಶ್ರೀಗಳ 30ನೇ ಶ್ರದ್ಧಾಂಜಲಿ ಸಮಾರಂಭ ಭಾಗವಹಿಸಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದರು. ಸುಧಾಕರ್​ ಅವರು ನೀಡಿದ್ದ ಲಿಂಗಾಯತ ಸಿಎಂ ಟಾರ್ಗೆಟ್​ ವಿಚಾರಕ್ಕೆ, ನಾನು ಅದರ ಭಾಗ ಅಲ್ಲ ಕಮೆಂಟ್​ ಮಾಡಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚಿಂತನೆ ಇದೆ ಎಂದು ಈ ವೇಳೆ ಮತ್ತೆ ಹಿಂಟ್​ ಕೊಟ್ಟರು. ದೆಹಲಿಗೆ ಹೋದಾಗ ಈ ಬಗ್ಗೆ ಚರ್ಚಿಸಿ ತಿರ್ಮಾನ ಮಾಡಲಾಗುವುದು ಎಂದರು.

ಕಾಂಗ್ರೆಸ್​ನ ನೈತಿಕ ಅಧಪ ತನವೇ ಪಕ್ಷದ ಸೋಲಿಗೆ ಕಾರಣವಾಗುತ್ತದೆ.

ರಾಜ್ಯದಲ್ಲಿ ಪಿಎಫ್​ಐಯಿಂದ ಚಟುವಟಿಕೆ ಹೆಚ್ಚಗಿರುವುದರ ಬಗ್ಗೆ ಉತ್ತರಿಸಿ, ಈ ಬಗ್ಗೆ ಎನ್​ಐಎ ಮತ್ತು ರಾಜ್ಯ ಪೊಲೀಸ್​ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದ ಅವರು ಚುನಾವಣಾ ಸಮೀಕ್ಷೆಯ ಕುರಿತಾದ ಪ್ರಶ್ನೆಗೆ, ಸಮೀಕ್ಷೆಗಳು ಏನು ಹೇಳುತ್ತವೆ ಎಂಬುದು ಮುಖ್ಯ ಅಲ್ಲ, ಜನರ ನಾಡಿ ಮಿಡಿತದಲ್ಲಿ ನಮಗೆ ತಿಳಿಯುತ್ತದೆ. ಈ ಬಾರಿಯೂ ಬಿಜೆಪಿಯೇ ನೂರಕ್ಕೆ ನೂರು ಅಧಿಕಾರಕ್ಕೆ ಬರುವುದು ಎಂದು ಹೇಳಿದರು.

ಇದನ್ನೂ ಓದಿ : ರಾಜಕಾರಣಿಗಳು ಭ್ರಷ್ಟರಲ್ಲ, ವ್ಯವಸ್ಥೆ ನಮ್ಮನ್ನು ಕೆಡಿಸ್ತಿದೆ: ಸಚಿವ ಮಾಧುಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.