ಎರಡು ಮದುವೆಯಾಗಿದ್ದವಳ ಜೊತೆ ಲವ್ವಿ ಡವ್ವಿ: ಮತ್ತೊಬ್ಬನ ಜೊತೆ ರಂಗಿನಾಟ ಆಡಿದ್ದಕ್ಕೆ ಯುವಕ ಆತ್ಮಹತ್ಯೆ

author img

By

Published : Aug 19, 2021, 10:23 PM IST

ಎರಡು ಮದುವೆಯಾಗಿದ್ದವಳ ಜೊತೆ ಲವ್ವಿ ಡವ್ವಿ

ತಾಲೂಕಿನ ಪಟ್ರೆಹಳ್ಳಿ ‌ಗ್ರಾಮದ ಗೃಹಸ್ಥೆಯೊಬ್ಬಳು ಎರಡು ಮದುವೆಯಾಗಿದ್ದರೂ ನಂಜುಂಡಸ್ವಾಮಿ ಎಂಬಾತನನ್ನು ತನ್ನ ಪ್ರೀತಿ ಪಾಶಕ್ಕೆ ಬೀಳಿಸಿಕೊಂಡಿದ್ದಳು ಎನ್ನಲಾಗಿದೆ. ಇಷ್ಟಾದರೂ ಸುಮ್ಮನಾಗದ ಈಕೆ ಮತ್ತೊಬ್ಬನ ಸಂಗ ಮಾಡಿದ್ದಾಳೆ ಎನ್ನಲಾಗಿದೆ. ಈ ಹಿನ್ನೆಲೆ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿತ್ರದುರ್ಗ : ಪ್ರೀತಿ ಪ್ರೇಮ ಎಂದು ನಂಬಿಹೋಗಿದ್ದ ಪ್ರೇಮಿಯೊಬ್ಬ ಪ್ರೀತಿಗಾಗಿ ತಮ್ಮ ಜಮೀನನ್ನೇ ಮಾರಿ, ಸಾಲಮಾಡಿಕೊಂಡು ಇದೀಗ ಪ್ರೀತಿ ವೈಫಲ್ಯ ಕಂಡ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.

ಮತ್ತೊಬ್ಬನ ಜೊತೆ ರಂಗಿನಾಟ ಆಡಿದ್ದಕ್ಕೆ ಯುವಕ ಆತ್ಮಹತ್ಯೆ
ಮತ್ತೊಬ್ಬನ ಜೊತೆ ರಂಗಿನಾಟ ಆಡಿದ್ದಕ್ಕೆ ಯುವಕ ಆತ್ಮಹತ್ಯೆ

ಗ್ರಾಮದ ನಂಜುಂಡಸ್ವಾಮಿ (30) ಮೃತ ಪ್ರೇಮಿ. ಈತ ಸಾಯುವ ಮುನ್ನ ಗೃಹಸ್ಥೆಯ ಜೊತೆಗಿರುವ ಪೋಟೋ, ವಾಟ್ಸ್​​​ಆ್ಯಪ್​ ವಿಡಿಯೋ ಕಾಲ್ ಹಾಗೂ ಆಕೆಯ ಜೊತೆಗೆ ವಾಟ್ಸ್​​ಆ್ಯಪ್​​ ಚಾಟ್ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.

ತಾಲೂಕಿನ ಪಟ್ರೆಹಳ್ಳಿ ‌ಗ್ರಾಮದ ಗೃಹಸ್ಥೆ ಎರಡು ಮದುವೆಯಾಗಿದ್ರೂ ನಂಜುಂಡಸ್ವಾಮಿಯನ್ನ ಪ್ರೀತಿ ಪಾಶಕ್ಕೆ ಬೀಳಿಸಿಕೊಂಡಿದ್ದಳು ಎನ್ನಲಾಗಿದೆ. ಚಿನ್ನ, ರನ್ನ ಎಂದುಕೊಂಡೇ ಮೂರು ವರ್ಷಗಳ ಹಿಂದೆ ಯಾರಿಗೂ ತಿಳಿಯದಂತೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಇವರಿಬ್ಬರೂ ಮದುವೆ ಕೂಡ ಆಗಿದ್ದರು ಎನ್ನಲಾಗಿದೆ.

ಇದಾದ ನಂತರ ಈಕೆ ಮತ್ತೆ ಮತ್ತೊಬ್ಬನ ಸ್ನೇಹ ಮಾಡಿದ್ದಳು ಎಂದು ತಿಳಿದು ಬಂದಿದೆ. ಈಕೆಯ ರಂಗಿನಾಟದ ವಿಚಾರ ತಿಳಿಯುತ್ತಿದ್ದಂತೆ ಮೊಸಹೋದೆ ಎಂದು ಅರಿತು ನಂಜುಂಡಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ಇವಳೇ ಕಾರಣ ಜೊತೆಗೆ ನನ್ನ ಸಾಲಗಾರನನ್ನಾಗಿ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ. ವಿಷಯ ತಿಳಿದ ತಕ್ಷಣ ಹಿರಿಯೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.