ಚಿಕ್ಕಮಗಳೂರು: ಜನರ ನಿದ್ದೆಗೆಡಿಸಿದ ಕಾಡಾನೆ ಕೊನೆಗೂ ಸೆರೆ
Updated on: Nov 29, 2022, 12:15 PM IST

ಚಿಕ್ಕಮಗಳೂರು: ಜನರ ನಿದ್ದೆಗೆಡಿಸಿದ ಕಾಡಾನೆ ಕೊನೆಗೂ ಸೆರೆ
Updated on: Nov 29, 2022, 12:15 PM IST
ಚಿಕ್ಕಮಗಳೂರಿನ ಕುಂಡ್ರ ಎಂಬ ಅರಣ್ಯ ಪ್ರದೇಶದಲ್ಲಿ ಒಂದು ಆನೆಯನ್ನು ಸೆರೆ ಹಿಡಿಯಲಾಗಿದೆ.
ಚಿಕ್ಕಮಗಳೂರು: ಪುಂಡಾಟ ನಡೆಸುತ್ತಿದ್ದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದು ಮೂಡಿಗೆರೆ ತಾಲೂಕಿನ ಜನರು ಕೊಂಚ ನಿರಾಳರಾಗಿದ್ದಾರೆ. ತಾಲ್ಲೂಕಿನ ಕುಂದೂರು, ಕೆಂಜಿಗೆ ಭಾಗದಲ್ಲಿ ಮೂರು ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ.
ಮೊದಲ ದಿನ ಬೆಳಗೋಡು ಸಮೀಪದ ಕುಂಡ್ರ ಎಂಬಲ್ಲಿ ಒಂದು ಆನೆ ಸೆರೆಯಾಗಿದೆ. ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆಯಾಗಿರುವ ಕಾಡಾನೆಯ ಗಾತ್ರ ಸಣ್ಣದಾಗಿದೆ. ಈಗ ಸೆರೆಯಾಗಿರುವ ಕಾಡಾನೆಯನ್ನು ಎರಡು ಸಾಕಾನೆಗಳ ಸುಪರ್ದಿಯಲ್ಲಿ ನಾಗರಹೊಳೆಯ ದುಬಾರೆ ಆನೆಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ.
ಎರಡು ದಿನಗಳ ಬಿಡುವಿನ ಬಳಿಕ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ. ಕಳೆದ ಕೆಲ ತಿಂಗಳಲ್ಲಿ ಮೂರು ಜನರನ್ನು ಕಾಡಾನೆಗಳು ಬಲಿ ಪಡೆದಿವೆ. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಕಾಫಿ ತೋಟಗಳಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಪುಂಡಾನೆ ಸೆರೆ.. ನಿಟ್ಟುಸಿರು ಬಿಟ್ಟ ಜನ
