ಸಿ ಟಿ ರವಿ ವಿರುದ್ಧ ಕಾಂಗ್ರೆಸ್ ಮುಖಂಡ ತಾಳಿಕಟ್ಟೆ ಲೋಕೇಶ್ ವಾಗ್ದಾಳಿ
Updated on: Dec 4, 2022, 6:55 PM IST

ಸಿ ಟಿ ರವಿ ವಿರುದ್ಧ ಕಾಂಗ್ರೆಸ್ ಮುಖಂಡ ತಾಳಿಕಟ್ಟೆ ಲೋಕೇಶ್ ವಾಗ್ದಾಳಿ
Updated on: Dec 4, 2022, 6:55 PM IST
ಶಾಸಕ ಸಿ ಟಿ ರವಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಸಿ ಟಿ ರವಿ ಚುನಾಯಿತ ಪ್ರತಿನಿಧಿಯಾಗುವ ಮುನ್ನ ಸಂಘ ಸಂಸ್ಥೆಗಳ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡುತ್ತ ಪೋಲಿ ರವಿ ಆಗಿದ್ದವರು ಎಂದು ಕಾಂಗ್ರೆಸ್ ಮುಖಂಡ ತಾಳಿಕಟ್ಟೆ ಲೋಕೇಶ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು: ಸಿ ಟಿ ರವಿ ಅಲ್ಲ ಲೂಟಿ ರವಿ, ಸಿ ಟಿ ರವಿ ಅವಕಾಶವಾದಿ ರಾಜಕಾರಣಿ, ಸಿ ಟಿ ರವಿ ಹಿಟ್ ಆ್ಯಂಡ್ ರನ್ ರವಿ ಎಂದು ಕಾಂಗ್ರೆಸ್ ಮುಖಂಡ ತಾಳಿಕಟ್ಟೆ ಲೋಕೇಶ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಸಿ ಟಿ ರವಿ ಚುನಾಯಿತ ಪ್ರತಿನಿಧಿಯಾಗುವ ಮುನ್ನ ಸಂಘ ಸಂಸ್ಥೆಗಳ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡುತ್ತ ಪೋಲಿ ರವಿ ಆಗಿದ್ದವರು ಎಂದು ಆರೋಪಿಸಿದರು.
ನಂತರ ಮಾತನಾಡಿ ಇಂದು ನೂರಾರು ಕೋಟಿಯ ಒಡೆಯ ಆಗಿರುವುದು ಲೂಟಿಯಿಂದ ಮಾತ್ರ ಸಾಧ್ಯವಾಗಿದೆ. ಕೇವಲ ಮಾತಿನಲ್ಲಿ ಅಭಿವೃದ್ಧಿ ತೋರಿಸುತ್ತ ನಾಟಕ ವಾಡುತ್ತಿದ್ದಾರೆ. ಒಂದು ದೇಶ-ಒಂದು ಭಾಷೆ ಹೆಸರಿನಲ್ಲಿ ಹಿಂದಿ ಭಾಷೆಗೆ ಮಹತ್ವ ಕೊಡುವ ಮೂಲಕ ಕನ್ನಡ ಭಾಷೆಯನ್ನು ಕಡೆಗಣಿಸಿ ಸಿ ಟಿ ರವಿ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನ ಬಿಡಬೇಕು ಎಂದು ಹೇಳಿದರು.
ಅವರ ಈ ರೀತಿ ಹೇಳಿಕೆ ಸಣ್ಣತನ ತೋರುತ್ತದೆ. ಇನ್ಮುಂದಾದರು ಅವರು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ತಾಳಿಕಟ್ಟೆ ಲೋಕೇಶ್ ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ:ದತ್ತಪೀಠಕ್ಕೆ ಅರ್ಚಕರ ನೇಮಿಸಿದ ಸರ್ಕಾರ: ಚಿಕ್ಕಮಗಳೂರಿನಲ್ಲಿ ಸಂಭ್ರಮಾಚರಣೆ
