ಚಿಕ್ಕಬಳ್ಳಾಪುರದಲ್ಲಿ ಬೈಕ್ ಸ್ಕಿಡ್​ ಆಗಿ ರಸ್ತೆಗೆ ಬಿದ್ದ ಸವಾರ.. ತಲೆ ಮೇಲೆ ಹರಿದ ಸಾರಿಗೆ ಬಸ್​​

author img

By

Published : Sep 22, 2022, 5:51 PM IST

youth-died-in-bike-accident-in-chikkaballapura

ಬೈಕ್ ಸ್ಕಿಡ್​ ಆಗಿ ರಸ್ತೆಗೆ ಬಿದ್ದ ವ್ಯಕ್ತಿಯ ತಲೆಯ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ : ಬೈಕ್ ಸ್ಕಿಡ್​ ಆಗಿ ರಸ್ತೆಗೆ ಬಿದ್ದ ಬೈಕ್ ಸವಾರನ ತಲೆ ಮೇಲೆ ಬಸ್ ಚಕ್ರ ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಬಿಬಿ ರಸ್ತೆಯಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ಅತ್ತಿಬೆಲೆ ಗ್ರಾಮದ ಮುರುಳಿ ಮೃತವ್ಯಕ್ತಿ ಎಂದು ತಿಳಿದುಬಂದಿದೆ.

ಬೈಕ್ ಸ್ಕಿಡ್​ ಆಗಿ ರಸ್ತೆಗೆ ಬಿದ್ದ ಸವಾರ.. ತಲೆ ಮೇಲೆ ಹರಿದ ಸಾರಿಗೆ ಬಸ್​​

ದೇವನಹಳ್ಳಿ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ತನ್ನ ಹೊಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದ ಮುರಳಿ, ಗಿರಿಯಾಸ್ ಶೋ ರೂಂ ಮುಂಭಾಗದಲ್ಲಿ ಏಕಾಏಕಿ ಬ್ರೇಕ್ ಹಾಕಿದ್ದಾರೆ. ತಕ್ಷಣ ಗಾಡಿ ಸ್ಕಿಡ್ ಆಗಿದ್ದು ಮುರುಳಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ಸಂದರ್ಭ ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಕಡೆಗೆ ಹೋಗುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್‍ನ ಹಿಂಬದಿ ಚಕ್ರಕ್ಕೆ ಮುರಳಿ ತಲೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಈ ವಿಷಯ ಬಸ್​ ಚಾಲಕನಿಗೆ ಗೊತ್ತಾಗದೇ ನಿಲ್ಲಿಸದೇ ತೆರಳಿದ್ದಾನೆ. ಬಳಿಕ ಸ್ಥಳೀಯರು ಸರ್ಕಾರಿ ಬಸ್​ ಅನ್ನು ತಡೆದಿದ್ದಾರೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ಪೊಲೀಸ್​​​ ಸೇರಿ ಮೂವರ ಸಾವು.. ಹಲವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.